Petrol Pump Fraud: 99% ಜನ ಈ ಕಾರಣಕ್ಕಾಗಿಯೇ ಪೆಟ್ರೋಲ್ ಪಂಪ್ ನಲ್ಲಿ ಮೋಸ ಹೋಗ್ತಾರೆ! ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ

Petrol Pump Fraud: ಮೊದಲೇ ಪೆಟ್ರೋಲ್ ಬೆಲೆ ದುಬಾರಿ. ಸಾಮಾನ್ಯವಾಗಿ ಪೆಟ್ರೋಲ್ ರೇಟ್ ಬಂಕ್ ಬಂಕ್ ಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ವಾಹನ ಸವಾರರು ಯಾವ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸೋದು ಅಂತಾ ಚಿಂತಿಸುವ ಪರಿಸ್ಥಿತಿ ಆಗಿದೆ. ಇನ್ನು ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದಿಗೂ ಮೋಸ (Petrol Pump Fraud) ನಡೆಯುವ ಬಗ್ಗೆ ವಾಹನ ಸವಾರರಿಂದ ಆರೋಪಗಳು ಕೇಳಿ ಬರುತ್ತವೆ. ಅದಕ್ಕಾಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಹೇಗೆಲ್ಲ ಮೋಸ ನಡೆಯುತ್ತದೆ. ಅದರಿಂದ ನೀವು ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಟ್ರಿಕ್ಸ್‌ ಇಲ್ಲಿದೆ ಓದಿ.

ನೀವು ಮೋಸ ಹೋಗಬಾರದು ಎಂದರೆ ನೀವು ಪೆಟ್ರೋಲ್‌ ಅಥವಾ ಡೀಸೆಲ್ ಹಾಕಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಎಲ್ಲಾ ಪೆಟ್ರೋಲ್‌ ಬಂಕ್‌ನಲ್ಲಿ ಇರುವ ಕೆಲಸದವರು ಕಳ್ಳರು, ಎಲ್ಲರೂ ಮೋಸ ಮಾಡ್ತಾರೆ ಎನ್ನುವುದು ಇದರ ಅರ್ಥವಲ್ಲ. ಹತ್ತು ಜನರಲ್ಲಿ ಒಬ್ಬ ಕಳ್ಳ ಇರುತ್ತಾನೆ. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.

ಜೀರೋ ಮಾಡಿಯೇ ಹಾಕಿಸಿ: ಪೆಟ್ರೋಲ್‌ ಅಥವಾ ಡೀಸೆಲ್ ಹಾಕಿಸುವಾಗ ಯಾವುದೇ ಕಾರಣಕ್ಕೂ ಜೀರೋ (ಬೋರ್ಡ್‌ನಲ್ಲಿ ಸೊನ್ನೆ) ಇಲ್ಲದೆ ಪೆಟ್ರೋಲ್‌ ಹಾಕುವುದಕ್ಕೆ ಬಿಡಬೇಡಿ. ಮುಂದೆ ಇದ್ದ ವಾಹನಕ್ಕೆ ನೂರು ರೂಪಾಯಿ ಹಾಕಿದ್ದೀನಿ ಸರ್‌. ನಿಮ್ಗೆ ಸೇರಿಸಿ ಹಾಕ್ತೀನಿ ಅಂತ ಹೇಳುವುದು ಇದೆ. ಅದಕ್ಕೆ ನೀವು ಒಪ್ಪಬೇಡಿ ಇದರಲ್ಲೂ ಕೆಲವೊಂದು ಟ್ರಿಕ್ಸ್‌ಗಳಿವೆ. ಹೀಗಾಗಿ, ಜೀರೋದಿಂದಲೇ ಹಾಕಿಸಿಕೊಳ್ಳಿ.

ಉದಾಹರಣೆ ಗೆ ಪೆಟ್ರೋಲ್ ಬಂಕ್‌ಗೆ ಹೋಗಿ ನೀವು 600 ರೂಪಾಯಿಗೆ ಪೆಟ್ರೋಲ್ ಅಥವಾ ಡಿಸೇಲ್ ಹಾಕಿ ಅಂತ ಕೇಳ್ತೀರಿ ಅಂತ ಇಟ್ಟುಕೊಳ್ಳಿ.ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ನಿಮಗೆ ಮೊದಲು 300 ರೂಪಾಯಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕ್ತಾನೆ. ಸರ್‌ 300 ಆಗಿದೆ ನೋಡಿ ಅಂತಾನೆ. 300 ಅಲ್ಲ ಕಣ್ರೀ 600 ಹಾಕ್ರಿ ಅಂದ್ರೆ ಮೊದಲಿಂದ ಮೀಟರ್ ಚಲಾಯಿಸದೆ, 300 ಆಗಿದೆ ಸರ್‌ ಬಾಕಿ 300 ರೂ.ಗೆ ಹಾಕುತ್ತೇನೆ ಎಂದು ಬಾಕಿ ಹಣಕ್ಕೆ ಪೆಟ್ರೋಲ್ ಅಥವಾ ಡೀಸೆಲ್‌ ಹಾಕುತ್ತಾನೆ. ಅವನು ಜೀರೋ ಮಾಡಿದ್ರೆ ಮಾತ್ರ ಬಾಕಿ 300 ರೂಪಾಯಿ ಆಗುತ್ತದೆ. ಜೀರೋ ಆಗಿಲ್ಲ ಅಂದ್ರೆ ಒಟ್ಟು ತೋರಿಸುವಾಗ (ಬೋರ್ಡ್‌ನಲ್ಲಿ) 600 ಆಗಬೇಕು. ಇದನ್ನು ನೀವು ಗಮನವಿಟ್ಟು ನೋಡಿಕೊಳ್ಳಬೇಕು. ಈ ರೀತಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದರೆ, ಸಾಕು ಬಿಡಿ ಅನ್ನಿ. ಇಲ್ಲವೇ ಜೀರೋ ಮಾಡಿ ಮೊದಲಿಂದ ಹಾಕಿ ಅಂತ ಕೇಳಿ. ಇದರಲ್ಲಿ ಕೆಲವೊಮ್ಮೆ ತಪ್ಪಾಗಿ ಕೇಳಿಸಿಕೊಂಡು ಸಹ ಹಾಕಿರುವ ಸಾಧ್ಯತೆ ಇರಬಹುದು. ಒಮ್ಮೆಗೆ ಒಂದು ನಿರ್ಧಾರಕ್ಕ ಬರಬೇಡಿ. ಆದರೆ, ಪರಿಶೀಲನೆ ಮಾಡಿ.

ದುಡ್ಡು ಲೆಕ್ಕದಲ್ಲೂ ಮೋಸ: 

ನೀವು ಸಾವಿರ ರೂಪಾಯಿ ಕೊಟ್ಟು 200 ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸಿಕೊಂಡಿದ್ದೀರಿ ಎಂದರೆ, ಬಾಕಿ 800 ರೂಪಾಯಿ ಕೊಡ್ಬೇಕಲ್ವಾ. ಕೆಲವೊಮ್ಮೆ ಅವರು 700 ಅಥವಾ 600 ರೂಪಾಯಿ ಮಾತ್ರ ಕೊಡ್ತಾರೆ. ನೂರು ರೂಪಾಯಿ ನೋಟುಗಳನ್ನು ಎಣಿಸುವಾಗ ವೇಗವಾಗಿ ಇನ್ನೂರು ಮುನ್ನೂರು ಅಂತಾರೆ. ಒಂದು ನೋಟ ಎಗರಿಸಿ ಲೆಕ್ಕ ಜೋರಾಗಿ ಹೇಳ್ತಾರೆ ಕಣ್ಣ ಮುಂದೆ ನೋಡಿದ್ದು ತಾನೆ ಸರಿ ಇರುತ್ತೆ ಅಂತ ಎಣಿಸದೆ ಜೋಬಿಗೆ ಇಳಿಸಿದರೆ, ನಿಮಗೆ ನೂರು ಅಥವಾ ಇನ್ನೂರು ಲಾಸ್‌ ಫಿಕ್ಸ್‌. ಇದು ಪೆಟ್ರೋಲ್‌ ಬಂಕ್‌ಗಳಲ್ಲಿ ಮಾತ್ರವಲ್ಲ ಹಲವು ಜಾಗದಲ್ಲಿ ನಡೆಯುತ್ತೆ.

ಎರಡು ವ್ಯತ್ಯಾಸ ಗಮನಿಸಿ: 

ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲೂ ಪೆಟ್ರೋಲ್‌ ಅಥವಾ ಡೀಸೆಲ್‌ ಪ್ರಮಾಣ ಹಾಗೂ ಬೆಲೆಯ ಎರಡು ಕಾಲಂ ಇರುತ್ತದೆ. ಈ ಎರಡೂ ಕಾಲಂ ಹಾಗೂ ವ್ಯತ್ಯಾಸವನ್ನು ನೀವು ಗಮನಿಸಬೇಕು. ಕೆಲವರು ಬೆಲೆ ಹಾಗೂ ಪೆಟ್ರೋಲ್‌ ಅಥವಾ ಡೀಸೆಲ್‌ ಪ್ರಮಾಣದ ವ್ಯತ್ಯಾಸದಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಇದನ್ನೇ ಕೆಲವು ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಲಾಭವಾಗಿಸಿಕೊಳ್ಳುತ್ತಾರೆ. ಒಂದೆರಡು ಕ್ಷಣ ಕಣ್ತಪ್ಪಿದರೂ ಬೆಲೆ ಫೀಡ್‌ ಮಾಡಿ ಆಗಿದೆ ಅಂತಾರೆ. ನಿಮಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿದ ಮೇಲೆ ಬೆಲೆ ಬ್ಲಿಂಕ್‌ ಆಗಲ್ಲ. ಒಂದೇ ರೀತಿ ಇರುತ್ತೆ. ಬೆಲೆ ಸಂಖ್ಯೆ ಬ್ಲಿಂಕ್‌ ಆಗ್ತಿದೆ ಎಂದರೆ ಸಿಬ್ಬಂದಿಯೇ ಫೀಡ್‌ ಮಾಡಿದ್ದಾರೆ ಅಂತ ಅರ್ಥ.

ಕೋಡ್‌ ವರ್ಡ್‌ : 

ಒಬ್ಬ ಗ್ರಾಹಕನಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕುವುದಕ್ಕೆ ಒಬ್ಬರು ಮೂವರು ಸಿಬ್ಬಂದಿ ಬಂದು ನಿಂತಿದ್ದಾರೆ ಎಂದರೆ ಮೋಸ ಮಾಡುವ ಮುನ್ಸೂಚನೆ ಆಗಿರುವ ಸಾಧ್ಯತೆ ಇರುತ್ತದೆ. ಆದರೆ, ಶೇ99.99% ರಷ್ಟು ಬಂಕ್‌ಗಳ ಮಾಲೀಕರಿಗೆ ಅವರ ಸಿಬ್ಬಂದಿ ಗ್ರಾಹಕರಿಗೆ ಮೋಸ ಮಾಡ್ತಾರೆ ಅಂತ ಗೊತ್ತಿರಲ್ಲ. ಕೆಲವು ಸಿಬ್ಬಂದಿ ಮೋಸ ಮಾಡಿ, ಆ ಹಣವನ್ನು ಅವರ ಜೇಬಿಗೆ ಹಾಕುತ್ತಾರೆ ಎನ್ನಲಾಗುತ್ತದೆ. ಮೇಲೆ ಹೇಳಿದ ಎಲ್ಲವೂ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಎಲ್ಲರೂ ಮಾಡುವುದಿಲ್ಲ. ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲವು ಸಿಬ್ಬಂದಿ ಮಾಡುವುದು ಇದೆ ಎನ್ನುವ ಆರೋಪ ಇದೆ.

Leave A Reply

Your email address will not be published.