SIM card: ಸಿಮ್ ಕಾರ್ಡ್, ನೆಟ್‌ವರ್ಕ್ ಇಲ್ಲದೆಯೂ ಕಾಲ್ ಮಾಡಲು ಸಾಧ್ಯ: ಹೇಗೆಂದು ನೀವೂ ತಿಳಿಯಿರಿ

SIM card: ಇನ್ನು ಮುಂದೆ ಯಾವುದೇ ಸಿಮ್ ಕಾರ್ಡ್ (SIM card) ಅಥವಾ ನೆಟ್‌ವರ್ಕ್ ಇಲ್ಲದೆಯೂ ಸಹ ಕರೆ ಮಾಡಬಹುದು. ಹೌದು, ಈ ಕುರಿತು ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ. ಬಳಕೆದಾರರು ಈಗ ಯಾವುದೇ ಸಿಮ್ ಕಾರ್ಡ್ ಅಥವಾ ನೆಟ್‌ವರ್ಕ್ ಇಲ್ಲದೆಯೇ ಆಡಿಯೋ-ವೀಡಿಯೋ ಕರೆ ಮಾಡಬಹುದು.

ಮುಖ್ಯವಾಗಿ ಸರ್ಕಾರಿ-ಚಾಲಿತ ಟೆಲಿಕಾಂ ಕಂಪನಿಯ ಈ ಹೊಸ ತಂತ್ರಜ್ಞಾನವು ಬಳಕೆದಾರರಿಗೆ ಅವರ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಅಥವಾ ಇತರ ಸ್ಮಾರ್ಟ್ ಸಾಧನಗಳಲ್ಲಿ ಸಂಪರ್ಕವನ್ನು ಒದಗಿಸುತ್ತದೆ. ಈ ಅದ್ಭುತ ಪ್ರಯೋಗ ಅನೇಕ ಜನರಿಗೆ ಸಹಕಾರಿ ಆಗಲಿದೆ.

BSNL ಮತ್ತು Viasat ಕಮ್ಯುನಿಕೇಷನ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ಇಲ್ಲದೆ ಕರೆ ಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸುತ್ತದೆ. ಜೊತೆಗೆ , ಇತರ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸಹ ತಮ್ಮ ಉಪಗ್ರಹ ಸಂಪರ್ಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಡೈರೆಕ್ಟ್-ಟು-ಡಿವೈಸ್ ಎನ್ನುವುದು ಉಪಗ್ರಹ ಸಂವಹನವನ್ನು ಆಧರಿಸಿದ ಸಂಪರ್ಕ ಸೇವೆಯಾಗಿದೆ, ಇದರಲ್ಲಿ ಯಾವುದೇ ಮೊಬೈಲ್ ಟವರ್‌ಗಳು ಅಥವಾ ವೈರ್‌ಗಳಿಲ್ಲದೆ ಒಂದು ಸಾಧನವನ್ನು ಇನ್ನೊಂದಕ್ಕೆ ಸಂಪರ್ಕಿಸಬಹುದು. 

ಮುಖ್ಯವಾಗಿ ಸರ್ಕಾರಿ ಟೆಲಿಕಾಂ ಕಂಪನಿ ನಡೆಸಿದ ಈ ಪ್ರಯೋಗದಲ್ಲಿ 36 ಸಾವಿರ ಕಿಲೋಮೀಟರ್ ದೂರದಿಂದ ಉಪಗ್ರಹ ನೆಟ್ ವರ್ಕ್ ಬಳಸಿ ಫೋನ್ ಕರೆಗಳನ್ನು ಮಾಡಲಾಗಿತ್ತು. ಕಂಪನಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಒಟ್ಟಾರೆ ಈ ಮಹತ್ವದ ಕಾರ್ಯ ಜನರಿಗೆ ತುಂಬಾ ಉಪಯುಕ್ತವಾಗಿದೆ.

Leave A Reply

Your email address will not be published.