CCB Police: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಾರಿನಲ್ಲಿ ಬರೋಬ್ಬರಿ 2.73 ಕೋಟಿ ರು. ಪತ್ತೆ
CCB Police: ಬೆಳಗಾವಿ(Belagavi) ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ(NH) ಮೂಲಕ ಗೂಡ್ಸ್ ವಾಹನ(goods Vehicle) ಮೂಲಕ ಮಹಾರಾಷ್ಟ್ರದಿಂದ(Maharashtra) ಕೇರಳಕ್ಕೆ(Kerala) ಹೋಗುತ್ತಿದ್ದ ಕೋಟ್ಯಾಂತರ ಹಣ ಜಪ್ತಿ(Forfeiture of money) ಮಾಡಲಾಗಿದೆ. ಉಪ ಚುನಾವಣೆ(By election) ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ರು. ಪತ್ತೆಯಾಗಿದೆ. ಗೂಡ್ಸ್ ವಾಹನದಲ್ಲಿ ಮಾರ್ಪಾಡು ಮಾಡಿ ಹಣ ಸಾಗಾಟ ಮಾಡುತ್ತಿದ್ದ ಸಾಂಗ್ಲಿ ಮೂಲದ ಸಚಿನ್ ಮೆನಕುದಳೆ ಮತ್ತು ಮಾರುತಿ ಮಾರಗುಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಮೂಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.