Murder: ಯಮ ಸ್ವರೂಪಿಯಾದ ಪ್ರೀತಿ ದೇವತೆ: ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಪತ್ನಿ

Murder: ಪ್ರೀತಿಸಿ, ಮದುವೆಯಾಗಿ ಕೇವಲ 10 ತಿಂಗಳುಗಳಷ್ಟೇ ಕಳೆದಿದೆ. ಆದರೆ ಈ ಜೋಡಿಗಳ ಮಧ್ಯೆ ಮದುವೆಯಾದ ನಂತರ ಯಾಕೋ ಹೋದಾಣಿಕೆಯೇ ಆಗುತ್ತಿರಲಿಲ್ಲ. ಗಂಡ ಹೆಂಡತಿ ಮಧ್ಯೆ ದಿನಾ ಜಗಳವಾಗುತ್ತಿತ್ತು. ಇಂದು ಮಡಿಕೇರಿಯ ಮೂರ್ನಾಡು ಗಾಂಧಿನಗರದಲ್ಲಿ ಪತ್ನಿಯೇ ಪತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾಳೆ.

ಗಾಂಧಿನಗರದ ಪದ್ಮಿನಿ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಧರ್ಮ(26) ಎಂಬಾತನನ್ನು ಪತ್ನಿ ಶ್ರೀಜಾ (24) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಕಳೆದ 10 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಧರ್ಮ ಇಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸಂದರ್ಭ ಪತ್ನಿ ಶ್ರೀಜಾ ಕೈಲಿದ್ದ ಚಾಕುವಿನಿಂದ ಆತನನ್ನು ತಿವಿದ ಪರಿಣಾಮ ಧರ್ಮ ಮೃತಪಟ್ಟಿದ್ದಾನೆ.
ಧರ್ಮ ಕುಶಾಲನಗರದ ಮೂಲನವನಾಗಿದ್ದು,ಶ್ರೀಜ ಬೈರಂಬಾಡದ ನಿವಾಸಿಯಾಗಿದ್ದಾಳೆ. ಇಬ್ಬರು ಪ್ರೀತಿಸಿ ವಿವಾಹದ ನಂತರ ಮೂರ್ನಾಡಿನ ಗಾಂಧಿನಗರದಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಸುಂದರ್ ರಾಜ್, ಡಿವೈಎಸ್ಪಿ ಮಹೇಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಗಿ, ಮೂರ್ನಾಡು ಪೊಲೀಸ್ ಠಾಣೆಯ ಎ.ಎಸ್. ಐ ಶ್ರೀನಿವಾಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಶ್ರೀಜಾಲನ್ನು ಬಂಧಿಸಿದ್ದಾರೆ.