Breast Cancer: ಸ್ತನ ಕ್ಯಾನ್ಸರ್‌ಗೆ ಹೋಮಿಯೋಪತಿ ಚಿಕಿತ್ಸೆ: ಇದು ಎಷ್ಟು ಪರಿಣಾಮಕಾರಿ?
Breast Cancer: ಅಂಕಿಅಂಶಗಳ ಪ್ರಕಾರ ಭಾರತದಲ್ಲಿ(India) ಪ್ರತಿ 30 ಮಹಿಳೆಯರಲ್ಲಿ(Women) ಮೂವರಿಗೆ ಸ್ತನ ಕ್ಯಾನ್ಸರ್(Cancer) ಪತ್ತೆಯಾಗುತ್ತಿದೆ. ಪಾಶ್ಚಿಮಾತ್ಯರ ಅನುಕರಣೆ, ಜೀವನಶೈಲಿ(Life Style), ಆಧುನಿಕ ಸೌಕರ್ಯಗಳಿಂದ ಈ ರೋಗದ ಪ್ರಮಾಣ ಹೆಚ್ಚಾಗಿದೆ. ಸ್ತನ ಕ್ಯಾನ್ಸರ್‌ಗೆ(Breast Cancer) ಹಲವು ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಹೋಮಿಯೋಪತಿ(Homeopathy) ವೈದ್ಯರು(Doctors) ಸ್ತನ ಕ್ಯಾನ್ಸರ್ ಅನ್ನು ಹೋಮಿಯೋಪತಿ ಚಿಕಿತ್ಸೆಯಿಂದ ಎಲ್ಲಕ್ಕಿಂತ ಉತ್ತಮವಾಗಿ ನಿರ್ವಹಿಸಬಹುದು ಎಂದು ಹೇಳುತ್ತಾರೆ.
ಇಂದಿನ ಕಾಲದ ವೃತ್ತಿಪರ ಮಹಿಳೆಯರಲ್ಲಿ, ತಮ್ಮ ಉದ್ಯೋಗದ ಧಾವಂತದಲ್ಲಿ ಮದುವೆ, ಸಂಸಾರ, ಮಕ್ಕಳು, ಇವುಗಳ ಬಗ್ಗೆ ಯೋಚಿಸುವ ಸಮಯವಿಲ್ಲ. ಈ ಬದಲಾದ ಪರಿಸ್ಥಿತಿ ಮಹಿಳೆಯರ ಸ್ಥಾನ ಕ್ಯಾನ್ಸರ್ ಗೆ ಒಂದು ಪ್ರಮುಖ ಕಾರಣವಾಗಿದೆ. ಸ್ತನದಲ್ಲಿ ಗಡ್ಡೆ ಎಂದರೆ ಸ್ತನ ಕ್ಯಾನ್ಸರ್ ಎಂದೇನೂ ಅರ್ಥವಲ್ಲ. ಆದಾಗ್ಯೂ, ಗಡ್ಡೆಗಳು ಕಂಡು ಬಂದಾಗ ಸರಿಯಾದ ರೋಗನಿರ್ಣಯ ಮಾಡುವುದು ಅವಶ್ಯಕ.
ಸ್ತನ ಕ್ಯಾನ್ಸರ್ ನ ಪ್ರಮುಖ ಕಾರಣಗಳು:
▪ ಮೊದಲ ಮಗುವಿನ ವಿಳಂಬ (ಹೆಚ್ಚು ವಯಸ್ಸಿನಲ್ಲಿ)
▪ ಮಕ್ಕಳನ್ನೇ ಹೆರದಿರುವುದು.
▪ ಹೆತ್ತ ಮಕ್ಕಳಿಗೆ ಹಾಲುಣಿಸದಿರುವುದು
▪ ಋತುಬಂಧದ ನಂತರ ಸ್ಥೂಲಕಾಯತೆ
▪ ಮದ್ಯಪಾನ ಮತ್ತು ಧೂಮ್ರಪಾನ
▪ ಹಾರ್ಮೋನ್ ಯುಕ್ತ ಔಷಧಿಗಳ ಸೇವನೆ
▪ ವಿಕಿರಣಗಳಿಗೆ ಒಡ್ಡಿಕೊಳ್ಳುವದು (ಎಕ್ಸ್-ರೇ ಪರೀಕ್ಷೆ ಮತ್ತು ವಿಕಿರಣ ಚಿಕಿತ್ಸೆಗಳು)
▪ ಚಿಕ್ಕ ವಯಸ್ಸಿನಲ್ಲಿ(12 ವರ್ಷಕ್ಕಿಂತ ಮುಂಚೆ) ಋತುಚಕ್ರ ಆರಂಭ
▪ ತಡವಾದ ಋತುಬಂಧ (55 ವರ್ಷಕ್ಕೂ ಮೀರಿ)
▪ ಕುಟುಂಬದಲ್ಲಿ ಕ್ಯಾನ್ಸರ್ ನ ಇತಿಹಾಸ ಜನ್ಮದಾತರು ಅಥವಾ ಅವರ (ನೇರ ನಿಕಟ ಸಂಬಂಧಿಗಳಲ್ಲಿ ಕ್ಯಾನ್ಸರ್ ಇರುವುದು)
▪ ತಪ್ಪು ಜೀವನ ಶೈಲಿ: ಆಹಾರ, ಚಟುವಟಿಕೆ, ಇತ್ಯಾದಿ ಸರಿ ಇಲ್ಲದಿರುವುದು
▪ ಆಹಾರ ಮತ್ತು ಮಾಲಿನ್ಯ ಗಳ ಮೂಲಕ ರಾಸಾಯನಿಕಗಳ ಪ್ರಭಾವ
▪ ಮಾನಸಿಕ ಒತ್ತಡಗಳು
ಸ್ತನ ಕ್ಯಾನ್ಸರ್ ಲಕ್ಷಣಗಳಲ್ಲಿ
ಸ್ತನದಲ್ಲಿ ನೋವು ರಹಿತ ಗೆಡ್ಡೆ,
ವಳಸರಿದ ಮೊಲೆತೊಟ್ಟು
ಎದೆಯ ಚರ್ಮದ ಮೇಲೆ ತುರಿಕೆ
ರೋಗ ಹೆಚ್ಚಾದರೆ ಕಂಕುಳಲ್ಲಿ ಅಥವಾ ಕುತ್ತಿಗೆಯಲ್ಲಿ ಚಿಕ್ಕ ಗಡ್ಡೆಗಳು,
ಕಿತ್ತಳೆ ಹಣ್ಣಿನ ಸಿಪ್ಪೆಯಂತೆ ಎದೆಯ ಮೇಲೆ ಚರ್ಮ ದಪ್ಪವಾಗುವುದು ಮುಂತಾದ ಲಕ್ಷಣಗಳು
ರೋಗ ಉಲ್ಬಣಗೊಂಡಾಗ ಮೊಲೆತೊಟ್ಟಿನಿಂದ ನೀರು ಅಥವಾ ರಕ್ತ ಕಂಡುಬರುವುದು.
ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಶ್ವಾಸಕೋಶ, ಮೂಳೆ, ಯಕೃತ್ತಿಗೆ ಕ್ಯಾನ್ಸರ್ ಹರಡಿದಾಗ ರೋಗದಿಂದ ಹೊರಬರಲು ಬಹಳ ಕಷ್ಟವಾಗುತ್ತದೆ, ಅನೇಕ ಬಾರಿ ಅಸಾಧ್ಯವಾಗುತ್ತದೆ. ಅದಕ್ಕಾಗಿಯೇ, ಮೊದಲಿನಿಂದಲೂ ಗಮನ ಹರಿಸುವುದು ಅವಶ್ಯಕ. ಕುಟುಂಬದಲ್ಲಿ ತಾಯಿ, ಚಿಕ್ಕಮ್ಮ, ಅಜ್ಜಿ (ತಾಯಿಯ ತಾಯಿ) ಅಥವಾ ಸಹೋದರಿ ಕ್ಯಾನ್ಸರ್ ಹೊಂದಿದ್ದರೆ ಹೆಚ್ಚಿನ ಅಪಾಯವಿದೆ. ರೋಗನಿರ್ಣಯವನ್ನು ಮಾಡಲು ಅನುಭವಿ ವೈದ್ಯರಿಂದ ಪರೀಕ್ಷೆ, ಮ್ಯಾಮೊಗ್ರಫಿ ಮತ್ತು ಮೈಕ್ರೊನೀಡಲ್ ಪರೀಕ್ಷೆಯನ್ನು ಮಾಡಬಹುದು.
ಹೋಮಿಯೋಪತಿ ಚಿಕಿತ್ಸೆಯಿಂದ ಕ್ಯಾನ್ಸರ್ ನಿಯಂತ್ರಿಸಬಹುದು: ರೋಗವು ಅಂತಿಮ ಹಂತ ತಲುಪುವುದರೊಳಗೆ ಚಿಕಿತ್ಸೆ ಆರಂಭಿಸಿದರೆ ಅಂತಹ ರೋಗಿಯನ್ನು ಹೋಮಿಯೋಪತಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಚಿಕಿತ್ಸೆಯಲ್ಲಿ, ರೋಗಿಯ ದೈಹಿಕ, ಮಾನಸಿಕ ಲಕ್ಷಣಗಳನ್ನು ಅಧ್ಯಯನ ಮಾಡುವ ಮೂಲಕ ಔಷಧಿಗಳ ಪ್ರಕಾರ ಮತ್ತು ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸ್ತನ ಕ್ಯಾನ್ಸರ್‌ಗೆ ಹೋಮಿಯೋಪತಿ ಮೂಲಕ ಚಿಕಿತ್ಸೆ ನೀಡಬಹುದು ಎಂಬುದು ಸಾಬೀತಾಗಿದೆ. ಈಗ ಇದನ್ನು ಜನರು ಅರಿತುಕೊಂಡರೆ ಮತ್ತು ಹೋಮಿಯೋಪತಿ ಚಿಕಿತ್ಸೆಯನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿದರೆ ಹೆಚ್ಚಿನ ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸುವುದು ಸಾಧ್ಯವಾಗುತ್ತದೆ.
– ಡಾ. ಪ್ರ. ಅ. ಕುಲಕರ್ಣಿ