Mumbai: ಮುಂಬೈನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನೀಲಿ ಚಿತ್ರ ತಾರೆ ಅರೆಸ್ಟ್- ಸಿಕ್ಕಿಬಿದ್ದಿದ್ದೇ ರೋಚಕ !! ಶಿಲ್ಪಾ ಶೆಟ್ಟಿ ಗಂಡನಿಗೂ ಸಂಕಷ್ಟ !!
Mumbai: ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತೀಯ ಪಾಸ್ಪೋರ್ಟ್ ಪಡೆದು, ಅಕ್ರಮವಾಗಿ ಮುಂಬೈನಲ್ಲಿ ನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ(Bangla) ಅಶ್ಲೀಲ ಚಲನಚಿತ್ರ(Porn Star) ತಾರೆ ರಿಯಾ ಬಾರ್ಡೆ ಅಲಿಯಾಸ್ ಆರೋಹಿ ಬಾರ್ಡೆ ಅವರನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
ಹೌದು, ಅಶ್ಲೀಲ ಸಿನಿಮಾ ಉದ್ಯಮದಲ್ಲಿ ಆರೋಹಿ ಬರ್ಡೆ ಎಂದೇ ‘ಖ್ಯಾತಿ’ ಪಡೆದಿರುವ ಬನ್ನಾ ಶೇಖ್(Banna Shekh) ಭಾರತದಲ್ಲಿ ಅಕ್ರಮವಾಗಿ ವಾಸಿಸ್ತಿರೋ ಈಕೆ ಸದ್ಯ ಮುಂಬೈ(Mumbai) ಪೊಲೀಸರ ಅತಿಥಿಯಾಗಿದ್ದಾಳೆ. ಈಕೆ ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ನೆಲೆಸಿದ್ದಾಳೆ ಎನ್ನುವುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಆಕೆಯ ತಾಯಿ, ತಂದೆ, ಅಣ್ಣ-ತಂಗಿ ಎಲ್ಲರೂ ಅಕ್ರಮವಾಗಿ ವಾಸವಾಗಿರುವ ಸಂದೇಹ ವ್ಯಕ್ತವಾಗಿದ್ದು, ಪೊಲೀಸರು ಇವರ ಹಿಂದೆ ಬಿದ್ದಿದ್ದಾರೆ. ಇದಾಗಲೇ ರಾಜ್ ಕುಂದ್ರಾ ನಿರ್ಮಾಣದಲ್ಲಿ ಕೆಲಸ ಮಾಡಿರುವ ಈಕೆ, ಹಲವು ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ.
ಇಡೀ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಗ್ರಾಮ್ ಮಲ್ಕರ್ ಅವರ ಪ್ರಕಾರ, “ತನಿಖೆಯಲ್ಲಿ, ರಿಯಾ ಅವರ ತಾಯಿ ಅಂಜಲಿ ಬಾಂಗ್ಲಾದೇಶದ ನಿವಾಸಿಯಾಗಿದ್ದು, ರಿಯಾ ಸೇರಿದಂತೆ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ರಿಯಾ ಅವರ ತಾಯಿ ಪಶ್ಚಿಮ ಬಂಗಾಳ ಮೂಲದವರು ಎಂದು ಹೇಳಿಕೊಂಡು ಅಮರಾವತಿ ನಿವಾಸಿ ಅರವಿಂದ್ ಬಾರ್ಡೆ ಅವರನ್ನು ವಿವಾಹವಾದರು. ನಂತರ ಆಕೆ ತನ್ನ ಭಾರತೀಯ ಗುರುತನ್ನು ಸಾಬೀತುಪಡಿಸಲು ತನಗೆ ಮತ್ತು ಮಕ್ಕಳಿಗೆ ನಕಲಿ ಜನನ ಪ್ರಮಾಣಪತ್ರಗಳು ಮತ್ತು ಇತರ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಭಾರತೀಯ ಪಾಸ್ಪೋರ್ಟ್ ಪಡೆದಿದ್ದಾಳೆ ಎಂದ ತಿಳಿಸಿದ್ದಾರೆ.
ಅಂದಹಾಗೆ ಪೋರ್ನ್ ಸ್ಟಾರ್ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಜೊತೆಗೂ ಈಕೆಯ ಹೆಸರು ಥಳಕು ಹಾಕಿಕೊಂಡಿದ್ದು, ಅಲ್ಲಿಯೂ ಇವಳು ಅಕ್ರಮವಾಗಿಯೇ ಕೆಲಸ ಮಾಡಿದ್ದಾಳೆ ಎಂದು ತನಿಖೆಗಳಿಂದ ತಿಳಿದುಬಂದಿದೆ. ತಾನು ಪೋರ್ನ್ ವಿಡಿಯೋ ಮಾಡಿಯೇ ಇಲ್ಲ ಎಂದು ಹೇಳುತ್ತಲೇ ಬಂದಿರುವ ರಾಜ್ ಕುಂದ್ರಾಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.