Carcinogenic factor: ಚಪ್ಪರಿಸಿಕೊಂಡು ಬೇಕರಿ ಐಟಂ ತಿನ್ನುವ ಮೊದಲು ಎಚ್ಚರ! ಬೆಚ್ಚಿ ಬೀಳಿಸುತ್ತೆ ಈ ಪರೀಕ್ಷಾ ವರದಿ!

Carcinogenic factor: ಬೀದಿ ಬದಿಯಲ್ಲಿ ಮಾರಾಟ(Street food) ಮಾಡುತ್ತಿದ್ದ ಗೋಬಿ(Gobi), ಕಬಾಬ್(Kabab) ಸೇರಿದಂತೆ ಪಾನಿಪುರಿಗಳಿಗೆ(Panipuri ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸ‌ರ್ ಕಾರಕ ಅಂಶ ಪತ್ತೆ ಬೆನ್ನಲ್ಲೇ ಇದೀಗ, ಬೇಕರಿಯಲ್ಲಿ ಕೇಕ್‌ಗೆ(Cake) ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸ‌ರ್ ಕಾರಕ(Cancer) ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಚಿಕ್ಕಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೆ ಇಷ್ಟ ಪಡುವ ಬೇಕರಿ ಪದಾರ್ಥಗಳಲ್ಲಿ ಆತಂಕಕಾರಿ ಅಂಶ ಕಂಡು ಬಂದಿದ್ದು, ಜನ ಆತಂಕಗೊಂಡಿದ್ದಾರೆ. ಕೇಕ್‌ಗೆ ಬಳಸುವ ಪದಾರ್ಥಗಳು ಕಲಬೆರಕೆಯಿಂದ ಕೂಡಿವೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿದಾಗ 12 ಮಾದರಿ ಕೇಕ್‌ಗಳಲ್ಲಿ ಕ್ಯಾನ್ಸ‌ರ್ ಹೊಂದಿರುವ ರಾಸಾಯನಿಕಗಳು ಪತ್ತೆಯಾಗಿವೆ.

ಯಾವ ಯಾವ ಪದಾರ್ಥಗಳಲ್ಲಿ?
ವಿಶೇಷವಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ನಲ್ಲಿ ಅತಿ ಹೆಚ್ಚು ಬಣ್ಣ ಬಳಕೆ ಮಾಡುವುದರಿಂದ. ಇದು ಮಾನವನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆಯೆಂದು ವರದಿ ಬಂದಿದೆ. ಹನ್ನೆರಡಕ್ಕೂ ಹೆಚ್ಚು ಮಾದರಿಗಳಲ್ಲಿ ಆಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ, ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ. ಈ ಕೃತಕ ಬಣ್ಣಗಳಿಂದ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

1 Comment
  1. Pink Withney says

    Pink Withney Hi there to all, for the reason that I am genuinely keen of reading this website’s post to be updated on a regular basis. It carries pleasant stuff.

Leave A Reply

Your email address will not be published.