Rice : ಒಂದು ತಿಂಗಳು ‘ಅನ್ನ’ ತಿನ್ನೋದು ಬಿಟ್ರೆ ಏನಾಗುತ್ತೆ? ಸಣ್ಣಗಾಗೋದು, ತೂಕ ಇಳಿಯೋದು ಸತ್ಯವೇ? ಇಲ್ಲಿದೆ ಅಚ್ಚರಿ ವಿಷ್ಯ
Rice: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಅದರಲ್ಲಿ ಅನ್ನು(Rice) ತಿನ್ನುವುದನ್ನು ಬಿಡುವುದು ಕೂಡ ಒಂದು. ಇದನ್ನು ಹೆಚ್ಚಿನವರು ರೂಢಿಸಿಕೊಂಡಿದ್ದಾರೆ.
ಹೌದು, ಅನ್ನದಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತೆ. ಹೀಗಾಗಿ ಅದು ನಮ್ಮಬೊಜ್ಜು, ಫ್ಯಾಟ್ ಅನ್ನು ಹೆಚ್ಚಿಸುತ್ತೆ. ಇದನ್ನು ತಿನ್ನೋದನ್ನು ಬಿಟ್ಟರೆ ನಾವು ಬೇಗ ಸಣ್ಣಗಾಗಬಹುದು ಎಂದು ಅನೇಕ ಜಿಮ್ ಮ್ಯಾನ್ ಗಳು, ಆರೋಗ್ಯ ಸಲಹೆಗಾರರು, ಡಯಟ್ ಟ್ರೈನಿಗಳು ಹೇಳೋದನ್ನು ಕೇಳಿದ್ದೇವೆ. ಇದನ್ನು ನಂಬಿ ಅನೇಕರು ಅನ್ನವನ್ನು ತಿನ್ನೋದಲ್ಲ, ನೋಡುವುದೂ ಕೂಡ ಇಲ್ಲ. ಹಾಗಿದ್ರೆ ಇದೆಲ್ಲವೂ ಸತ್ಯವೇ? ಒಂದು ವೇಳೆ ಒಂದು ತಿಂಗಳು ಅನ್ನ ತಿನ್ನೋದನ್ನು ಬಿಟ್ಟರೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲದೆ ನೋಡಿ ಉತ್ತರ.
1 ತಿಂಗಳು ಅನ್ನ ತಿನ್ನದಿದ್ದರೆ ಸಣ್ಣಗಾಗುತ್ತಾರಾ?
ತೂಕ ಹೆಚ್ಚಳಕ್ಕೆ ಕ್ಯಾಲೋರಿಯೇ ಪ್ರಮುಖ ಕಾರಣ. 100 ಗ್ರಾಂ ಅಕ್ಕಿಯಲ್ಲಿ 130 ಕ್ಯಾಲರಿ ಇರುತ್ತದೆ. ಒಂದು ತಿಂಗಳ ಕಾಲ ಅನ್ನವನ್ನು ತಿನ್ನದಿದ್ದರೆ ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣವು ಕಡಿಮೆಯಾಗುತ್ತದೆ. ಇದು ಮುಖ್ಯವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಒಂದ ತಿಂಗಳು ಅನ್ನ ತಿನ್ನದಿದ್ದರೆ ಆರೋಗ್ಯ ಸುಧಾರಿಸುತ್ತಾ?
ಅನ್ನ ತಿನ್ನದಿದ್ದರೆ ನಮ್ಮ ದೇಹದಲ್ಲಿನ ನಾರಿನಂಶವೂ ಕಡಿಮೆಯಾಗುತ್ತದೆ. ಇದು ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ. ಮತ್ತೊಂದೆಡೆ ಪೋಷಕಾಂಶಗಳ ವಿಷಯದಲ್ಲಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚು. ಇದಲ್ಲದೆ, ಇದು ಬಿ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಅದಕ್ಕಾಗಿಯೇ ಅದರ ಪರಿಣಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಒಂದು ತಿಂಗಳು ಅನ್ನ ತಿನ್ನದೇ ಇದ್ದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದು ಸುಳ್ಳು.