Death sentence: 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
Death sentence: ಏನೂ ಅರಿಯದ ಅಪ್ರಾಪ್ತ ಬಾಲಕಿಯ(Girl) ಮೇಲೆ ನೀಚನೊಬ್ಬ ಅತ್ಯಾಚಾರ(Rape) ಎಸಗಿ ಹತ್ಯೆ ಮಾಡಿದ ಪ್ರಕರಣ 21-9-2017ರಲ್ಲಿ ಬೆಳಗಾವಿಯ(Belagavi) ರಾಯಭಾಗದಲ್ಲಿ ನಡೆದಿತ್ತು. ಈ ಸಂಬಂಧ ಆರೋಪಿಗೆ ಗಲ್ಲು ಶಿಕ್ಷೆ(Death sentence) ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ(POCSO Court) ಶುಕ್ರವಾರ ತೀರ್ಪು(Justise) ನೀಡಿದೆ.
ರಾಯಬಾಗ ತಾಲೂಕಿನ ಹಾರೂಗೇರಿ ಕುರುಬಗೋಡಿಯ ಉದಪ್ಪ ರಾಮಪ್ಪ ಗಾಣಗೇರ (32) ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. 21-9-2017 ರಂದು ಆರೋಪಿಯು 3 ವರ್ಷದ ಬಾಲಕಿ ಆಟವಾಡುತಿದ್ದ ವೇಳೆ ಅವಳಿಗೆ ಟಾಕಲೇಟ್ ಕೊಡಿಸಿ, ಅಲ್ಲಿಂದ ಕಬ್ಬಿನ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಅವಳ ಬಾಯಿ, ಮೂಗು ಮತ್ತು ಕಣ್ಣಲ್ಲಿ ಮಣ್ಣ ಹಾಕಿ ಕೊಲೆ ಮಾಡಿದ್ದ. ಬಳಿಕ ಬಾಲಕಿ ಮೇಲೆ ಮಣ್ಣು ಹಾಕಿ ಪುರಾವೆ ನಾಶಪಡಿಸಲು ಯತ್ನಿಸಿದ್ದ.
ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸುರೇಶ ಪಿ.ಶಿಂಗಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಆರೋಪಿಗೆ ಗಲ್ಲು ಶಿಕ್ಷೆ ಮತ್ತು ₹45 ಸಾವಿರ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದರು.