Uttar Pradesh: 6 ವರ್ಷದ ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನ ತಪ್ಪಿಸಿದ ಕೋತಿಗಳ ಗುಂಪು

Share the Article

Uttar Pradesh: ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಯತ್ನವನ್ನು ಕೋತಿಗಳು ಬಂದು ತಪ್ಪಿಸಿರುವ ಘಟನೆಯೊಂದು ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಆರು ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ಮಾಡಿ, ಅತ್ಯಾಚಾರ ನಡೆಯುವುದನ್ನು ತಪ್ಪಿಸಿಕೊಂಡಿದೆ.

ಕೂಡಲೇ ಯುಕೆಜಿ ವಿದ್ಯಾರ್ಥಿನಿ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ಈ ವಿಚಾರ ತಿಳಿಸಿದ್ದಾಳೆ. ಹಾಗೆನೇ ದೇವರಂತೆ ಬಂದು ಕೋತಿಗಳು ನನ್ನ ಪ್ರಾಣ ಉಳಿಸಿರುವುದಾಗಿ ಕೂಡಾ ಹೇಳಿದ್ದಾಳೆ. ಈ ಘಟನೆ ನಡೆದಿರುವುದು ಸೆ.20 ರಂದು ನಡೆದಿದೆ. ಪರಾರಿಯಾಗಿದ್ದ ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಆರೋಪಿಯನ್ನು ಬಾಲಕಿಯನ್ನು ಅಪಹರಿಸಿ ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕೋತಿಗಳು ಸ್ಥಳಕ್ಕೆ ಬಂದಿದ್ದವು. ಕೂಡಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿ ಗ್ರಾಮದವನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಹೊರಗಡೆ ಆಟವಾಡುತ್ತಿರುವುದನ್ನು ಗಮನಿಸಿದ ಈತ ತನ್ನೊಂದಿಗೆ ಬರಲು ಮನವೊಲಿಸಿದ್ದ ಎಂದು ಹೇಳಲಾಗಿದೆ.

 

Leave A Reply