Mysore : ದಸರಾ ಆನೆಗಳ ನಡುವೆ ಕಿತ್ತಾಟ, ಏಕಾಏಕಿ ಅರಮನೆಯಿಂದ ಹೊರ ಓಡಿದ ಗಜಪಡೆ – ದಿಕ್ಕಾಪಾಲಾಗಿ ಓಡಿದ ಮೈಸೂರು ಜನ

Mysore : ನಾಡಹಬ್ಬ ಮೈಸೂರು(Mysore)ದಸರಾಗೆ ಬಂದಿದ್ದ ಆನೆಗಳು ಅರಮನೆಯ ಆವರಣದಲ್ಲಿ ಬೀಡುಬಿಟ್ಟಿವೆ. ಉತ್ತಮವಾಗಿ ಆನೆಗಳ ಆರೈಕೆ ನಡೆಯುತ್ತಿದೆ. ಆದರೆ ಈ ಆನೆಗಳ ನಡುವೆ ಗಲಾಟೆಯಾಗಿದ್ದು, ಕಂಜನ್ ಹಾಗೂ ಧನಂಜಯ್ ಆನೆಗಳು ಅಮಮನೆಯಿಂದ ಹೋರಗೆ ಓಡಿ ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಹೌದು, ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ (Dasara Jamboo Savari) ಭಾಗವಹಿಸುವ ಗಜಪಡೆ ನಡುವೆ ಗಲಾಟೆಯಾಗಿ ‘ಕಂಜನ್’ ಹಾಗೂ ಧನಂಜಯ ಆನೆ ಅರಮನೆಯಿಂದ (Palace) ರಸ್ತೆಗೆ ಓಡಿ ಬಂದ ಘಟನೆ ಶುಕ್ರವಾರ ರಾತ್ರಿ (Friday Night) ಸುಮಾರು 9 ಗಂಟೆ ವೇಳೆಗೆ ನಡೆದಿದೆ. ರಾತ್ರಿ ಊಟ ಮಾಡುವ ವೇಳೆ ‘ಧನಂಜಯ’ ಮತ್ತು ‘ಕಂಜನ್’ ಆನೆ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಎರಡೂ ಆನೆ ಏಕಾಏಕಿ ರಸ್ತೆಗೆ ಓಡಿಬಂದದ್ದು ಕಂಡು ಜನ ದಿಕ್ಕಾಪಾಲಾಗಿ ಓಡಿದ್ದಾರೆ.

ಅಂದಹಾಗೆ ಊಟ ಮಾಡುವ ವೇಳೆ ಆರಂಭವಾದ ಗಲಾಟೆಯಿಂದ ಕಂಜನ್ ಆನೆ ಅರಮನೆಯಿಂದ ರಸ್ತೆಗೆ ಓಡಿ ಬಂದಿದೆ. ಈ ವೇಳೆ ಧನಂಜಯ ಎಂಬ ಮತ್ತೊಂದು ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಆನೆಯು ಏಕಾಏಕಿ ಅರಮನೆಯಿಂದ ಹೊರಗೆ ಓಡಿ ಬಂದ ಹಿನ್ನೆಲೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಎರಡೂ ಆನೆಗಳು ದೊಡ್ಡಕೆರೆ ಮೈದಾನದ ಬಳಿಕ ಬ್ಯಾರಿಕೇಟ್ ತಳ್ಳಿಕೊಂಡು ರಸ್ತೆಗೆ ನುಗ್ಗಿವೆ. ತಕ್ಷಣ ಜಾಗೃತರಾದ ಮಾವುತರು ಹಾಗೂ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಮೂಲಕ ಭಾರೀ ಅನಾಹುತ ತಪ್ಪಿತು. ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದ ವಿಡಿಯೋ ವೈರಲ್ ಆಗಿದ್ದು, ಧನಂಜಯ ಆನೆಯ ಮಾವುತನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.

 

Leave A Reply

Your email address will not be published.