Tirupati: ತಿರುಪತಿ ಪ್ರಸಾದ ಲಡ್ಡು ವಿವಾದದ ಬೆನ್ನಲ್ಲೇ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದೇವಳ ಮಾಜಿ ಅರ್ಚಕ !!

Tirupati: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ತನಿಖಾ ವರದಿಯಲ್ಲೂ ಇದು ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷೆ ಮಾಡಲು ಸಮಿತಿಯೊಂದನ್ನು ಟಿಟಿಡಿ ಸ್ಥಾಪಿಸಿದೆ. ಈ ಬೆನ್ನಲ್ಲೇ ದೇವಳದ ಮಾಜಿ ಅರ್ಚಕರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ಈ ಹಿಂದೆ ಶ್ರೀವಾರಿಯ ಪ್ರಧಾನ ಅರ್ಚಕರಾಗಿ ಕೆಲಸ ಮಾಡಿದ್ದ ರಮಣ್ ದೀಕ್ಷಿತ್(Raman Deekshith) ಅವರು ಲಡ್ಡು ವಿವಾದದ ಬಗ್ಗೆ ಮಾತನಾಡಿ ಕಳೆದ ‘ಐದು ವರ್ಷಗಳಿಂದ ನಮ್ಮ ಕಣ್ಣೆದುರೇ ಈ ಮಹಾಪಾಪ ನಡೆಯುವುದನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಶ್ರೀಗಳ ನೈವೇದ್ಯಕ್ಕೆ ಬಳಸುವ ಸಾಮಗ್ರಿಗಳು ಕೀಳುಮಟ್ಟದಲ್ಲಿವೆ ಎಂದು ನಾನೊಬ್ಬನೇ ಹಲವು ಬಾರಿ ದೂರು ನೀಡಿದ್ದೇನೆ’ ಎನ್ನುವ ಸತ್ಯವನ್ನು ಕೂಡಾ ಅವರು ಬಹಿರಂಗಪಡಿಸಿದ್ದಾರೆ.

ಅಲ್ಲದೆ ತಾನು ಈ ಬಗ್ಗೆ ಧ್ವನಿ ಎತ್ತಿದಾಗ ಯಾರೂ ನನ್ನನು ಬೆಂಬಲಿಸಲಿಲ್ಲ. ಸದ್ಯದ ಲಡ್ಡು ಸುದ್ದಿ ನೋಡಿದರೆ ನಿಮಗೆ ತುಂಬಾ ನೋವಾಗುತ್ತದೆ. ಕಲಬೆರಕೆ ತುಪ್ಪದಿಂದ ಮಾಡಿದ ಪ್ರಸಾದವನ್ನು ತಯಾರಿಸುವುದು ಮಹಾ ಪಾಪ.”ಕೋವಿಡ್ ಸಮಯದಿಂದ, ಸ್ವಾಮಿಗೆ ಅರ್ಪಿಸುವ ನೈವೇದ್ಯದ ಪ್ರಮಾಣವನ್ನು ಕೂಡಾ ಕಡಿಮೆ ಮಾಡಲಾಗಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಬದಲಾಯಿಸಬಾರದು. ಚಂದ್ರಬಾಬು ಅಧಿಕಾರಕ್ಕೆ ಬಂದ ಮೇಲೆ ತಿರುಮಲದಲ್ಲಿ ಮತ್ತೆ ಸ್ವಚ್ಛತೆ ಆರಂಭವಾಯಿತು. ಸದ್ಯಕ್ಕೆ ನಂದಿನಿ ಡೈರಿಯಿಂದ ಗುಣಮಟ್ಟದ ತುಪ್ಪವನ್ನು ಪ್ರಸಾದಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.