Patna: ಪೊಲೀಸ್‌ ಠಾಣೆಯಲ್ಲಿ ಹಾಡಹಗಲೇ ಕಳ್ಳತನ; 16 ಮದ್ಯದ ಬಾಟಲಿ ಎಸ್ಕೇಪ್‌ ಮಾಡಿದ 6 ಮಹಿಳೆಯರು

Share the Article

Patna:  ಹಾಡಹಗಲೇ ಪೊಲೀಸ್‌ನವರು ಇರುವ ಸಮಯದಲ್ಲಿ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ನಡೆದಿದೆ. ಪೊಲೀಸರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿರುವಾಗ ಆರು ಮಂದಿ ಮಹಿಳೆಯರು ಪೊಲೀಸ್‌ ಠಾಣೆಗೆ ಎಂಟ್ರಿ ನೀಡಿದ್ದು, ನಂತರ ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯದ ಬಾಟಲಿ ಸ್ಟೋರ್‌ರೂಂನಲ್ಲಿದ್ದು, ಅಲ್ಲಿದ ಹದಿನಾರು ಮದ್ಯದ ಬಾಟಲಿಗಳನ್ನು ಕದ್ದೊಯ್ಯಲಾಗಿದೆ.

ಅಂದ ಹಾಗೆ ಈ ವಿಚಿತ್ರ ಘಟನೆ ನಡೆದಿರುವುದು ಬಿಹಾರದ ಸಮಸ್ತಿಪುರದಲ್ಲಿ.

ಈ ಕಳ್ಳತನ ನಡೆದಿರುವುದು ಕಲ್ಯಾಣಪುರ ಠಾಣೆಯಲ್ಲಿ. ಕಸ ವಿಲೇವಾರಿ ಮಾಡಲೆಂದು ಆರು ಮಂದಿ ಮಹಿಳೆಯರು ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಇದು ಪ್ರತಿದಿನದ ಪ್ರಕ್ರಿಯೆಯಾಗಿರುವುದರಿಂದ ಮಹಿಳೆಯರ ಕುರಿತು ಪೊಲೀಸರು ಹೆಚ್ಚಿನ ಗಮನ ನೀಡಿಲ್ಲ. ಕಸ ಗುಡಿಸಿ, ವಿಲೇವಾರಿ ಮಾಡುವ ಕಾರಣ ಪೊಲೀಸರು ಠಾಣೆಯಿಂದ ಹೊರಬಂದಿದ್ದಾರೆ.

ಮಹಿಳೆಯರು ಕಸ ಗುಡಿಸಿದ್ದು, ನಂತರ ಸ್ಟೋರ್‌ ರೂಂ ಎಂಟ್ರಿ ನೀಡಿದ್ದಾರೆ. ಕಸ ವಿಲೇವಾರಿ ಮಾಡಲು ತಂದಿದ್ದ ಪ್ಲಾಸ್ಟಿಕ್‌ ಚೀಲದಲ್ಲಿ ಕಸದ ಜೊತೆಗೆ 16 ಮದ್ಯದ ಬಾಟಲಿಗಳನ್ನು ತುಂಬಿ ಪರಾರಿಯಾಗಿದ್ದಾರೆ. ಮಹಿಳೆಯರು ಒಬ್ಬರ ಹಿಂದೆ ಒಬ್ಬರು ಹೋಗಿದ್ದು, ನೋಡಿ ಪೊಲೀಸರಿಗೆ ಅನುಮಾನ ಕಾಡಿದ್ದು, ಸ್ಟೋರ್‌ ಒಳಗೆ ಟೇಬಲ್‌ ಮೇಲೆ ಇಟ್ಟಿದ್ದ ಮದ್ಯದ ಬಾಟಲಿ ನೋಡಿದರೆ ಅಲ್ಲಿರಲಿಲ್ಲ.

ನಂತರ ಕೂಡಲೇ ಪೊಲೀಸರು ಮಹಿಳೆಯರನ್ನು ಚೇಸ್‌ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರ ಹುಡುಕಾಟ ನಡೆಯುತ್ತಿದೆ.

ಕದ್ದ ಮದ್ಯದ ಬಾಟಲಿಗಳನ್ನು ಠಾಣೆಯ ಹೊರಗಿನ ಕಂಪೌಂಡ್‌ ಬಳಿ ತರಗೆಲೆಗಳ ಅಡಿಯಲ್ಲಿ ಮಹಿಳೆಯರು ಬಚ್ಚಿಟ್ಟಿದ್ದು, ವಿಚಾರಣೆ ಸಂದರ್ಭ ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡಾ ನಡೆಯುತ್ತಿದೆ. ಪೊಲೀಸ್‌ ಠಾಣೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿರುವ ಕುರಿತು ಮೀಮ್ಸ್‌ ಹರಿದಾಡುತ್ತಿದೆ.

 

Leave A Reply