Home Interesting Aradhya Bacchan: ಶಿವಣ್ಣನ ಜೊತೆಗೆ ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವರ್ತಿಸಿದ್ದು ಕಂಡು ಕನ್ನಡಿಗರು...

Aradhya Bacchan: ಶಿವಣ್ಣನ ಜೊತೆಗೆ ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವರ್ತಿಸಿದ್ದು ಕಂಡು ಕನ್ನಡಿಗರು ಶಾಕ್ !!

Hindu neighbor gifts plot of land

Hindu neighbour gifts land to Muslim journalist

Aradhya Bacchan: ದುಬೈನಲ್ಲಿ (Dubai) ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾ ರೈ (Aishwarya Rai) ಮತ್ತು ಆರಾಧ್ಯ ಬಚ್ಚನ್ (Aaradhya Bachchan) ಸಖತ್‌‌ ಮಿಂಚಿದ್ದಾರೆ. ಎಲ್ಲಿ ನೋಡಿದರೂ ಅಮ್ಮ ಮಗಳದ್ದೇ ಸುದ್ದಿ. ಇದೀಗ ಐಶ್ವರ್ಯಾ ರೈ ಅವರು ಕನ್ನಡಿಗರ ಹೃದಯವನ್ನೂ ಗೆದ್ದಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ನಟ ಶಿವಣ್ಣನ ಜೊತೆ ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವರ್ತಿಸಿದ ರೀತಿ ಕಂಡು ಎಲ್ಲರೂ ಶಾಕ್ ಆಗಿ, ಮೆಚ್ಚುಗೆಯ ಮಹಾಪೂರವನ್ನೇ ಸುರಿಸಿದ್ದಾರೆ.

ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿನ ಅಭಿನಯಕ್ಕಾಗಿ ಐಶ್ವರ್ಯಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಐಶ್ವರ್ಯಾ ಜತೆಗೆ ಮಗಳು ಆರಾಧ್ಯ ಕೂಡ ಭಾಗಿಯಾಗಿದ್ದರು. ಹೀಗಾಗಿ ಅನೇಕ ಗಣ್ಯ ವ್ಯಕ್ತಿಗಳು, ಹಿರಿಯ ಕಲಾವಿದರು ಪ್ರಶಸ್ತಿಯನ್ನು ಸ್ವೀಕರಿಸಲು ದುಬೈನಲ್ಲಿ ಹಾಜರಿದ್ದರು. ಅಂತೆಯೇ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಶಿವರಾಜ್‌ಕುಮಾರ್‌ (Shivaraj Kumar) ಕೂಡ ಭಾಗಿಯಾಗಿದ್ದರು. ಶಿವಣ್ಣನನ್ನು ಕಂಡೊಡನೆ ಐಶ್ವರ್ಯಾ ರೈ ಅವರು ಮಗಳಿಗೆ ಅವರನ್ನು ಪರಿಚಯಿಸಿದ್ದಾರೆ.

ಅಂದಹಾಗೆ ಆರಾಧ್ಯಳನ್ನು ನೋಡಿ ಶಿವಣ್ಣ ಮೊದಲು ಕೈಕುಲುಕಿ ವಿಶ್ ಮಾಡುತ್ತಾರೆ. ಆದರೆ ಆರಾಧ್ಯ ತಕ್ಷಣವೇ ಶಿವಣ್ಣ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ. ಆಕೆಯ ಈ ವರ್ತನೆಗೆ ನೆಟ್ಟಿಗರು ಭಾರೀ ಹೊಗಳಿದ್ದಾರೆ. ಐಶ್ ತಮ್ಮ ಮಗಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮ ಮಗಳ ಸಂಸ್ಕಾರಕ್ಕೆ ಇಡೀ ಕರುನಾಡೇ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.