BSNL: ಇನ್ಮುಂದೆ ನೀವು ಎಲ್ಲೇ ಇದ್ರು ಮೊಬೈಲ್ ಮೂಲಕ ಮನೆ WiFi ಬಳಸಬಹುದು! ಇಲ್ಲಿದೆ ಹೊಸ ಯೋಜನೆ ಡಿಟೇಲ್ಸ್

BSNL: ಭಾರತದ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ಬಿಎಸ್​ಎನ್​ಎಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಇದೇ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಹೊಸ ಸ್ಕೀಂ ಪರಿಚಯಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹೌದು, ಈ ಯೋಜನೆಯಲ್ಲಿ ಮನೆಯ ಫೈಬರ್ ಕನೆಕ್ಷನ್ ನೀಡುವ ಮೂಲಕ ಹೈ-ಸ್ಪೀಡ್‌ ಇಂಟರ್‌ನೆಟ್ ಬಳಸಬಹುದಾಗಿದೆ. ಅದಲ್ಲದೆ ಮನೆಯಿಂದ ದೂರವಿದ್ದರೂ ನಿಮಗೆ ಮನೆಯ ಫೈಬರ್ ಕನೆಕ್ಷನ್‌ನ ಸಹಾಯದಿಂದ ಇಂಟರ್‌ನೆಟ್ ಬಳಸಬಹುದಾಗಿದೆ.

ಮುಖ್ಯವಾಗಿ, ಬಿಎಸ್‌ಎನ್‌ಎಲ್ (BSNL) ಈ ಯೋಜನೆಗೆ “ಸರ್ವತ್ರ” ಎಂದು ಹೆಸರಿಡಲಾಗಿದೆ. ಶೀಘ್ರದಲ್ಲಿಯೇ ಸರ್ವತ್ರ ಯೋಜನೆ ಕೇರಳ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಸದ್ಯ ಈ ಸೇವೆಯನ್ನು ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳುವಂತೆ ಬಿಎಸ್‌ಎನ್‌ಎಲ್ ಸೂಚನೆ ನೀಡಿದ್ದು, ಯಾವುದೇ ಮಿತಿಯನ್ನು ಹೇರಿಲ್ಲ. ಸರ್ವತ್ರ ಪೋರ್ಟಲ್ ವರ್ಚುವಲ್ ಟವರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಬಿಎಸ್‌ಎನ್‌ಎಲ್ ಭರವಸೆ ನೀಡುತ್ತದೆ. ಇನ್ನು ನಿಖರವಾದ ಸೇವೆಯನ್ನು ಖಚಿತಪಡಿಸಿಕೊಳ್ಳಲು ‘ಒನ್ ನಾಕ್’ ವ್ಯವಸ್ಥೆಯು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.
ಬಿಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಬರ್ಟ್ ಜೆ, ರವಿ ಅವರು ‘ಸರ್ವತ್ರ’ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ಯೋಜನೆಯಿಂದ ಮನೆ ಅಥವಾ ಆಫಿಸ್ ಅಥವಾ ಇನ್ಯಾವುದೇ ಪ್ರದೇಶದಲ್ಲಿದ್ದರೂ FTTH ಕನೆಕ್ಷನ್ ಮೂಲಕ ಮೂಲಕ ವೈಫೈ ಬಳಕೆ ಮಾಡಬಹುದು. ಮನೆಯ ಹೊರಗೆ ನೀವು ಬಿಎಸ್‌ಎನ್‌ಎಲ್ ನ ಎಫ್‌ಟಿಟಿಎಚ್ ಕನೆಕ್ಷನ್ ಮೂಲಕ ಸರ್ವತ್ರ ಯೋಜನೆಯಡಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸಬಹುದು.
ನೀವು ಒಂದು ಬಾರಿ ರಿಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ FTTH ಕನೆಕ್ಷನ್ ‘ಸರ್ವತ್ರ ಇನೆಬೆಲ್’ ಆಗಲಿದೆ. ಇದರಿಂದ ಬೇರೆ ಸ್ಥಳದಲ್ಲಿದ್ರೂ ಮನೆ ವೈಫೈ ಮೂಲಕ ಇಂಟರ್‌ನೆಟ್ ಬಳಸಬಹುದಾಗಿದೆ. ಬೇರೆ ಸ್ಥಳದಲ್ಲಿ ಮನೆಯ ವೈಫೈ ಬಳಸುವಾಗ ಯೂಸರ್ ಐಟಿ ಮತ್ತು ಪಾಸ್‌ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಸರ್ವತ್ರ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಬಳಕೆದಾರರಿಗೆ ಮಾತ್ರ ಇದರ ಸಂಪೂರ್ಣ ಲಾಭ ಸಿಗಲಿದೆ.

Leave A Reply

Your email address will not be published.