Home News Kichcha Sudeep: ನಾನು, ದರ್ಶನ್ ಮೊದಲಿನಂತೆ ಇದ್ದಿದ್ದರೆ ಜೈಲಿಗೆ ಹೋಗಿ ಮಾತಾಡಿಸುತ್ತಿದ್ದೆ: ಸುದೀಪ್ ಬಿಚ್ಚಿಟ್ಟ ಕರಾಳ...

Kichcha Sudeep: ನಾನು, ದರ್ಶನ್ ಮೊದಲಿನಂತೆ ಇದ್ದಿದ್ದರೆ ಜೈಲಿಗೆ ಹೋಗಿ ಮಾತಾಡಿಸುತ್ತಿದ್ದೆ: ಸುದೀಪ್ ಬಿಚ್ಚಿಟ್ಟ ಕರಾಳ ಸತ್ಯ

Hindu neighbor gifts plot of land

Hindu neighbour gifts land to Muslim journalist

Kichcha Sudeep: ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಂದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಶಾಕಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಸುದೀಪ್ (Kichcha Sudeep) ಅವರು ‘ನಾನು ಮತ್ತು ದರ್ಶನ್ ಮೊದಲಿನಂತೆ ಮಾತನಾಡಿಕೊಳ್ಳುತ್ತಿದ್ದರೆ ಖಂಡಿತ ಈ ಸ್ಥಿತಿಯಲ್ಲಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬರುತ್ತಿದ್ದೆ’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಅಲ್ಲದೆ ‘ದರ್ಶನ್ ವಿಚಾರವಾಗಿ ನಾನು ಹೇಳಬೇಕಿರೋದನ್ನು ಈಗಾಗಲೇ ಹೇಳಿದ್ದೇನೆ. ಮತ್ತೆ ಅದೇ ವಿಷಯ ಬೇಡ. ಅವರಿಗೆ ಅಭಿಮಾನಿಗಳು ಇದ್ದಾರೆ. ಅವರದ್ದೇ ಕುಟುಂಬ ಇದೆ. ನಾನು ಮಾತನಾಡುವುದರಿಂದ ಯಾರಿಗೂ ನೋವಾಗುವುದು ಬೇಡ. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೂ ನೋವು ಆಗೋದು ಬೇಡ” ಎಂದಿದ್ದಾರೆ.

ಈ ದೇಶದಲ್ಲಿ ಕಾನೂನಿಗೆ ಎಲ್ಲರೂ ಸಮಾನರು,  ಕಾನೂನು ಮೇಲೆ ನಂಬಿಕೆ ಇಡಬೇಕು. ನನಗೆ ಸರ್ಕಾರ ಮತ್ತು ಕಾನೂನಿನ ಮೇಲೆ ನಂಬಿಕೆ ಇದೆ. ಇನ್ನು ನಾವು ದೂರ ಆಗಿದ್ದೇವೆ ಎಂದ ಮಾತ್ರಕ್ಕೆ ನಾನು ಸರಿ ಇಲ್ಲ. ಅವರು ಸರಿ ಇಲ್ಲ ಅಂತಲ್ಲ. ನಾವಿಬ್ಬರೂ ಒಟ್ಟಿಗೆ ಸರಿಯಿಲ್ಲ. ಹಗಲಿನಲ್ಲಿ ಸೂರ್ಯ, ರಾತ್ರಿ ಚಂದ್ರ ಬರಬೇಕು. ಒಟ್ಟಿಗೆ ಬರಕ್ಕೆ ಆಗಲ್ಲ. ಹಾಗಂತ ದರ್ಶನ್ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಎಂದು ನಾನು ಹೇಳುತ್ತಿಲ್ಲ. ನಾನು ಬೇರೆ, ಅವರು ಬೇರೆ. ನಮ್ಮಿಬ್ಬರ ಅಭಿರುಚಿ ಮತ್ತು ಯೋಚನೆಗಳೇ ಬೇರೆ ಬೇರೆ’ ಎಂದು ಹೇಳಿದರು. ‘ಹಾಗಂತ ನಾನು ಮತ್ತು ದರ್ಶನ್ ಶತ್ರುಗಳಲ್ಲ, ಮನಸ್ಸಿಂದ ಬಂದರೆ ಯಾರು ಏನೇ ಅಂದುಕೊಂಡರೂ ನಾನು ಅಂಥವರ ಜತೆಗೆ ನಿಲ್ಲುತ್ತೇನೆ ಎಂದರು .