

Marriage Rules: ಅದೊಂದು ಕಾಲವಿತ್ತು. ಮನೆಯ ಹಿರಿಯರು ಗಂಡು ಹೆಣ್ಣನ್ನು ನೋಡಿ ಮದುವೆ(Marriage) ನಿರ್ಧರಿಸುತ್ತಿತ್ತಿದ್ರು. ಆಮೇಲೆ ಹಿರಿಯರ ಸಮ್ಮುಖದಲ್ಲಿ ಗಂಡು ಹೆಣ್ಣು ನೋಡುವ ಶಾಸ್ತ್ರ ಬಂತು. ಆಮೇಲೆ ಕೇವಲ ಗಂಡು ಹೆಣ್ಣು ಮಾತ್ರ ನೋಡಿಕೊಳ್ಳುವ ಹಾಗಾಯ್ತು. ಈಗ ಕೇವಲ ಹುಡುಗ ಬುಡುಗಿಯ ಬಯೋ ಡಾಟ(Biodata) ಮಾತ್ರ ಪರಿಗಣನೆಗೆ ತೆಗೆದುಕೊಂಡು ಮದುವೆ ಕಾಲ ಬಂತು. ಏನೆಂದರೆ ಈಗಿನ ಕಾಲದಲ್ಲಿ ಕೇವಲ BIODATAದ ಜೊತೆಗೆ ಹುಡುಗನ ಕೆಲಸ(Job), ಸಂಬಳ(Salary) ನೋಡುವುದರ ಜೊತೆಗೆ, ಪ್ರತ್ಯಕ್ಷವಾಗಿ ಭೇಟಿ ನೀಡಿ ಅವರ ಮನೆತನ ಸಂಸ್ಕಾರ ಗುಣ ಪರಿಸ್ಥಿತಿಯನ್ನು ನೋಡಿ ನಿರ್ಣಯ ತೆಗೆದುಕೊಳ್ಳಿ. ಪ್ರತಿಯೊಬ್ಬರಿಗೆ ಸರಕಾರಿ ನೌಕರಿ(Govt job) ಎಲ್ಲಿಂದ ಸಿಗುತ್ತೆ?
ಹಾಗೆ ಎಲ್ಲರೂ software engineer ಆಗಲು ಸಾಧ್ಯವೇ? ನಾವು ಸ್ವತಃ ನಮ್ಮ ಮಕ್ಕಳಿಗೆ ಸರಕಾರಿ ನೌಕರಿ ಕೊಡಿಸಲು ಸಾಧ್ಯವೇ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ. ಹಳ್ಳಿಗಳಲ್ಲಿ ಹೊಲ ಗದ್ದೆ ಇದ್ದರೆ, ಸಂಸ್ಕಾರವಂತನಾ, ಗುಣವಂತನಾ ಪರಿಶೀಲಿಸಿ, ಮನೆಯಲ್ಲಿ ಕುಳಿತು ಕನಸು ಕಾಣಬೇಡಿ. ಇಲ್ಲವಾದರೆ ಅವಸ್ಥೆ ಆಗಬಹುದು.
ಶೂನ್ಯದಿಂದ ಜಗತ್ತನ್ನು ನಿರ್ಮಾಣ ಮಾಡುವ ಹುಡುಗರು ಇದ್ದಾರೆ.
ಮತ್ತು ಶ್ರೀಮಂತಿಕೆಯ ಮದದಿಂದ ಕೆಡುವ ಕೆಡಿಸುವ ಮಕ್ಕಳು ಇದ್ದಾರೆ. ಬರಿ ಡಿಗ್ರೀ ನೋಡಿ ನಿರ್ಣಯ ತೆಗೆದುಕೊಳ್ಳುತ್ತಿದ್ದರೆ ಇದು ನಿಮ್ಮ ದೊಡ್ಡ ತಪ್ಪು. ಇಂಜಿನಿಯರ್ ಆದರು 8 ರಿಂದ 10000/- ವೇತನ ಪಡೆದು ಕೆಲಸ ಮಾಡುವವರಿದ್ದಾರೆ. ಪೊಲೀಸ್ ಭರ್ತಿ ನಡೆದಾಗ ನೋಡಿ ತಮಗೆ ಬೇಕಾದ ಡಿಗ್ರೀ ಹೊಂದಿದ ಹುಡುಗರು ಸಾಲಲ್ಲಿ ನಿಂತಿರುತ್ತಾರೆ. ಬಹುಶಃ ಆ ಸಾಲಿನಲ್ಲಿ ತಮ್ಮ ಮಗನೂ ಇರಲು ಬಹುದು ಇದರ ಬಗ್ಗೆ ವಿಚಾರ ಮಾಡಿ ಮತ್ತು ಪರಿಶೀಲಿಸಿ ನೋಡಿದ ನಂತರ ಮಾದುವೆಗೆ ನಿರ್ಣಯಿಸಿ.
ಬರಿ ಡಿಗ್ರೀ ನೇ ಬೇಕು ಎಂದರೆ ರಾತ್ರಿ 9:00 ನಂತರ ಬಾರ್ ನಲ್ಲಿ ಹೋಗಿ ನೋಡಿ. ಅನೇಕ ಡಿಗ್ರೀ ಹೋಲ್ಡರ್ಸ್ ಕಾಣಿಸುತ್ತಾರೆ. ಬರೀ ನೌಕರಿ ಸಿಗಲಿಲ್ಲವೆಂದು ದುಖಃ ಮರೆಯುವ ಔಷಧಿಯ ಜೊತೆಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳ್ತಾರೆ. ಇಂದು ಅನೇಕ ಹುಡುಗಿಯರ biodata ನೋಡಿ ನಗಬೇಕು ಅನಿಸುತ್ತದೆ. ಕಾರಣ ಜನ್ಮ ದಿನಾಂಕ ನೋಡಿ, ಬಹಳ ಹುಡುಗಿಯರ ವಯಸ್ಸು25 ರಿಂದ 30 ವರ್ಷಗಳಾದರೂ ಅವರ ಇಚ್ಛೆ, ಭಾವನೆಗಳ ವಿಚಾರ ಮಾಡುವದಿಲ್ಲ. ಇವತ್ತಿನ ದಿನಮಾನದಲ್ಲಿ ಮಾನವನ ಆಯಸ್ಸು ಸರಾಸರಿ 60 ವರ್ಷವಿದೆ. 30 ವರ್ಷದಲ್ಲಿ ಯಾವ ಸುಖ ಪಡೆಯುತ್ತಾರೆ ಹೇಳಿ. ಅತೀಯಾಗಿ ಪ್ರೀತಿ ಮಾಡಿ ಮಗಳ ಸಂಸಾರ ಜೀವನ ಏಕೆ ಹಾಳು ಮಾಡುತ್ತೀರಿ?
ಸರಕಾರಿ ನೌಕರಿಗೆ ಅಥವಾ ಒಳ್ಳೆಯ ನೌಕರಿಗೆ ಲಕ್ಷ ಲಕ್ಷ ಕೊಟ್ಟು ಸೇರುತ್ತಾರೆ ಮುಂದೆ ಅವರು ಲಂಚ ತೆಗೆದುಕೊಂಡೇ ಕೆಲಸ ಮಾಡುತ್ತಾರೆ. ಮಹಾಭಾರತದಲ್ಲಿ ಯುಧಿಷ್ಠರನು ಒಂದು ಸತ್ಯ ಹೇಳುತ್ತಿದ್ದ ಸಾವು ಎಲ್ಲರಿಗೂ ಇದೆ.. ಆದರೆ, ಸಾಯಲು ಯಾರು ತಯಾರಿಲ್ಲ ಇವತ್ತಿನ ಪರಿಸ್ಥಿತಿ ಹಾಗೆ ಬಹಳ ಗಂಭೀರವಾಗಿದೆ.
ಅನ್ನ ಎಲ್ಲರಿಗೂ ಬೇಕು. ಆದರೆ, ರೈತನ ಜೊತೆ ಮದುವೆ ಇಷ್ಟವಿಲ್ಲಾ ನೀರು ಎಲ್ಲರಿಗೂ ಬೇಕು. ಆದರೆ, ನೀರನ್ನು ಉಳಿಸಬೇಕು ಅಂತ ಅನ್ನಿಸುವುದಿಲ್ಲ. ನೆರಳು ಎಲ್ಲರಿಗೂ ಬೇಕು. ಆದರೆ, ಗಿಡ ಮರಗಳನ್ನು ಬೆಳೆಸಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ. ಸೊಸೆ ಎಲ್ಲರಿಗೂ ಬೇಕು. ಆದರೆ, ಮಗಳು ಹುಟ್ಟಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ. ಹಾಗೆ ಈ ರೀತಿಯಾಗಿ ವಿಚಾರ ಮಾಡಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ.
ದಯವಿಟ್ಟು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಇನ್ನೊಬ್ಬರ ಮನೆಗೆ ಧಾರೆ ಎರೆದು ಕೊಡುವಾಗ ಹುಡುಗನ ಕೇವಲ ಸಂಬಳ, ಮನೆ, ಮಠ ನೋಡಿ ಕೊಡಬೇಡಿ. ಒಂದಷ್ಟು ವಿಚಾರಿಸಿ, ಆತ ಕೃಷಿಕನಾಗಿದ್ದರೂ ಪರವಾಗಿಲ್ಲ, ಮಗಳ ಬದುಕು ಬಂಗಾರವಾಗಬೇಕು. ವರದಕ್ಷಿಣೆ, ಮನೆಕೆಲಸ, ಮನೆ ಚಾಕರಿ, ಸ್ವತಂತ್ರ್ಯ ಇಲ್ಲದ ಜೀವನ ನಡೆಸಲು ಶೋಕಿವಾಲ ಹುಡುಗರಿಗೆ ಮದುವೆ ಮಾಡಿ ಕೊಡದಿರಿ ಪೊಷಕರೇ. ಸ್ಟೇಟಸ್‌ನ ಮೇಲೆ ಬಿದ್ದು ಮಗಳ ಜೀವನ ಮುಗಿಸದಿರಿ.













