Noida : ಆಸ್ಪತ್ರೆಯಲ್ಲಿ ಶವಗಳ ಎದುರೇ ಸಿಬ್ಬಂದಿಗಳ ರತಿ ಕ್ರೀಡೆ – ವಿಡಿಯೋ ವೈರಲ್

Noida ದ ಆಸ್ಪತ್ರೆಯೊಂದರ ಶವಾಗಾರದಲ್ಲಿ (Mortuary) ಶವಗಳ ಮುಂದೇಯೇ ಕ್ಲೀನರ್ ಹಾಗೂ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಅವರ ಈ ಮಿಲನೋತ್ಸವದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

ಹೌದು, ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಇರಿಸಿದ್ದ ಶವದ ಮುಂದೆಯೇ ಆಸ್ಪತ್ರೆಯ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತ 6.17 ನಿಮಿಷದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಏನಿದೆ ವಿಡಿಯೋದಲ್ಲಿ?
ಶವ ಇರುವ ಸ್ಟ್ರೆಚರ್ ಕೆಳಗೆ ಕ್ಲೀನರ್ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಇದಕ್ಕೆ ಮಹಿಳೆ ಸಹಕರಿಸುವಂತೆ ತೋರುತ್ತಿದೆ. ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಮೆಂಟ್ ಹಾಕುತ್ತಿದ್ದಾರೆ.

ಕ್ಲೀನರ್ ಅನ್ನು ಈ ವರ್ಷದ ಜೂನ್‌ನಲ್ಲಿ ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಇನ್ನು ಆ ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವೀಡಿಯೋದಲ್ಲಿರುವ ಮಹಿಳೆ ಹೊರಗಿನವಳು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

 

Leave A Reply

Your email address will not be published.