Puttur: ಪುತ್ತೂರು: ಪಿಕಪ್ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಸವಾರ ಮೃತ್ಯು

Share the Article

Puttur: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು (puttur ) ಸಮೀಪ ಬೈಕ್‌ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಆ.18ರಂದು ಬೆಳಗ್ಗೆ ನಡೆದಿದೆ.

ಅಮ್ಮಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ(45 ವ)ರವರು ಮೃತಪಟ್ಟವರು.

ಅವರು ಬೆಳಗ್ಗೆ ಬೈಕ್‌ನಲ್ಲಿ ಅಮ್ಮಿನಡ್ಕದ ಸೆಲೂನ್‌ ಅಂಗಡಿಗೆ ಬರುತ್ತಿದ್ದ ವೇಳೆ ಸುಳ್ಯ ಕಡೆಯಿಂದ  ಬರುತಿದ್ದ ಪಿಕಪ್ ನಡುವೆ ಅಪಘಾತ ಸಂಭವಿಸಿದೆ.

Leave A Reply