Animals in Dreams: ನಿಮ್ಮ ಕನಸಲ್ಲಿ ಈ ಪ್ರಾಣಿಗಳನ್ನು ಕಂಡರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ!

Animals in Dreams: ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಎಲ್ಲರಿಗೂ ಬೀಳುತ್ತೆ. ಆದರೆ ಯಾರಾದರೂ ತಮ್ಮ ಕನಸಿನಲ್ಲಿ ಕೆಲವು ಪ್ರಾಣಿಗಳನ್ನು ನೋಡಿದರೆ ಅದು ಶುಭ ಸಂಕೇತ ಎನ್ನಲಾಗುತ್ತೆ. ಹೌದು, ಕೆಲವೊಮ್ಮೆ ಪ್ರಾಣಿಗಳು ಕನಸಿನಲ್ಲಿಯೂ ಕಾಣಸಿಗುತ್ತವೆ. ಅಂತಹ ಕೆಲವು ಪ್ರಾಣಿಗಳನ್ನು ಕನಸಿನಲ್ಲಿ ನೋಡುವುದು ಸ್ವಪ್ನಶಾಸ್ತ್ರದಲ್ಲಿ ಶುಭ ಎಂದು ಹೇಳಲಾಗುತ್ತದೆ. ನಿಮ್ಮ ಕನಸಿನಲ್ಲಿ ಪ್ರಾಣಿಗಳು (Animals in Dreams) ಪದೇ ಪದೇ ಕಾಣಿಸಿಕೊಂಡರೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದರ್ಥ.

ಸ್ವಪ್ನಶಾಸ್ತ್ರದ ಪ್ರಕಾರ, ಯಾರಾದರೂ ತಮ್ಮ ಕನಸಿನಲ್ಲಿ ಮೊಲವನ್ನು ನೋಡಿದರೆ ಶುಭ ಸಂಕೇತ. ಇದರರ್ಥ ನಿಮ್ಮ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ ಎಂದು ಅರ್ಥ.

ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಸುವನ್ನು ನೋಡಿದರೆ, ಅದು ಸಹ ಅದೃಷ್ಟ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ.  ಕನಸಿನಲ್ಲಿ ಹಸುವನ್ನು ಕಂಡರೆ ಆ ವ್ಯಕ್ತಿಗೆ ದೇವರು ತನ್ನ ಆಶೀರ್ವಾದವನ್ನು ನೀಡಲಿದ್ದಾನೆ ಎಂದರ್ಥ. ಮುಂದಿನ ದಿನಗಳಲ್ಲಿ ನೀವು ಮಾಡುವ ಎಲ್ಲಾ ಕಾರ್ಯ ಕೈಗೂಡುತ್ತೆ ಎಂದು ಕನಸು ಹೇಳುತ್ತದೆ.

ಇನ್ನು ವ್ಯಕ್ತಿಯು ತನ್ನ ಕನಸಿನಲ್ಲಿ ಆನೆಯನ್ನು ನೋಡಿದರೆ, ಅವರಿಗೆ ಒಳ್ಳೆಯ ದಿನಗಳು ಬರಲಿವೆ ಎಂದರ್ಥ. ವ್ಯಕ್ತಿಗೆ ಸಂಪತ್ತು ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ. ಶೀಘ್ರದಲ್ಲೇ ಅವರು ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಪಡೆಯುತ್ತಾರೆ.

ಹಾಗೆಯೇ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಾವು ಕಂಡರೆ ಶುಭ ಸೂಚನೆ ಎಂದು ಹೇಳಲಾಗುತ್ತದೆ. ಅದರಲ್ಲೂ ಕನಸಿನಲ್ಲಿ ಕಪ್ಪು ಹಾವನ್ನು ನೋಡಿದರೆ, ಅದು ಅದೃಷ್ಟ ಎಂದರ್ಥ. ಸದ್ಯದಲ್ಲಿಯೇ ನಿಮ್ಮ ಕೀರ್ತಿ ಹೆಚ್ಚಲಿದೆ ಎಂದು ಹೇಳಲಾಗುತ್ತದೆ.

ಹಾಗೆಯೇ ನೀವು ಕನಸಿನಲ್ಲಿ ಗೂಬೆಯನ್ನು ಕಂಡರೆ ನಿಮ್ಮ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎಂದರ್ಥ. ಕನಸಿನಲ್ಲಿ ಗೂಬೆಯನ್ನು ಕಂಡರೆ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ .

ಇದಲ್ಲದೆ, ನಿಮ್ಮ ಕನಸಿನಲ್ಲಿ ಬಿಳಿ ಸಿಂಹವನ್ನು ಕಂಡರೆ ಅದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ ಎಂಬ ಅರ್ಥವಾಗಿದೆ. ಅಲ್ಲದೆ, ಜೀವನದಲ್ಲಿ ಯಶಸ್ವಿಯಾಗುತ್ತೀರಿ ಎಂದು ಕನಸು ಹೇಳುತ್ತದೆ.

Leave A Reply

Your email address will not be published.