Ananth Ambani: ಅನಂತ್ ರಾಧಿಕಾ ಮದುವೆ; ಅನಂತ್ ಅಂಬಾನಿಯ 25 ಗೆಳೆಯರಿಗೆ ದೊರಕಿದೆ ಕೋಟಿ ಮೌಲ್ಯದ ಗಿಫ್ಟ್
Ananth Ambani: ಅನಂತ್ ಅಂಬಾನಿ ಮದುವೆ ಮಗಿದರೂ ವಿವಾಹನ ನಂತರದ ಕಾರ್ಯಕ್ರಮಗಳು ಇನ್ನೂ ನಡೆಯುತ್ತಲೇ ಇದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ತಾರೆಗಳು ಸೇರಿದಂತೆ ಅನೇಕ ರಂಗದ ಗಣ್ಯರು ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಖಾಸ್ ಗೆಳೆಯರಿಗೆ 25 ಕೋಟಿ ಮೌಲ್ಯದ ಗಿಫ್ಟ್ ದೊರಕಿದೆ ಎಂದು ವರದಿಯಾಗಿದೆ.
Udupi: ಉಡುಪಿಗೆ ಬಂದು ಅಣ್ಣಪ್ಪ ಪಂಜುರ್ಲಿಯ ಮೊರೆ ಹೋದ ಪಾಕಿಸ್ತಾನ ಮೂಲ ಕುಟುಂಬ – ಯಾವ ಕಾರಣಕ್ಕಾಗಿ?
ವರದಿಗಳ ಪ್ರಕಾರ ವರ ಅನಂತ್ ತನ್ನ 25 ಅತ್ಯಾಪ್ತರಿಗೆ ಲಿಮಿಡೆಟ್ ಎಡಿಷನ್ Audemard Piguet ಕೈಗಡಿಯಾರ ನೀಡಿದ್ದಾರೆ ಎನ್ನಲಗಿದೆ. ಆರ್ಡರ್ ಕೊಟ್ಟು ವಿಶೇಷವಾಗಿರುವಂಹ 25 ವಾಚ್‌ಗಳನ್ನು ತರಿಸಲಾಗಿತ್ತು. ಇದರ ಬೆಲೆ ತಲಾ 1.5 ರಿಂದ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.
ಈ ವಾಚನ್ನು 18 ಕ್ಯಾರಟ್ ಚಿನ್ನದಿಂದ ತಯಾರಿಸಲಾಗಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಈ ಕೈ ಗಡಿಯಾರವನ್ನು ಮಿಜಾನ್ ಜಾಫರಿ, ವೀರ್ ಪಹಾಡಿಯಾ, ಶಿಖರ್ ಫಹಾಡಿಯಾ, ಶಾರೂಖ್ ಖಾನ್, ರಣವೀರ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿ ಅತ್ಯಾಪ್ತರಿಗೆ ಮಾತ್ರ ನೀಡಲಾಗಿದೆಯಂತೆ.
Uttarpradesh: ತಾಯಿ ಮೇಲೆ ಅತ್ಯಾಚಾರ! 30 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಮಗ!