Home Crime Maharastra: ಕೈ ಕೈ ಹಿಡಿದು, ಬೆವರುತ್ತಾ, ಅಳುತ್ತಾ ಹೋಗಿ ರೈಲಿಗೆ ತಲೆ ಕೊಟ್ಟ ತಂದೆ ಮಗ...

Maharastra: ಕೈ ಕೈ ಹಿಡಿದು, ಬೆವರುತ್ತಾ, ಅಳುತ್ತಾ ಹೋಗಿ ರೈಲಿಗೆ ತಲೆ ಕೊಟ್ಟ ತಂದೆ ಮಗ – ಅಬ್ಬಾ.. ಭಯಾನಕ ವಿಡಿಯೋ ವೈರಲ್ !!

Maharastra

Hindu neighbor gifts plot of land

Hindu neighbour gifts land to Muslim journalist

Maharatsra: ಸೋಷಿಯಲ್ ಮೀಡಿಯಾಗಳಲ್ಲಿವೈರಲ್ ಆದ ಆ ಒಂದು ವಿಡಿಯೋ ನೋಡುತ್ತಿದ್ದರೆ ಕುತೂಹಲ, ಆತಂಕ ಹೆಚ್ಚುತ್ತದೆ. ಮೈ ಕುಳಿತಲ್ಲೇ ಬೆವರುತ್ತದೆ. ಗಂಟಲು ಕಟ್ಟಿ ಬಿಡುತ್ತದೆ. ಮುಂದಾಗುವುದನ್ನು ತಡೆದುಬಿಡೋಣ ಅನಿಸುತ್ತದೆ. ಆದರೆ ಇಲ್ಲಿ ನಮಗೆ ಏನೇ ಅನಿಸಿದರು ಅಲ್ಲಿ ಅನ್ಯಾಯವಾಗಿ ಎರಡು ಪ್ರಾಣ ಪಕ್ಷಿಗಳು ಹಾರಿಹೋಗಿವೆ.

ಹೌದು, ರೈಲು ನಿಲ್ದಾಣವೊಂದರಲ್ಲಿ ತಂದೆ-ಮಗ ಇಬ್ಬರು ಅಳುತ್ತಾ, ಕಣ್ಣೀರು ಒರೆಸುತ್ತಾ, ಕೈ ಕೈ ಹಿಡಿದು ಹೋಗಿ ಸೀದಾ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಷ್ಯವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ನೋಡುಗರನ್ನು ಇದು ಒಮ್ಮೆಲೆ ಬೆಚ್ಚಿಬೀಳಿಸುತ್ತದೆ.

ಮಹಾರಾಷ್ಟ್ರದ(Maharastra) ಪಾಲ್ಗಾರ್ ಜಿಲ್ಲೆಯ(Palgar Distric) ಬಯಾಂದ್ರ ರೈಲು ನಿಲ್ದಾಣದಲ್ಲಿ ಬೆಳಗ್ಗೆ 9.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ವಸೈ ನಿವಾಸಿಯಾದ 60 ವರ್ಷದ ಹರೀಶ್ ಮೆಹ್ತಾ(Harish Mehta) ಹಾಗೂ 35 ವರ್ಷದ ಪುತ್ರ ಜಯ್ ಮೆಹ್ತಾ(Jay Mehta) ಅವರ ಹಾವಿನ ಭೀಕರ ಘಟನೆಯನ್ನು ಸಿಸಿಟಿವಿ ದೃಶ್ಯಗಳು ಹೇಳುತ್ತವೆ. ಭಯಾನಕ ಕತೆ ಹೇಳುತ್ತಿದೆ. ರೈಲು ಬರುತ್ತಿದ್ದಂತೆ ಇಬ್ಬರು ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ರೈಲಿಗೆ ತಲೆಯೊಡ್ಡಿದ ದಾರುಣ ಘಟನೆ ಮನಕಲುಕುವಂತಿದೆ.

ಏನಿದೆ ಸಿಸಿಟಿವಿ ವಿಡಿಯೋದಲ್ಲಿ?
ಪ್ಲಾಟ್‌ಫಾರ್ಮ್ ಮೂಲಕ ನಡೆದುಕೊಂಡು ಸಾಗುವಾಗ ಒಂದು ರೈಲು ಪಕ್ಕದಿಂದಲೇ ಸಾಗಿದೆ. ಆದರೆ ಪ್ಲಾಟ್‌ಫಾರ್ಮ್ ಬಳಿಕ ರೈಲು ಹಳಿಗಳ ಮೇಲೆ ನಡೆದುಕೊಂಡು ಸಾಗುವಾಗ ವಿರುದ್ದ ದಿಕ್ಕಿನಿಂದ ರೈಲು ಬಂದಿದೆ. ಇಬ್ಬರು ಕೈ ಕೈ ಹಿಡಿದುಕೊಂಡಿದ್ದಾರೆ. ತಕ್ಷಣವೇ ರೈಲು ಬರುತ್ತಿರುವ ಹಳಿಯತ್ತ ತೆರಳಿದ್ದಾರೆ. ಬಳಿಕ ರೈಲಿ ಹಳಿಯಲ್ಲಿ ತಲೆ ಇಟ್ಟ ಮಲಗಿದ್ದಾರೆ. ಅಷ್ಟೊತ್ತಿಗೆ ರೈಲು ಇವರಿಬ್ಬರ ಮೇಲಿನಿಂದ ಸಾಗಿದೆ. ಕ್ಷಣಾರ್ಧದಲ್ಲಿಲಿ ರೈಲು ಸಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಸ್ಥಳ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇವರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಈ ಘಟನೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡಿದರೆ ಆ ಅಪ್ಪ ಮಗ ಯಾವುದೋ ವಿಚಾರಕ್ಕೆ ಭಾರೀ ನೊಂದಿರುವರೆಂದು ತಿಳಿಯುತ್ತದೆ. ಈ ವೇಳೆ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರಲ್ಲೂ ಆತಂಕ, ನೋವು ಗೋಚರಿಸುತ್ತಿದೆ. ಇಬ್ಬರು ಬೆವರುತ್ತಿದ್ದಾರೆ. ಬೆವರನ್ನು, ಕಣ್ಣೀರನ್ನು ಒರೆಸುತ್ತಾ ಸಾಗಿದ್ದಾರೆ. ಆತಂಕ, ನೋವು, ಮಾನಸಿಕ ಹಿಂಸೆಗಿಂತ ಸಾವೇ ಸಿಹಿ ಎಂದು ನಿರ್ಧರಿಸಿದಂತಿದೆ.

Govind Karajola: 3 ಗುಂಪುಗಳಾಗಿ ಒಡೆದುಹೋದ ರಾಜ್ಯ ಕಾಂಗ್ರೆಸ್- ಒಂದು ಸಿದ್ದರಾಮಯ್ಯದ್ದು, ಇನ್ನೊಂದು ಡಿಕೆಶಿ ಯದ್ದು, ಹಾಗಿದ್ರೆ ಮತ್ತೊಂದು ಯಾವುದು?