Kissing disease: ಕೊರೋನ ಬೆನ್ನಲ್ಲೇ ಕಿಸ್ಸಿಂಗ್ ಕಾಯಿಲೆ ಎಂಟ್ರಿ! ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ! ಏನಿದು ಜೀವ ತೆಗಿಯೋ ಹೊಸ ಕಾಯಿಲೆ?

Kissing disease: ಖಾಯಿಲೆ ಅಂದ್ರೆನೆ ಭಯ. ಅದರಲ್ಲೂ ಕೊರೊನಾ ವೈರಸ್‌ ಕೊಟ್ಟು ಹೋದ ಭೀಕರತೆಯ ನೆನಪಿನಿಂದ ಇನ್ನೂ ಬಹುತೇಕರು ಚೇತರಿಸಿಕೊಂಡಿಲ್ಲ. ಹೀಗಿರುವಾಗ ಅದರ ಜೊತೆಗೆ ಮತ್ತೊಂದು ವೈರಸ್ ಎಂಟ್ರಿ ಕೊಟ್ಟಿದೆ. ಅದೇ ಕಿಸ್ಸಿಂಗ್ ಡಿಸೀಜ್(Kissing Disease)! ಏನದು ಕಿಸ್ಸಿಂಗ್ ಡಿಸೀಜ್ ಅಂತ ಇಲ್ಲಿ ತಿಳಿಸ್ತೀವಿ ನೋಡಿ.

Darshan: ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿ ಭಾರೀ ಇಳಿಕೆ – ಕಡಿಮೆ ಆದದ್ದೆಷ್ಟು ?

ಹೌದು, ಈಗಾಗಲೇ ಅಮೆರಿಕದಂತಹ ದೇಶಗಳಲ್ಲಿ ಕಿಸ್ಸಿಂಗ್ ಡಿಸೀಜ್ ಎಚ್ಚರಿಕೆ ಸೂಚನೆ ನೀಡಿದೆ. ಅಂದರೆ ಕಿಸ್ಸಿಂಗ್ ಕಾಯಿಲೆ ಈಗ ಅಲ್ಲಿ ಅಪಾಯದ ಮಟ್ಟಕ್ಕೇರಿದೆ. ವ್ಯಕ್ತಿಯ ಲಾಲಾರಸದ ಸಂಪರ್ಕ ಅಂದರೆ ಸಾಮಾನ್ಯವಾಗಿ ಕಿಸ್ಸಿಂಗ್ ಮೂಲಕವೇ ಈ ಸಾಂಕ್ರಾಮಿಕ ರೋಗ ಹರಡುತ್ತಿದೆ. ಈಗಾಗಲೇ ಬ್ರಿಟನ್‌ನಲ್ಲಿ ಈ ವೈರಸ್‌ನಿಂದಾಗಿ ಕಾಲೇಜು ವಿದ್ಯಾರ್ಥಿಯೊರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಾಮಾನ್ಯವಾಗಿ ಈ ಡಿಸೀಜ್ಎಪ್ಸ್ಟೀನ್-ಬಾರ್ ವೈರಸ್ (EBV) ನಿಂದ ಉಂಟಾಗುತ್ತದೆ. ಇದು ಸೋಂಕಿತ ವ್ಯಕ್ತಿಯ ಬಾಯಿಯಿಂದ ಲಾಲಾರಸದ ನೇರ ಸಂಪರ್ಕದಿಂದ ಅಥವಾ ರಕ್ತದಂತಹ ಇತರ ದೈಹಿಕ ದ್ರವಗಳ ಮೂಲಕ ಹರಡುತ್ತದೆ. ಚುಂಬನ, ಲೈಂಗಿಕ ಸಂಪರ್ಕ ಅಥವಾ ಆಹಾರ ಮತ್ತು ಪಾನೀಯಗಳನ್ನು ಹೊಂದಿರುವ ಯಾರೊಂದಿಗಾದರೂ ಹಂಚಿಕೊಳ್ಳುವ ಮೂಲಕ ಹರಡಬಹುದು.

ಇನ್ನು ಲಕ್ಷಣಗಳ ಬಗ್ಗೆ ಹೇಳೋದಾದ್ರೆ, ಕಿಸ್ಸಿಂಗ್ ಕಾಯಿಲೆ ಲಿಪ್‌ಲಾಕ್ ಕಿಸ್, ಒಂದೇ ತಟ್ಟೆಯಲ್ಲಿ ಊಟ ಮಾಡೋದು, ಸ್ಪೂನ್, ಒಂದೇ ಸಿಗರೇಟು ಇಬ್ಬರು ಬಳಸುವುದು, ಲಿಪ್ ಕಿಸ್ಸಿಂಗ್ ಮಾಡೋದು ಹೀಗೆ  ವೈರಸ್ ದೇಹವನ್ನು ಪ್ರವೇಶಿಸಿದಾಗ, ಮೊದಲ ಬದಲಾವಣೆಯು ಗಂಟಲಿನಲ್ಲಿ ಕಂಡುಬರುತ್ತದೆ. ಮೊದಲು ಕೆಮ್ಮು ಮತ್ತು ವ್ಯಕ್ತಿಯ ಗಂಟಲು ನೋಯಿಸಲು ಪ್ರಾರಂಭಿಸುತ್ತದೆ ಮತ್ತು ಅವನಿಗೆ ಗ್ರಂಥಿಗಳ ಜ್ವರ ಬರುತ್ತದೆ. ಜ್ವರ ಬಂದಾಗ ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ. ಇದರ ನಂತರ ವ್ಯಕ್ತಿಯು ವಾಂತಿ ಮಾಡಲು ಪ್ರಾರಂಭಿಸುತ್ತಾನೆ ಆಗಾಗ್ಗೆ ಮೈ ಬೆವರಲು ಹೆಚ್ಚಾಗುತ್ತದೆ.

ಜ್ವರದ ತೀವ್ರತೆ ಹೆಚ್ಚಾದಂತೆ ದೇಹದ ಮೇಲೆ ದದ್ದುಗಳು ಏಳುತ್ತವೆ. ತಲೆ ಮತ್ತು ಮೈಕೈ ನೋವು ಕಾಣಿಸಿಸಕೊಳ್ಳುತ್ತದೆ. ಅಲ್ಲದೆ ಹಸಿವಿನ ಕೊರತೆ, ಯಕೃತ್ತಿನಲ್ಲಿ ನೋವು ಸಹ ಇದರ ಲಕ್ಷಣಗಳಾಗಿವೆ. ಈ ರೋಗವು ಮುಖ್ಯವಾಗಿ ಲಾಲಾರಸದ ಮೂಲಕ ದೇಹವನ್ನು ಪ್ರವೇಶಿಸುವುದರಿಂದ ಇದನ್ನು ಕಿಸ್ಸಿಂಗ್ ಕಾಯಿಲೆ ಎಂದೇ ಹೆಸರಾಗಿದೆ.

ಮುಖ್ಯವಾಗಿ ಕಿಸ್ಸಿಂಗ್ ಕಾಯಿಲೆ ಯಕೃತ್ತಿನ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಯಕೃತ್ತಿನ ವೈಫಲ್ಯ ಮತ್ತು ಹೆಪಟೈಟಿಸ್ ಸಹ ಸಂಭವಿಸಬಹುದು.ಸದ್ಯ ಕಿಸ್ಸಿಂಗ್ ಕಾಯಿಲೆ ತಡೆಗಟ್ಟಲು ಮುಖ್ಯವಾಗಿ  ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ  ಇತರ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ವೈದ್ಯರು ಸಲಹೆ ನೀಡಿರುತ್ತಾರೆ.

Puri Jagannath Temple: ಪುರಿ ಜಗನ್ನಾಥ ದೇವಾಲಯದ ಆ ಒಂದು ವಿಚಾರ ಕೇಳಿ ಘಟಾನುಘಟಿ ಸೈಂಟಿಸ್ಟ್ ಗಳೇ ಶಾಕ್ ಆಗಿದ್ದರು !!

 

Leave A Reply

Your email address will not be published.