Traffic Police: ಈ ನಿಯಮ ಪಾಲಿಸದೇ ಇದ್ರೆ ಹೆಲ್ಮೆಟ್ ಹಾಕಿದ್ರು ಬೀಳುತ್ತೆ ದಂಡ!

Traffic Police: ಬೆಂಗಳೂರು ಟ್ರಾಫಿಕ್ ಪೊಲೀಸರು ಕಳಪೆ, ಗುಣಮಟ್ಟವಿಲ್ಲದ ಹೆಲ್ಮೆಟ್ ಹಾಗೂ ಅರ್ಧ ಹೆಲ್ಮೆಟ್  ಧರಿಸುವವರ ವಿರುದ್ಧ ಹೆಚ್ಚಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈಗಾಗಲೇ ಪೊಲೀಸರು ಹೆಲ್ಮೆಟ್‌ಗಳ ಮಹತ್ವದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಆದಾಗ್ಯೂ, ಅನೇಕ ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್, ಗಲ್ಲದ ಪಟ್ಟಿಗಳಿಲ್ಲದ ಹೆಲ್ಮೆಟ್ ಮತ್ತು ಪ್ರಮಾಣಿತವಲ್ಲದ ಹೆಲ್ಮೆಟ್​ಗಳನ್ನು ಧರಿಸಿರುವುದು ಕಂಡುಬರುತ್ತದೆ. ಇದರಿಂದ ಅಪಾಯವೇ ಹೆಚ್ಚು. ಅದಕ್ಕಾಗಿ ಅಪಾಯವನ್ನು ತಪ್ಪಿಸಲು ವಿಶೇಷ ಕಾರ್ಯಾಚರಣೆ ನಡೆಸಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು (Traffic Police) ತಿಳಿಸಿದ್ದಾರೆ.

Bank Holidays July 2024: ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ: ಇಲ್ಲಿದೆ ಡಿಟೇಲ್ಸ್ !

ಮುಖ್ಯವಾಗಿ ದ್ವಿಚಕ್ರ ವಾಹನ ಅಪಘಾತಗಳ ಸಂದರ್ಭ ಸವಾರರ ಸಾವುಗಳಿಗೆ ಪ್ರಮುಖ ಕಾರಣವೆಂದರೆ ತಲೆ ಮತ್ತು ಕುತ್ತಿಗೆ ಗಾಯಗಳಾಗಿವೆ. ಆದ್ದರಿಂದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (Bureau of Indian Standards) ಮಾನದಂಡಕ್ಕೆ ಅನುಗುಣವಾದ ಗುಣಮಟ್ಟದ ಹೆಲ್ಮೆಟ್ (Helmet) ಧರಿಸುವುದರಿಂದ ಇದನ್ನು ತಡೆಯಬಹುದು.

ಸದ್ಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 (ಎ) ಪ್ರಕಾರ ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಎಲ್ಲರೂ ದ್ವಿಚಕ್ರ ವಾಹನ ಪ್ರಯಾಣದ ವೇಳೆ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.

ಮಾಹಿತಿ ಪ್ರಕಾರ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಮಾತ್ರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್​​​ಗೆ ಅನುಗುಣವಾಗಿ ಸರಿಯಾದ ಹೆಲ್ಮೆಟ್ ಧರಿಸುತ್ತಾರೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ತಿಳಿಸಿದ್ದಾರೆ.

ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕೆ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ವಾಹನ ಸವಾರರು ಗುಣಮಟ್ಟವಿಲ್ಲದ, ಅಗ್ಗದ ಹೆಲ್ಮೆಟ್ ಧರಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಅನೇಕರು ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸಿಕೊಂಡು, ಹೆಲ್ಮೆಟ್ ಹಾಕಿದರೂ ದಂಡ ವಿಧಿಸುತ್ತಿದ್ದೀರಿ ಎಂದು ಪೊಲೀಸರ ಬಳಿ ವಾದಿಸುತ್ತಾರೆ. ಆದರೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅಡಿಯಲ್ಲಿ ಸ್ಟಾಂಡರ್ಡ್ ಅಲ್ಲದ ಹೆಲ್ಮೆಟ್, ಅರ್ಧ ಹೆಲ್ಮೆಟ್ ಧರಿಸುವ ವಾಹನ ಚಾಲಕರಿಗೆ ಪೊಲೀಸರು ದಂಡ ವಿಧಿಸಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದೆ ತಿಳಿಸಿದ್ದಾರೆ. ಆದ್ದರಿಂದ ಇನ್ನುಮುಂದೆ ಸ್ಟಾಂಡರ್ಡ್ ಅಲ್ಲದ ಹೆಲ್ಮೆಟ್, ಅರ್ಧ ಹೆಲ್ಮೆಟ್ ಧರಿಸುವ ವಾಹನ ಚಾಲಕರಿಗೆ ಪೊಲೀಸರು ದಂಡ ವಿಧಿಸುವುದು ಖಚಿತ.

Assembly By Election: ಚನ್ನಪಟ್ಟಣ ಉಪಚುನಾವಣೆ – ಇವರೆನಾ ಕಾಂಗ್ರೆಸ್ ಅಭ್ಯರ್ಥಿ ?!

Leave A Reply

Your email address will not be published.