Assembly By Election: ಚನ್ನಪಟ್ಟಣ ಉಪಚುನಾವಣೆ – ಇವರೆನಾ ಕಾಂಗ್ರೆಸ್ ಅಭ್ಯರ್ಥಿ ?!
				
Assembly By Election : ಲೋಕಸಭಾ ಚುನಾವಣೆ(Parliament Election) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಉಪಚುನಾವಣೆಯ(Assembly By Election) ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾಗಿದ್ದರೂ ಇನ್ನೂ ಅಭ್ಯರ್ಥಿಗಳ ಆಯ್ಕೆ ಕುತೂಹಲವಾಗಿಯೇ ಉಳಿದಿದೆ. ಅದರಲ್ಲೂ ಚನ್ನಪಟ್ಟಣ(Channapattana) ಅಭ್ಯರ್ಥಿಯ ಆಯ್ಕೆ ಅಂತೂ ಹೆಚ್ಚೆಂದೇ ಹೇಳಬಹುದು. ಕಾಂಗ್ರೆಸ್ ನಡೆಯಂತೂ ದಿನದಿಂದ ದಿನಕ್ಕೆ ಕುತೂಹಲ ಹುಟ್ಟುಹಾಕುತ್ತಿದೆ. ಆದರೀಗ ಅಚ್ಚರಿ ಎಂಬಂತೆ ಡಿಸಿಎಂ ಡಿ ಕೆ ಶಿವಕುಮಾರ್(D K Shivkumar) ಕಾಂಗ್ರೆಸ್ ನಿಂದ ಚನ್ನಪಟ್ಟಣದಲ್ಲಿ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ.

ಹೌದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಕೊಂಡ ಬೆಂಗಳೂರು ಗ್ರಾಮಾಂತರ(Bengaluru Rural) ಲೋಕಸಭಾ ಕ್ಷೇತ್ರದಲ್ಲಿಯೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಬರುತ್ತದೆ. ಅಲ್ಲದೆ ಇದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಿದ ಕ್ಷೇತ್ರ. ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರಮುಖವಾದುದು. ಹೀಗಾಗಿ ಸೋತಲ್ಲೇ ಗೆಲ್ಲಬೇಕು ಎಂಬುದು ಕಾಂಗ್ರೆಸ್ ನ ಹೆಬ್ಬಯಕೆ. ಹೀಗಾಗಿ ಡಿ ಕೆ ಶಿವಕುಮಾರ್ ಅವರೇ ಇಲ್ಲಿಂದ ಕಣಕ್ಕಿಳಿದು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇದೀಗ ಡಿಕೆ ಸುರೇಶ್(D K Suresh) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಡಿ ಕೆ ಸುರೇಶ್ ಹೇಳಿದ್ದೇನು?
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ ಸ್ಪರ್ಧಿಸುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಆ ಕುರಿತು ನನ್ನ ಬಳಿ ಚರ್ಚೆ ಆಗಿಲ್ಲ. ಪಕ್ಷ ತೀರ್ಮಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನ ಚುನಾವಣೆಗೆ ನಿಲ್ಲಿಸುತ್ತದೆ. ನಾನು ಕೂಡ ಒಬ್ಬ ಕಾರ್ಯಕರ್ತನಾಗಿ ಚುನಾವಣೆಯಲ್ಲಿ ಕೆಲಸ ಮಾಡ್ತೀನಿ. ಚನ್ನಪಟ್ಟಣಕ್ಕೆ ರಾಜೀನಾಮೆ ಕೊಟ್ಟು ಈಗಾಗಲೇ ಒಂದು ವಾರ ಆಗಿದೆ. ಈ ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಡಿಕೆ ಶಿವಕುಮಾರ ಅವರು ತೆರವಾಗಿರುವ ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಮಾಡ್ತಾ ಇದ್ದಾರೆ ಎಂದರು.
ಇಷ್ಟೇ ಅಲ್ಲದೆ ತಮಗೆ ಟಿಕೆಟ್ ಸಿಗುತ್ತದೆಯಾ? ಎಂದಿದಕ್ಕೆ ನಾನು ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದೆಲ್ಲವೂ ಮಾಧ್ಯಮಗಳ ಊಹಾಪೋಹವಷ್ಟೇ. ಚುನಾವಣೆ ಸೋಲಿನಿಂದ ನಾನು ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗಡೆ ಬಂದಿದ್ದೇನೆ ಎಂದು ಹೇಳಿದ್ದಾರೆ.
			