Toothpaste: ಸಿಹಿ ಹೆಚ್ಚಿರುವ ಟೂಥ್ ಪೇಸ್ಟ್ ಬಳಸುತ್ತೀರಾ? ಈ ಅಪಾಯ ನಿಮಗೆ ಕಟ್ಟಿಟ್ಟ ಬುತ್ತಿ!
Toothpaste : ಅಚ್ಚರಿಯ ವಿಷಯ ಅಂದರೆ ಟೂತ್ ಪೇಸ್ಟ್ ಕೂಡ ಇದೀಗ ಅಪಾಯಕ ಸಂಕೇತ ನೀಡುತ್ತಿದೆ ಎಂದು ಅಮೆರಿಕದ ಕ್ಲೀವ್‌ಲ್ಯಾಂಡ್ ಲೆರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವರದಿ ನೀಡಿದೆ. ಹೌದು, ಟೂತ್‌ಪೇಸ್ಟ್‌ನಲ್ಲಿ (Toothpaste) ಬಳಸುವ ಕ್ಸೈಲಿಟೊಲ್ ಶುಗರ್ ಕಂಟೆಂಟ್ ಹೆಚ್ಚಿದ್ದರೆ ಇದು ಬ್ಲಡ್ ಕ್ಲಾಟ್, ಹೃದಯಾಘಾತಕ್ಕೆ ಕಾರಣವಾಗಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿದು ಬಂದಿದೆ. ಹಾಗಾದ್ರೆ ಕ್ಸೈಲಿಟೊಲ್ ಶುಗರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಕ್ಸೈಲಿಟೊಲ್ ಸಕ್ಕರೆಯನ್ನು ಅಲ್ಕೋಹಾಲ್ ಸಕ್ಕರೆ ಎಂದೂ ಕರೆಯುತ್ತಾರೆ. ಹಣ್ಣುಗಳು ಹಾಗೂ ತರಕಾರಿಗಳಲ್ಲಿರುವ ಸಣ್ಣ ಪ್ರಮಾಣದ ಕ್ಸೈಲಿಟೊಲ್ ಸಕ್ಕರೆಯನ್ನು ತೆಗೆದು ಸಂಸ್ಕರಿಸಿ ಕೆಲ ಮಿಶ್ರಣಗಳ ಮೂಲಕ ಅಲ್ಕೋಹಾಲ್ ಸಕ್ಕರೆ ತಯಾರಿಸಲಾಗುತ್ತದೆ. ಆದರೆ ಇದರ ಪ್ರಮಾಣ ಕೊಂಚ ಹೆಚ್ಚಾದರೂ ಅಪಾಯವೇ ಹೆಚ್ಚು.
Mangaluru: ಕಾರಿನ ಬಿಡಿಭಾಗಗಳ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ
ಮುಖ್ಯವಾಗಿ ಟೂಥ್ ಪೇಸ್ಟ್‌ಗಳಲ್ಲಿ ಅಲ್ಕೋಹಾಲ್ ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇದರ ಪ್ರಮಾಣ ಹೆಚ್ಚಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಲೆರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವಿಜ್ಞಾನದ ಅಧ್ಯಕ್ಷ ಡಾ. ಹಾಜೆನ್ ಹೇಳಿದ್ದಾರೆ. ಇವರು ನಡೆಸಿದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಇನ್ನು ಆರ್ಟಿಫೀಶಿಯಲ್ ಸಕ್ಕರೆ ಅಥವಾ ಕೃತಕ ಸಿಹಿಕಾರಕವಾಗಿರುವ ಕ್ಸೈಲಿಟೊಲ್ ಸಕ್ಕರೆಯನ್ನು ಹಲವು ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಟೂತ್ ಪೇಸ್ಟ್‌ನಲ್ಲ ಮಾತ್ರವಲ್ಲ, ಮೌಥ್ ವಾಶ್, ಗಮ್, ಕೇಕ್, ಶುಗರ್ ಫ್ರಿ ಬಿಸ್ಕೆಟ್‌ಗಳಲ್ಲಿ ಈ ಕ್ಸೈಲಿಟೊಲ್ ಶುಗರ್ ಬಳಸಲಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಪ್ರಮುಖವಾಗಿ ಬ್ಲಡ್ ಕ್ಲಾಟ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಇದರಿಂದ ಹೃದಯಾಘಾತ ಸಮಸ್ಯೆಗಳು ಹೆಚ್ಚಾಗಿ ಸಂಭವಿಸಲಿದೆ ಎಂದು ಹಾಜೆನ್ ಹೇಳಿದ್ದಾರೆ.
Niveditha Gowda: ಚಂದನ್‌ಶೆಟ್ಟಿ-ನಿವೇದಿತಾ ಗೌಡ ದಂಪತಿಗಳ ಬಾಳಲ್ಲಿ ಬಿರುಗಾಳಿ; ಡಿವೋರ್ಸ್‌ಗೆ ಮುಂದಾದ್ರ ಜೋಡಿ???