Death: ರೆಸಾರ್ಟ್‌ ನಲ್ಲಿ ಜಿಪ್ ಲೈನ್ ಆಡಲು ಹೋದ ಯುವತಿ ಕೆಳಗೆ ಬಿದ್ದು ದಾರುಣ ಸಾವು! ಪ್ರಕರಣ ದಾಖಲು

Death: ಹಾರೋಹಳ್ಳಿ (ರಾಮನಗರ ಜಿಲ್ಲೆ): ಹಾರೋಹಳ್ಳಿ ಠಾಣೆ ಬೆಟ್ಟಹಳ್ಳಿಯ ಜಂಗಲ್ ವ್ಯಾಪ್ತಿಯ ಟ್ರಯಲ್ಸ್ 3 ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡಲು ಹೋಗಿ ಯುವತಿ ಬಲಿಯಾಗಿದ್ದಾಳೆ. ಅತ್ತಿಬೆಲೆ ಮೂಲದ ರಂಜಿನಿ (35) ಮೃತಪಟ್ಟವರು.

ಇದನ್ನೂ ಓದಿ: Rahul Gandhi: ಮೋದಿ ಚರ್ಚೆಗೆ ಬಂದ್ರೆ, ರಾಹುಲ್ ಕೇಳೋ ಮೊದಲನೆ ಪ್ರಶ್ನೆಯೇ ಇದಂತೆ !!

ಇವರು ಬೆಂಗಳೂರಿನ ಜೆ.ಪಿ. ನಗರದ ನರ್ಸಿಂಗ್ ಹೋಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಜೆಯ ದಿನ ಕಳೆಯಲು ಸ್ನೇಹಿತರ ಜತೆ ರೆಸಾಟ್ ೯ಗೆ ಬಂದಿದ್ದರು. ಈ ಸಂದರ್ಭದಲ್ಲಿ ಜಿಪ್ ಲೈನ್ ಆಡುತ್ತಿದ್ದಾಗ ಅದು ಕಟ್ ಆಗಿ ಕೆಳಗೆ ಬಿದ್ದರು. ತಕ್ಷಣ ಸ್ನೇಹಿತರು ಅವರನ್ನು ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ರೆಸಾರ್ಟ್ ಮಾಲೀಕರ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಕ್ರೀಡಾ ಸುರಕ್ಷತಾ ನಿಯಮ ಪಾಲಿಸದ ಕಾರಣ ಈ ದುರ್ಘಟನೆ ಸಂಭವಿಸಿದ್ದು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಾರೋಹಳ್ಳಿ ಪೊಲೀಸ್ ನಿರ್ಮಲಾ ಎಂಬುವರು ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Janhvi Kapoor: ನನ್ನ ಪತಿ ಹೀಗಿರಬೇಕು : ಜಾನ್ವಿ ಕಪೂರ್ ಮನದಾಳದ ಮಾತು‌ : ಭಾವಿ ಪತಿಯ ಬಗ್ಗೆ ಜಾನ್ವಿ ಹೇಳಿದ್ದೇನು ಗೊತ್ತ?

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಮೃತದೇಹವನ್ನು ಒಪ್ಪಿಸಲಾಗಿದೆ. ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

1 Comment
  1. […] ಇದನ್ನೂ ಓದಿ: Death: ರೆಸಾರ್ಟ್‌ ನಲ್ಲಿ ಜಿಪ್ ಲೈನ್ ಆಡಲು ಹೋದ … […]

Leave A Reply

Your email address will not be published.