Janhvi Kapoor: ಸೀಕ್ರೆಟ್ ಒಂದನ್ನು ರಿವೀಲ್ ಮಾಡೇ ಬಿಟ್ರು ಬಾಲಿವುಡ್ ಬ್ಯೂಟಿ!

Janhvi Kapoor: “ಮಿಸ್ಟರ್ ಅಂಡ ಮಿಸೆಸ್ ಮಹಿ” ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರುವ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂ‌ರ್ (Janhvi Kapoor) ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಇದೀಗ ಅವರು ಸಿನಿಮಾದ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: Ester Noronha: ‘ಒಂಟಿ ಜೀವನ ನನ್ನಿಂದ ಸಾಧ್ಯವಿಲ್ಲ’ ಮತ್ತೊಬ್ಬ ಜೊತೆಗಾರ ಬೇಕೆಂದ ಕನ್ನಡ ನಟಿ!

ಜಾಹ್ನವಿ ಅವರು ಮಾಧ್ಯಮದವರೊಂದಿಗೆ ಸಂವಹನ ನಡೆಸುವಾಗ ತಮ್ಮ ಜೆರ್ಸಿ ಸಂಖ್ಯೆ 6 ಅನ್ನು ಪ್ರದರ್ಶಿಸಿದರು. ಚಿತ್ರದ ಟೈಟಲ್ ಗೂ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿಗೂ ಕನೆಕ್ಷನ್ ಇರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಜಾಹ್ನವಿ ಜರ್ಸಿ ನಂಬರ್ 6 ಧರಿಸಿ ಪ್ರಚಾರ ನಡೆಸುತ್ತಿದ್ದು, ಮಹಿ ಹೆಸರಿನೊಂದಿಗೆ 6ನೇ ಸಂಖ್ಯೆಯ ಜೆರ್ಸಿ ಧರಿಸಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಅದಲ್ಲದೆ ಐಪಿಎಲ್ ಪಂದ್ಯಗಳು ನಡೆಯುವ ಸ್ಥಳಕ್ಕೆ ಈ ಜೆರ್ಸಿಯಲ್ಲಿ ಹೋಗುತ್ತಿದ್ದಾರೆ. ಇದರ ಬೆನ್ನಲ್ಲೇ ಜರ್ಸಿ ನಂಬ‌ರ್ ಕುರಿತಾದ ಗೊಂದಲವನ್ನು ತಪ್ಪಿಸುವ ಸಲುವಾಗಿ ಇತ್ತೀಚೆಗಷ್ಟೇ ಜಾಹ್ನವಿ ಅವರು ತಮ್ಮ ಅಭಿಮಾನಿಗಳೊಂದಿಗೆ “ಆಸ್ಕ್ ಮಿ ಎನಿಥಿಂಗ್” ಸೆಷನ್ ನಡೆಸಿದರು. ಈ ವೇಳೆ ಅವರು ಚಿತ್ರದಲ್ಲಿನ ತನ್ನ ಪಾತ್ರ ಮಹಿಮಾಗೆ 6ನೇ ಜರ್ಸಿ ನಂಬ‌ರ್ ಯಾಕೆ ಸೇರಿದೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: Health Tip: ನಿದ್ದೆ ಮಾಡುವಾಗ ಈ ಭಂಗಿಯಲ್ಲಿ ಮಲಗ್ತೀರಾ? ಹಾಗಿದ್ರೆ ನೀವು ತುಂಬಾ ಅದೃಷ್ಟವಂತರು!

ಮಹೇಂದ್ರ ಸಿಂಗ್ ಧೋನಿ ಎಂದರೆ ಎಲ್ಲರಿಗೂ ಗೌರವ. ಏಳನೇ ನಂಬರ್ ಜೆರ್ಸಿ ಅವರದ್ದೇ ಆಗಿರಬೇಕು. ಅದು ಅವರಿಗೆ ಮಾತ್ರ ಸೇರಿದ್ದು. ಅದಕ್ಕಾಗಿಯೇ ಸಿನಿಮಾದಲ್ಲಿ ಆರನೇ ನಂಬ‌ರ್ ಜೆರ್ಸಿ ಹಾಕಿದ್ದೇವೆ. ಅವರ ಮೇಲಿನ ಗೌರವದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು ಜಾಹ್ನವಿ. ಅಲ್ಲಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಡೆಯುತ್ತಿರುವೆ ಚರ್ಚೆಗೆ ಉತ್ತರ ದೊರಕಿದಂತೆ ಆಗಿದೆ.

2 Comments
  1. […] ಇದನ್ನೂ ಓದಿ: Janhvi Kapoor: ಸೀಕ್ರೆಟ್ ಒಂದನ್ನು ರಿವೀಲ್ ಮಾಡೇ ಬಿ… […]

  2. […] ಇದನ್ನೂ ಓದಿ: Janhvi Kapoor: ಸೀಕ್ರೆಟ್ ಒಂದನ್ನು ರಿವೀಲ್ ಮಾಡೇ ಬಿ… […]

Leave A Reply

Your email address will not be published.