T20 World Cup Rohit Sharma: T20 ವಿಶ್ವ ಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ? : ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ ರೋಹಿತ್ ಶರ್ಮಾ ‌

T20 World Cup Rohit Sharma: ಟೀಮ್ ಇಂಡಿಯಾ(Team India) ನಾಯಕ ರೋಹಿತ್ ಶರ್ಮಾ(Rohit Sharma)ಸೆನ್ಸೆಷನಲ್ ನಿರ್ಧಾರದತ್ತ ಹೆಜ್ಜೆ ಹಾಕುತ್ತಿರುವಂತಿದೆ. T20 ವಿಶ್ವಕಪ್-2024 ರ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit Sharma) ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.

ಇದನ್ನೂ ಓದಿ: Sugar: ಅತಿಯಾಗಿ ಸಕ್ಕರೆ ತಿಂತೀರಾ? ಹಾಗಿದ್ರೆ ನಿಮ್ಮ ಸೆಕ್ಸ್ ಲೈಫ್ ಪ್ಲಾಪ್ ಖಂಡಿತಾ!

ರೋಹಿತ್ ಶರ್ಮಾ(Rohit Sharma) ಈಗಾಗಲೇ ತಮ್ಮ ನಿರ್ಧಾರವನ್ನು ಬಿಸಿಸಿಐಗೆ ಬಹಿರಂಗಪಡಿಸಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳುತ್ತಿವೆ. ರೋಹಿತ್ ಶರ್ಮಾ(Rohit Sharma) ಬದಲಿಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya)ಅವರನ್ನು ಟಿ20 ನಾಯಕರನ್ನಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ಮಂಡಳಿ(BCCI) ಬಯಸಿದೆ ಎಂದು. ತಿಳಿದು ಬಂದಿದೆ.

ಇದನ್ನೂ ಓದಿ: Divorce: 5 ರೂ. ಕುರ್ಕುರೆ ತಂದಿಲ್ಲ ಎಂಬ ಕಾರಣಕ್ಕೆ ಗಂಡನಿಗೆ ಡಿವೋರ್ಸ್‌ ನೀಡಲು ಮುಂದಾದ ಪತ್ನಿ

ಈ ಕ್ರಮದಲ್ಲಿ, ಟಿ20 ವಿಶ್ವಕಪ್-2024(T20 World Cup) ರಲ್ಲಿ ಭಾರತ ತಂಡದ ಉಪನಾಯಕರಾಗಿ ಹಾರ್ದಿಕ್ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಿದ್ದಾರೆ ಎಂದು ಕೇಳಿಬರುತ್ತಿದೆ. ಇದಲ್ಲದೆ, ವಿಶ್ವಕಪ್ಗೆ ಆಯ್ಕೆಯಾದ ತಂಡದಲ್ಲಿ ಹಾರ್ದಿಕ್‌ಗೆ ( Hardik Pandya)  ಸ್ಥಾನ ನೀಡುವಂತೆ ಬಿಸಿಸಿಐ ಆಯ್ಕೆಗಾರರ ಮೇಲೆ ವಿಶೇಷ ಒತ್ತಡ ಹೇರಿದೆ ಎಂದು ದೈನಿಕ್ ಜಾಗರಣ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

 

ಇಲ್ಲಿಯವರೆಗೆ, ರೋಹಿತ್ ಶರ್ಮ (Rohit Sharma)ಅನುಪಸ್ಥಿತಿಯಲ್ಲಿ, ಹಾರ್ದಿಕ್ ಪಾಂಡ್ಯ ಟಿ 20 ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ನಂತರ ಹಾರ್ದಿಕ್ ಭವಿಷ್ಯದ ನಾಯಕನಾಗುವುದು ಎಲ್ಲವೂ ಫಿಕ್ಸ್ ಆದಂತಿದೆ. ಆದರೆ ಇದೀಗ ಐಪಿಎಲ್-2024ರ(IPL- 2024) ನಂತರ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಬದಲಾಗಿದೆ.

ಈ ವರ್ಷದ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ನ(Mumbai Indians) ನೂತನ ನಾಯಕನಾಗಿ ಅಧಿಕಾರ ವಹಿಸಿಕೊಂಡ ಹಾರ್ದಿಕ್‌ಗೆ ತಮ್ಮ ಛಾಪು ತೋರಿಸಲು ಸಾಧ್ಯವಾಗಲಿಲ್ಲ. ಮುಂಬೈ ಫ್ರಾಂಚೈಸಿ ರೋಹಿತ್ ಶರ್ಮಾ(Rohit Sharma) ಅವರನ್ನು ಹೊರತುಪಡಿಸಿ ಹಾರ್ದಿಕ್‌ಗೆ ತಮ್ಮ ತಂಡದ ಅಧಿಕಾರವನ್ನು ಹಸ್ತಾಂತರಿಸಿ ಪೇಚಿಗೆ ಸಿಲುಕಿದಂತಾಗಿದೆ.

ದುರಾದೃಷ್ಟವಶಾತ್ ಹಾರ್ದಿಕ್ (Hardik pandy) ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಮೇಲಾಗಿ ಮುಂಬೈ ಡ್ರೆಸ್ಸಿಂಗ್ ರೂಮ್ ಎರಡು ಬಣಗಳಾಗಿ ಒಡೆದಿದೆ ಎಂಬ ವರದಿಗಳಿವೆ. ಇನ್ನು ಕೆಲವರು ರೋಹಿತ್ ಶರ್ಮಾ(Rohit Sharma) ಗುಂಪಿನಲ್ಲಿದ್ದರೆ ಇನ್ನು ಕೆಲವರು ಪಾಂಡ್ಯಗೆ(Hardik Pandya) ಬೆಂಬಲ ನೀಡುತ್ತಿದ್ದು, ಒಳಗಿಂದೊಳಗೆ ಘರ್ಷಣೆ ನಡೆಯುತ್ತಿದೆ. ಐಪಿಎಲ್‌ನಲ್ಲಿ ನಾಯಕನಾಗಿ ಛಾವು ತೋರಿಸುವಲ್ಲಿ ವಿಫಲರಾಗುತ್ತಿರುವ ಹಾರ್ದಿಕ್  ಭಾರತ ತಂಡದ ಸಾರಥ್ಯವನ್ನು ಪೂರ್ಣವಾಗಿ ವಹಿಸಿಕೊಂಡರೆ ಭಾರತೀಯ ತಂಡ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

Leave A Reply

Your email address will not be published.