Athiya Shetty Post: ಅಥಿಯಾ ಶೆಟ್ಟಿಯ ಪೋಸ್ಟ್‌ ವೈರಲ್‌; ಕೆ.ಎಲ್‌.ರಾಹುಲ್‌ಗೆ ಸಂಬಂಧಿಸಿದ್ದಾ?

Athiya Shetty Post: ಕೆಎಲ್ ರಾಹುಲ್ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇತ್ತೀಚೆಗೆ ಕೆಎಲ್ ರಾಹುಲ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಸೋತಿದ್ದು, ನಂತರ ಅದರ ಮಾಲೀಕ ಸಂಜೀವ್ ಗೋಯೆಂಕಾ ಅವರ ಜೊತೆಗಿನ ವೀಡಿಯೊ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ ಜೊತೆ ಮಾತನಾಡುತ್ತಿರುವುದು ಕಂಡು ಬಂದಿದೆ. ಆ ವೀಡಿಯೋ ನೋಡಿದರೆ ಕೋಪದಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಳಿಕ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳು ತೀವ್ರ ಕೋಪಗೊಂಡಿದ್ದಾರೆ. ಇದುವರೆಗೂ ಅಥಿಯಾ ಶೆಟ್ಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಅಥಿಯಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Dharmasthala: ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಅಪಹರಣ; ಗಂಡನಿಂದ ದೂರು ದಾಖಲು

ಸಂಜೀವ್ ಗೋಯೆಂಕಾ ಅವರ ವರ್ತನೆಗೆ ಅಭಿಮಾನಿಗಳು ತುಂಬಾ ಕೋಪಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ತುಂಬಾ ನಿಂದಿಸುತ್ತಿದ್ದಾರೆ. ಮೇ 13 ರಂದು ಮುಂಬೈನಲ್ಲಿ ಬಿರುಗಾಳಿ ಬೀಸಿತ್ತು. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಾದ ನಂತರ Athiya ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಅನ್ನು ಕೆಎಲ್ ರಾಹುಲ್ ಅವರ ವೈರಲ್ ವೀಡಿಯೊಗೆ ರಿಲೇಟ್‌ ಮಾಡಲಾಗುತ್ತಿದೆ.

ಇದನ್ನೂ ಓದಿ: Viral News: ಮಹಿಳೆಯೊಬ್ಬರು ಆ ಮಧ್ಯರಾತ್ರಿ ಧೈರ್ಯ ಮಾಡಿ, ವಿಚಿತ್ರ ಘಟನೆಯ ರಹಸ್ಯ ಬಯಲು ಮಾಡೇ ಬಿಟ್ರು!

‘ಚಂಡಮಾರುತದ ಬಳಿಕದ ನಂತರ ಪ್ರಶಾಂತತೆ’ ಎಂಬ ಅರ್ಥದಲ್ಲಿ ಬರೆಯಲಾಗಿರುವ ಅಥಿಯಾ ಅವರ ಈ ಪೋಸ್ಟ್ ತುಂಬಾ ವೈರಲ್ ಆಗುತ್ತಿದೆ. ಇದನ್ನು ಕೆಎಲ್ ರಾಹುಲ್‌ಗೆ ಈ ರೀತಿ ಬರೆದಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Leave A Reply

Your email address will not be published.