Mysore: ಸಂತ್ರಸ್ತೆ ಹುಣಸೂರಿನ ತೋಟದ ಮನೆಯಲ್ಲಿ ಸಿಕ್ಕಿದ್ದು ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಸಾ.ರಾ.ಮಹೇಶ್

 

Mysore: ಹೆಚ್‌.ಡಿ. ರೇವಣ್ಣ ವಿರುದ್ಧದ ಅಪಹರಣ ಪ್ರಕರಣದ ಸಂತ್ರಸ್ತೆ ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು ಎಲ್ಲಿ? ಆಕೆ ಹುಣಸೂರಿನ ತೋಟದ ಮನೆಯಲ್ಲಿ ಅಲ್ಲ. ಒಂದು ವೇಳೆ ಆಕೆ ತೋಟದ ಮನೆಯಲ್ಲಿ ಸಂತ್ರಸ್ತೆ ಸಿಕ್ಕಿದ್ದೆಂದು ಸಾಬೀತು ಮಾಡಿದರೆ ನಾನು ಜೆಡಿಎಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಅಷ್ಟೇ ಅಲ್ಲ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್‌ ಹೇಳಿದ್ದಾರೆ.

ಇದನ್ನೂ ಓದಿ: Sonu Shrinivas Gouda: ಸೋನು ಶ್ರೀನಿವಾಸ್ ಗೌಡ ರಾಜಯಕೀಯಕ್ಕೆ ಎಂಟ್ರಿ ?!

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಾ ಮಹೇಶ್, “ಸಂತ್ರಸ್ತೆ ಹುಣಸೂರಿನ ರಾಜ ಗೋಪಾಲ್‌ ರವರ ತೋಟದ ಮನೆಯಲ್ಲಿ ಇರಲಿಲ್ಲ. ಆಕೆ ಹುಣಸೂರು ನಗರದ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಮಹಿಳೆ ಅಪಹರಣದಲ್ಲಿ ಯಾರು ಭಾಗಿಯಾಗಿದ್ದಾರೆ? ಆಕೆಯ ಪುತ್ರನಿಗೆ ಎಷ್ಟು ಹಣ ಸಂದಾಯವಾಗಿದೆ? ದೂರು ಬರೆದು ಕೊಟ್ಟವರು ಯಾರು? ಎಲ್ಲಿ ಬರೆದುಕೊಟ್ಟರು? ಇತ್ಯಾದಿ ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: Kerala: ಫೋನಲ್ಲಿ ಮಾತಾಡುತ್ತಾ ಕಣಗಿಲೆ ಹೂ ತಿಂದು ಯುವತಿ ಸಾವು !!

Leave A Reply

Your email address will not be published.