Drought Compensation: ಕೇಂದ್ರದಿಂದ ರೈತರಿಗೆ ಸಿಹಿಸುದ್ದಿ: ಸಚಿವ ಕೃಷ್ಣ ಬೈರೇಗೌಡ

Share the Article

Drought Compensation: ಪ್ರಸ್ತುತ ರೈತರ ಖಾತೆಗೆ 2023ರ ಮುಂಗಾರು ಬೆಳೆ ಹಾನಿ ಬರ ಪರಿಹಾರ ವಿತರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಈಗಾಗಲೇ ಕೇಂದ್ರದಿಂದ ಬಿಡುಗಡೆಯಾಗಿರುವ ಬರ ಪರಿಹಾರ (Drought Compensation) ಹಣದಲ್ಲಿ ಮೇ 6 ರಂದು ಸೋಮವಾರ 2,425 ಕೋಟಿ ರು. ಹಣವನ್ನು 27.38 ಲಕ್ಷ ರೈತರಿಗೆ ಅರ್ಹತೆಗೆ ಅನುಗುಣವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: PM Modi: ED ದಾಳಿಯಲ್ಲಿ ಸಿಕ್ಕ ಹಣ ಬಡವರಿಗೆ ವಿತರಣೆ – ಪ್ರಧಾನಿ ಮೋದಿ !!

ಸದ್ಯ 2-3 ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೆ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಆರ್‌ಬಿಐನಿಂದ ರೈತರ ಖಾತೆಗೆ ವರ್ಗಾಯಿಸಲು 48 ಗಂಟೆ ಸಮಯ ಅಗತ್ಯ. ಹೀಗಾಗಿ ಎರಡು ಮೂರು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇದನ್ನೂ ಓದಿ: Sun Stroke: ನಿಮಗೆ ಸನ್ ಬರ್ನ್ ಸಮಸ್ಯೆ ಕಾಡುತ್ತಿದೆಯೇ? : ಇದನ್ನು ತಡೆಗಟ್ಟಲು ಇಲ್ಲಿದೆ ಸೂಕ್ತ ಪರಿಹಾರ

ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಎನ್‌ಡಿಆರ್‌ಎಫ್‌ ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33.58 ಲಕ್ಷ ರೈತರಿಗೆ 636.45 ಕೋಟಿ ರು.ಗಳನ್ನು ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳುಗಳಲ್ಲೇ ಪಾವತಿಸಿದೆ. ಇಲ್ಲಿ 31,82,602 ಮಂದಿಗೆ ಹಣ ಪಾವತಿಯಾಗಿದ್ದು 2 ಲಕ್ಷ ಜನರಿಗೆ ಬಾಕಿಯಿದೆ. ಈ ಪೈಕಿ ಅತಿ ಕಡಿಮೆ ಜಮೀನು ಹೊಂದಿರುವ 4.43 ಲಕ್ಷ ರೈತರಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಸಂಪೂರ್ಣ ಬರ ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

Leave A Reply