Home Crime Australia: ಸಂಸದೆಗೆ ಡ್ರಗ್ಸ್ ನೀಡಿ ಲೈಂಗಿಕವಾಗಿ ಹಿಂಸೆ – ವಿಡಿಯೋ ವೈರಲ್ !!

Australia: ಸಂಸದೆಗೆ ಡ್ರಗ್ಸ್ ನೀಡಿ ಲೈಂಗಿಕವಾಗಿ ಹಿಂಸೆ – ವಿಡಿಯೋ ವೈರಲ್ !!

Australia

Hindu neighbor gifts plot of land

Hindu neighbour gifts land to Muslim journalist

Australia: ರಾತ್ರಿಯ ವೇಳೆ ತನಗೆ ಡ್ರಗ್ಸ್ ನೀಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ(Australia) ಮಹಿಳಾ ಸಂಸದೆ(Lady MP) ಆರೋಪಿಸಿದ್ದಾರೆ. ಈ ಕುರಿತು ದೂರು ಕೂಡ ದಾಖಲಾಗಿದೆ.

ಇದನ್ನೂ ಓದಿ: Shubman Gill: ಟೀಂ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ ಬ್ಯಾಟಿಂಗ್ ಟಿಪ್ಸ್ ನೀಡಿದ ಶುಭ್ಮನ್ ಗಿಲ್

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಸಂಸದೆ ಮೇಲೆ ಲೈಂಗಿಕ ದೌರ್ಜನ್ಯ ವಿಡಿಯೋ ಬಿರುಗಾಳಿ ಎಬ್ಬಿಸಿದೆ. ಹೌದು, ಇಂತಹ ಕ್ರೌರ್ಯದ ಪ್ರಕರಣವೊಂದು 37 ವರ್ಷದ ಮಹಿಳಾ ಸಂಸದೆಯಿಂದ ಬೆಳಕಿಗೆ ಬಂದಿದೆ. ಕ್ವೀನ್ಸ್‌ಲ್ಯಾಂಡ್(Queensland) ಲೇಬರ್ ಪಕ್ಷದ ಸಂಸದೆ ಬ್ರಿಟಾನಿ ಲೌಗಾ(Britani Lowga) ಅವರು ಕ್ವೀನ್ಸ್‌ಲ್ಯಾಂಡ್ ನಗರವಾದ ಯೆಪ್ಪೂನ್‌ನಲ್ಲಿ ರಾತ್ರಿ ವಿಹಾರಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋಗಳು ಹರಿದಾಡುತ್ತಿದೆ. ಈ ಕುರಿತು ಸ್ವತಃ ಸಂಸದೆ ಲೌಗಾ ಯೆಪ್ಪೊನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: NEET 2024: ನೀಟ್ 2024 ರ ಕ್ವೆಶ್ಚನ್ ಪೇಪರ್ ಲೀಕ್, ತಳಮಳದಲ್ಲಿ ಅರ್ಹ ಅಭ್ಯರ್ಥಿಗಳು !

ಬ್ರಿಟಾನಿ ಅವರು ಏಪ್ರಿಲ್ 27ರ ರಾತ್ರಿ ಹೊರಗೆ ಹೋಗಿದ್ದರು ಎಂದು ಹೇಳಿದರು. ಈ ವೇಳೆ ಆಕೆಗೆ ಅಮಲು ಪದಾರ್ಥ ನೀಡಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಮರುದಿನ ಆಸ್ಪತ್ರೆಯ ವರದಿಯಲ್ಲಿ ಇದು ದೃಢಪಟ್ಟಿದೆ. ಇದೇ ವೇಳೆ ಸಂಸದೆ ಮಾತ್ರವಲ್ಲದೆ ಹಲವು ಮಹಿಳೆಯರ ಮೇಲೂ ಇದೇ ರೀತಿ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ಆಸ್ಪತ್ರೆಯಲ್ಲಿ ಬಂದಿರುವ ವರದಿಯಲ್ಲಿ ನನ್ನ ದೇಹದಲ್ಲಿ ನಾನು ಸೇವಿಸದ ಪದಾರ್ಥದಲ್ಲಿ ಔಷಧಗಳು ಇದ್ದವು ಎಂದು ತಿಳಿದುಬಂದಿದೆ. ಇದು ನನ್ನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಿತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಶನಿವಾರ ರಾತ್ರಿ ಡ್ರಗ್ಸ್ ನೀಡಿದ ಇತರ ಮಹಿಳೆಯರನ್ನೂ ಸಂಪರ್ಕಿಸಿದ್ದೇನೆ. ಇದು ಯಾರಿಗಾದರೂ ಆಗಬಹುದು ಎಂದಿದ್ದಾರೆ.

ಅಂದಹಾಗೆ ದೂರು ದಾಖಲಾದ ಬೆನ್ನಲ್ಲೇ ಕ್ವೀನ್ಸ್‌ಲ್ಯಾಂಡ್ ಪಟ್ಟಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಹಲವರು ಸಂಸದೆಗೆ ಬೆಂಬಲ ಸೂಚಿಸಿದ್ದಾರೆ. ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ.