Lucknow: ಸೋಷಿಯಲ್‌ ಮೀಡಿಯಾ ಲವ್‌; ಯುವತಿ ಎಂದು 45 ರ ಆಂಟಿ ಜೊತೆ 20 ರ ಯುವಕನ ಲವ್‌

Lucknow: ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಹುಡುಗ-ಹುಡುಗಿಯರ ಗೆಳೆತನ ಆಗುವುದು ಸಾಮಾನ್ಯ. ಕೆಲವೊಂದು ಒಳ್ಳೆಯ ತಿರುವು ಪಡೆದುಕೊಂಡರೆ ಇನ್ನೂ ಕೆಲವು ಕೊಲೆ ಮಾಡುವ ತನಕ ಹೋಗಿರುತ್ತದೆ. ಇಂತಹುದೇ ಒಂದು ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಇದನ್ನೂ ಓದಿ:  Viral News: ಉಸಿರಾಟದ ವೇಳೆ ಶ್ವಾಸಕೋಶ ಹೊಕ್ಕ ಮೂಗುಬೊಟ್ಟು; ಶಸ್ತ್ರಚಿಕಿತ್ಸೆಯ ಮೊರೆ ಹೋದ ಮಹಿಳೆ

ಕಾನ್ಪುರ ಮೂಲಕ ದೀಪೇಂದ್ರ ಸಿಂಗ್‌ (20) ಎಂಬ ಯುವಕ ಕೆಲವು ಸಮಯದಿಂದ ಇನ್ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬಳ ಪರಿಚಯ ಮಾಡಿಕೊಳ್ಳುತ್ತಾನೆ. ಆಕೆಯ ಜೊತೆ ಸ್ನೇಹ ಸಲುಗೆಯಿಂದ ಚಾಟ್‌ ಮಾಡುತ್ತಾನೆ. ಈ ಮಹಿಳೆ ಪ್ರೊಫೈಲ್‌ ಫೊಟೋವೊಂದನ್ನು ಹಾಕಿದ್ದು, ಅದು ಬಹಳ ಸುಂದರವಾಗಿತ್ತು. ದೀಪೇಂದ್ರ ಈ ಫೋಟೋ ನೋಡಿ ಇದು ಆಕೆಯದೇ ಫೋಟೋ ಎಂದು ನಂಬಿದ್ದ.

ಇದನ್ನೂ ಓದಿ:  English Learning: ಇಂಗ್ಲಿಷ್ ಆದಷ್ಟು ಬೇಗ ಕಲಿಯಬೇಕ? ಹಾಗಾದ್ರೆ ಗೂಗಲ್ ನಿಮಗೆ ಹೆಲ್ಪ್ ಮಾಡುತ್ತೆ!

ಆ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ ದೀಪೇಂದ್ರ ದಿನನಿತ್ಯ ಆಕೆಗೆ ಮೆಸೇಜ್‌ ಮಾಡುತ್ತಾ, ನಂತರ ಪ್ರೀತಿಸಲು ಶುರು ಮಾಡಿದ್ದಾನೆ. ಇಬ್ಬರೂ ಪ್ರೀತಿಸಲು ಪ್ರಾರಂಭ ಮಾಡಿದ್ದಾರೆ. ಮುಂದೇನು? ಈ ದೀಪೇಂದ್ರನಿಗೆ ತನ್ನ ಪ್ರಿಯತಮೆಯನ್ನು ಹತ್ತಿರದಿಂದ ನೋಡುವ ಆಸೆಯಾಗಿ, ಆಕೆಯನ್ನು ಭೇಟಿಯಾಗಲು ಹೇಳಿದ್ದಾನೆ.

ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ನಲ್ಲಿ ಹಾಕಿದ್ದ ಯುವತಿಯು ತನ್ನ ಮನದನ್ನೆ ಎಂದು ಪ್ರೀತಿಯ ಅಮಲಿನಲ್ಲಿ ತೇಲುತ್ತಿದ್ದ ದೀಪೇಂದ್ರ, ಆ ಮಹಿಳೆ ಕಣ್ಣೆದುರಿಗೆ ಬಂದಾಗ ಆಘಾತಗೊಳಗಾಗುತ್ತಾನೆ. ಏಕೆಂದರೆ ಈತನ ಜೊತೆ ಚಾಟ್‌ ಮಾಡುತ್ತಿದ್ದುದ್ದು, 45 ವರ್ಷದ ಮಹಿಳೆ, ತನಗಿಂತ ಹೆಚ್ಚು ವಯಸ್ಸಿನ ಮಹಿಳೆಯನ್ನು ಕಂಡು ದೀಪೇಂದ್ರ ಕೋಪಗೊಳ್ಳುತ್ತಾನೆ.

ಅನಂತರ ದೀಪೇಂದ್ರ ಆ ಮಹಿಳೆಯೊಂದಿಗೆ ವಾಗ್ವಾದ ನಡೆಸಿ, ಆಕೆಯ ತಲೆಯನ್ನು ನೆಲಕ್ಕೆ ಬಡಿದು, ಥಳಿಸಿ ಆಕೆಯ ಮೊಬೈಲನ್ನು ಕಿತ್ತು ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ದೀಪೇಂದ್ರನನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.