Hubballi: ನನ್ನ ಮಗನಿಗೆ ಏನು ಶಿಕ್ಷೆ ಬೇಕಾದ್ರೂ ಕೊಡಿ – ಬಿಕ್ಕಿ ಬಿಕ್ಕಿ ಅತ್ತ ನೇಹಾ ಹಂತಕ ಫಯಾಜ್‌ ತಂದೆ

Share the Article

Hubballi: ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ(Hubballi) ನೇಹಾ ಹತ್ಯೆ ಪ್ರಕರಣ ಜನತೆಯನ್ನು ರೊಚ್ಚಿಗೆಬ್ಬಿಸಿದೆ. ಹಂತಕನ ವಿರುದ್ಧ ಜನ ಕೊತ ಕೊತ ಕುದಿಯುತ್ಯಿದ್ದಾರೆ. ಈ ಬೆನ್ನಲ್ಲೇ ನೇಹಾ ಹಂತಕ ಪಯಾಜ್ ತಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ನನ್ನ ಮಗನಿಗೆ ಯಾವುದೇ ಶಿಕ್ಷೆ ನೀಡಿದರೂ ಸ್ವಾಗತಿಸುತ್ತೇನೆ. ಅವನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ. ಆ ಶಿಕ್ಷೆ ಹೇಗಿರಬೇಕು ಅಂದ್ರೆ ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಅಂಥ ಶಿಕ್ಷೆ ನನ್ನ ಮಗನಿಗೆ ಆಗಬೇಕು ಎಂದು ನೇಹಾ ಹಿರೇಮಠ (Neha Hiremath Murder Case) ಕೊಲೆ ಪ್ರಕರಣದ ಆರೋಪಿ ಫಯಾಜ್ (Fayaz) ತಂದೆ‌ ಬಾಬಾ ಸಾಹೇಬ್‌ ಸುಬಾನಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

ಅಲ್ಲದೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಎಂದರೆ ದೇವರಂತೆ ಪೂಜಿಸುತ್ತೇವೆ. ಹೀಗಾಗಿ ಯಾರೂ ಕೂಡ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬೇಡಿ. ಇಂದು ಅನ್ಯಾಯ ನಡೆದಿದೆ. ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಇಂದು ಪ್ರತಿಭಟಿಸುತ್ತಿರುವವರ ಹೋರಾಟಕ್ಕೆ ಜಯವಾಗಲಿ.

ಬಳಿಕ ಅಳುತ್ತಲೇ ಮಾತನಾಡಿದ ಅವರು ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ನನ್ನನ್ನು ಕ್ಷಮಿಸಬೇಕು. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave A Reply