Increasing milk yield in cows: ಹಸು ಹಾಲು ಕೊಡೋದನ್ನು ಕಡಿಮೆ ಮಾಡಿದ್ಯಾ ?! ಈ ಉಪಾಯ ಬಳಸಿದ್ರೆ ದಿನಕ್ಕೆ 3 ರಿಂದ 5 ಲೀಟರ್ ಹೆಚ್ಚಾಗುತ್ತೆ !!
Increasing milk yield in cows: ಕೃಷಿ ಪ್ರಧಾನವಾದ ದೇಶ. ಇಲ್ಲಿ ಮುಕ್ಕಾಲು ಭಾಗ ಜನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯೂ ಕೂಡ ಯಥೇಚ್ಛವಾಗಿ ದೇಶಾದ್ಯಂತ ವ್ಯಾಪಿಸುತ್ತಿದೆ. ಕೃಷಿಯೊಂದಿಗೆ ಹೈನುಗಾರಿಕೆಯೂ ಕೂಡ ಜನರನ್ನು ಹೆಚ್ಚು ಗಮನ ಸೆಳೆದಿದೆ. ಅಲ್ಲದೆ ಕೃಷಿ ಹಾಗೂ ಹೈನುಗಾರಿಕೆ ಒಂದು ನಾಣ್ಯದ ಎರಡು ಮುಖಗಳು. ಒಂದನ್ನೊಂದು ಪರಸ್ಪರ ಅವಲಂಭಿಸಿವೆ. ಇದಕ್ಕೆ ಸರ್ಕಾರ ಕೂಡ ಸಾಕಷ್ಟು ಸಹಕಾರವನ್ನು ಒದಗಿಸುತ್ತದೆ. ಇಂದು ಯುವ ಜನತೆಯು ಕೂಡ ಇದರಿಂದಾಗುವ ಲಾಭ ನೋಡಿಕೊಂಡು ಹೈನುಗಾರಿಕೆಯತ್ತ ವಾಲುತ್ತಿರುವುದು ಸಂತೋಷದ ವಿಚಾರವೇ ಆಗಿದೆ.
ಇದನ್ನೂ ಓದಿ: Sperm Count Tips: ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಇವೇ ನಿಜವಾದ ಕಾರಣಗಳು : ಹುಷಾರಾಗಿರಿ
ಇದನ್ನೂ ಓದಿ: Minimalist Decor: ಕನಿಷ್ಠ ಗೃಹಾಲಂಕಾರಕ್ಕೆ ಮೊರೆಹೋಗುತ್ತಿರುವ ಜನ: ಏಕೆ? ಇಲ್ಲಿದೆ ಕಾರಣ
ಕೆಲವೊಮ್ಮೆ ಹಸುಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುವುದು ಸಹಜ. ಅದು ಗಬ್ಬ ಆಗಿಯೋ, ಬೆದಗೆ ಬಂದ ಕಾರಣದಿಂದಲೋ ಅಥವಾ ಮಾಸಿಕೊಳ್ಳುತ್ತಿರುವ ಕಾರಣ ಇಲ್ಲ ಅನಾರೋಗ್ಯದಿಂದಲೋ ಏನೋ ಹಸುವಿನಲ್ಲಿ ಹಾಲಿನ ಪ್ರಮಾಣವು ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ಸದ್ಯ ವಿಪರೀತ ಬೇಸಿಗೆ ಇರುವ ಕಾರಣ ಹಸುಗಳಿಗೆ ಮೇವು ಸಿಗುತ್ತಿಲ್ಲ. ಕುಡಿಯಲು ನೀರೂ ಕೂಡ ಕಡಿಮೆಯಾಗಿದೆ. ಬಿಸಿಲ ಝಳಕ್ಕೆ ಅವು ಪೌಷ್ಟಿಕಾಂಶಗಳಿಲ್ಲದೆ ಕುಗ್ಗಿ ಹೋಗಿವೆ. ಇದೂ ಕೂಡ ಕಾರಣವಿರಬಹುದು. ಈ ಸಂದರ್ಭದಲ್ಲಿ ನೀವು ಹಸುವನ್ನು ವಿಶೇಷವಾಗಿ ಆರೈಕೆ ಮಾಡಬೇಕು. ಇದರೊಂದಿಗೆ ನೀವು ಈ ಒಂದು ಟ್ರಿಕ್ಸ್ ಅನ್ನು ಬಳಸಿದರೆ ಹಾಲಿನ ಪ್ರಮಾಣವು(Increasing milk yield in cows) ದಿನಕ್ಕೆ ಮೂರರಿಂದ ಐದು ಲೀಟರ್ ಹೆಚ್ಚಾಗುತ್ತದೆ.
ಹೌದು, ನೀವು ಮನೆಯಲ್ಲಿ ಸುಲಭವಾಗಿ ಜಲ ಕೃಷಿ(Aquaculture) ಮೂಲಕ ಮೇವು ತಯಾರಿಸಿ ಹಸುಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಬಹುದು. ಇದು ಹಸುಗಳಿಗೆ ಮಾತ್ರ ಲಾಭವಲ್ಲ, ನಿಮ್ಮ ಬೊಕ್ಕಸಕ್ಕೂ ಲಾಭ. ಏಕೆಂದರೆ ಇದನ್ನು ಸೇವಿಸಿದ ಬಳಿಕ ಹಸು ಸಾಕಷ್ಟು ಪೌಷ್ಟಿಕಾಂಶ ಪಡೆದು ಯಾವಾಗಲೂ ನೀಡುವ ಹಾಲಿಗಿಂತ ಮೂರ್ನಾಲ್ಕು ಲೀಟರ್ ಹೆಚ್ಚು ಹಾಲು ನೀಡುತ್ತದೆ. ಒಟ್ಟಿನಲ್ಲಿ ಈ ಜಲಕೃಷಿಯು ಹೈನುಗಾರರ ಆಶಾಕಿರಣ ಎಂದರೆ ತಪ್ಪಾಗಲಾರದು.
ಏನಿದು ಜಲಕೃಷಿ?
ಮಣ್ಣಿನ ಬಳಕೆಯಿಲ್ಲದೆ ಸಸ್ಯಗಳನ್ನು ಬೆಳೆಸುವ ವಿಧಾನವಾಗಿದ್ದು, ಸಸ್ಯಗಳಿಗೆ ತೇವಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಒದಗಿಸಲಾಗುತ್ತದೆ. ಇದನ್ನು ಹೈಡ್ರೋಫೋನಿಕ್ ವಿಧಾನವೆಂದು ಕರೆಯಲಾಗುತ್ತದೆ.ಈ ವಿಧಾನದಲ್ಲಿ ವರ್ಷದ 365 ದಿನವೂ ನಿರ್ದಿಷ್ಟ ಪ್ರಮಾಣದ ಹಸುರು ಮೇವು ಲಭ್ಯವಾಗಲಿದ್ದು, ಹೈನುಗಾರಿಕೆಗೆ ಬಳಸುವ ಇತರ ಪೌಷ್ಟಿಕಾಹಾರಗಳನ್ನು ಕೂಡ ನಿಯಂತ್ರಿಸಬಹುದು.
ಏನು ಪ್ರಯೋಜನ?
ಜಲಕೃಷಿ ವಿಧಾನದಿಂದ ಮೇವನ್ನು ತಯಾರಿಸಿದಾಗ ಹಸುವಿನ ಹಾಲಿನ ಪ್ರಮಾಣ (Cow’s Milk Production) ಅಧಿಕವಾಗಲಿದೆ. 1ಲೀಟರ್ ಹಾಲು ನೀಡುವ ಹಸುವಿಗೆ 3ಲೀಟರ್ ವರೆಗೆ ಹಾಲು ನೀಡಲು ಇಂತಹ ಮೇವು ಸಹಕಾರಿ ಆಗಲಿದೆ. ಈ ಜಲ ಕೃಷಿ ಹೈಡ್ರೋ ಮೇವು ಎನ್ನುವುದು ಹಾಲಿನ ಡಿಗ್ರಿ ಅಂದರೆ ಫ್ಯಾಟ್ ಪ್ರಮಾಣ ಅಧಿಕ ಬರುವಂತೆ ಮಾಡಲಿದೆ.
ಮಾಡುವ ವಿಧಾನ ಹೇಗೆ?
• ಹಸುಗಳಿಗೆ ಬೇಕಾದ ಮೇವನ್ನು ಹಸುರು ಮನೆಯಲ್ಲಿ ಕೇವಲ ನೀರನ್ನು ಬಳಸಿ ಬೆಳೆಸುವ ವಿಧಾನವಾಗಿದ್ದು, ಇದಕ್ಕೆ ಕೇವಲ 100 ಚದರ ಅಡಿ ಸ್ಥಳಾವಕಾಶವಿದ್ದರೆ ಸಾಕು.
• ಮೆಕ್ಕೆ ಜೋಳ ಅಥವಾ ಬೇರೆ ಯಾವುದೇ ಬೀಜಗಳನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮಾರನೇ ದಿನ ಅದನ್ನು ಹಸಿ ಗೋಣಿ ಚೀಲದಲ್ಲಿ ಬಿಗಿಯಾಗಿ ಕಟ್ಟಬೇಕು.
• ಅದಕ್ಕೆ ಪ್ರತಿ 2 ಗಂಟೆಗಳಿಗೊಮ್ಮೆ ನೀರು 2- 3 ಲೀಟರ್ ಹಾಕಬೇಕು. ಮೂರನೇ ದಿನಕ್ಕೆ ಮೊಳಕೆ ಬಂದ ಬೀಜಗಳು ಜಲಕೃಷಿ ಟ್ರೇ ನಲ್ಲಿ ಹಾಕಿ ಘಟಕದ ಒಳಗೆ ಇಡಬೇಕು.
• ನಾಲ್ಕನೇ ದಿನದಿಂದ 9ನೇ ದಿನದ ವರೆಗೆ ನಿರಂತರವಾಗಿ ತುಂತುರು ನೀರಾವರಿ ಟೈಮ್ ಸೆನ್ಸಾರ್ ನೀಡಬೇಕಾಗುತ್ತದೆ.
• 9ನೇ ದಿನ ಈ ಮೇವನ್ನು ರಾಸುಗಳಿಗೆ ನೀಡಬಹುದು. ಪ್ರತಿ ನಿತ್ಯ ಎಷ್ಟು ಮೇವು ಬೇಕಾಗುತ್ತದೆ ಎನ್ನುವ ಆಧಾರದ ಮೇಲೆ ಯೋಜನೆ ಮಾಡಿಕೊಂಡು ಬೆಳೆಸಬೇಕಾಗುತ್ತದೆ.
• ಪ್ರತಿ ಕೆ.ಜಿ. ಮೇವು ಉತ್ಪಾದನೆಗೆ 2.50 ರೂ. ಖರ್ಚು ಬೀಳುತ್ತದೆ.
• ಇದರಿಂದ ವರ್ಷದ 365 ದಿನವೂ ರಾಸುಗಳಿಗೆ ಪೋಷಕಾಂಶಯುಕ್ತ ಹಸುರು ಹುಲ್ಲು ಸಿಗಲಿದೆ.
ಹೇಗಿರುತ್ತದೆ ಘಟಕ?
ಒಂದು ಅಂಗುಲ ವ್ಯಾಸದ ಪಿವಿಸಿ ಪೈಪ್ಗಳಿಂದ ನಿರ್ಮಿಸಿದ ಸ್ಟ್ಯಾಂಡ್, ಪ್ಲಾಸ್ಲಿಕ್ ಟ್ರೇ, ಅರ್ಧ ಎಚ್ಪಿ ಪಂಪ್ ಮತ್ತು ಟೈಮರ್, ಮರಳು ಫಿಲ್ಟರ್ ಮತ್ತು ಹನಿ ನೀರಾವರಿ ಘಟಕ, 90 ಜಿಎಸ್ಎಂ ಹಸಿರು ನೆಟ್ ಬಳಸಿ ಹೈಡ್ರೋಫೋನಿಕ್ಸ್ ಘಟಕ ನಿರ್ಮಿಸಲಾಗುತ್ತದೆ. ಮೇವು ಬೆಳೆಯಲು ಮಣ್ಣು, ಗೊಬ್ಬರ ಬೇಕಿಲ್ಲ. ಬೆಳೆದ ಮೇವನ್ನು ಬೇರು ಸಮೇತ ಜಾನುವಾರುಗಳಿಗೆ ನೀಡಬಹುದು. ಕಾರ್ಮಿಕರ ಅವಲಂಬನೆಯೂ ಕಡಿಮೆ.