Sperm Count Tips: ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಇವೇ ನಿಜವಾದ ಕಾರಣಗಳು : ಹುಷಾರಾಗಿರಿ

Sperm Count Tips: ಇತ್ತೀಚಿನ ದಿನಗಳಲ್ಲಿ ಅನೇಕ ಪುರುಷರು ಎದುರಿಸುತ್ತಿರುವ ಮುಖ್ಯ ಸಮಸ್ಯೆ ವೀರ್ಯಾಣು ಸಂಖ್ಯೆ ಕುಸಿಯುತ್ತಿರುವುದು ಹಾಗೂ ವೀರ್ಯದ ಗುಣಮಟ್ಟ ಕಡಿಮೆಯಾಗಿರುವುದು. ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ತಿಳಿದಿದೆಯೇ? ನಾವು ತಿನ್ನುವ ಆಹಾರಗಳು ನಿಜವಾಗಿಯೂ ನಮಗೆ ಶಕ್ತಿ ತುಂಬಬೇಕು. ಆದರೆ ಇದಕ್ಕೆ ವಿರುದ್ಧವಾಗಿ ಅದು ನಮ್ಮ ದೇಹಕ್ಕೆ ಹಾನಿ ಮಾಡಬಾರದು. ನಮ್ಮ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆಹಾರವನ್ನು ಹೇಗೆ ಉತ್ಪಾದಿಸಲಾಗುತ್ತದೆ ಎಂಬುದರ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ಇತ್ತೀಚಿನ ಆಧುನಿಕ ಕೃಷಿಯಲ್ಲಿ ಅನೇಕ ಮಂದಿ ಅತಿಹೆಚ್ಚು ಕೀಟನಾಶಕಗಳನ್ನು ಬಳಸುತ್ತಾರೆ.

ಇದನ್ನೂ ಓದಿ: Kitchen Gardening: ನಿಂಬೆ ಗಿಡ ನೆಟ್ಟು, ಈ ರೀತಿ ಆರೈಕೆ ಮಾಡಿದರೆ ಗಿಡದ ತುಂಬಾ ನಳನಳಿಸೋ ನಿಂಬೆ ನಿಮ್ಮದಾಗುತ್ತೆ

ಕೀಟಗಳಿಂದ ಬೆಳೆಗಳನ್ನು ರಕ್ಷಿಸುವ ಸಲುವಾಗಿ ಬಳಸುವ ರಾಸಾಯನಿಕಗಳು, ಕೀಟನಾಶಕಗಳು ಮುಂದೆ ನಮಗೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತವೆ. ಇತ್ತೀಚಿನ ಹೊಸ ಸಂಶೋಧನೆಯು ಹೆಚ್ಚಿನ ಕೀಟನಾಶಕಗಳ ಬಳಕೆಯಿಂದ ನಾವು ಸೇವಿಸುವ ಆಹಾರದಿಂದಾಗಿ ವೀರ್ಯದ ಕು‌ಸಿತಕ್ಕೆ ಕಾರಣವಾಗಿವೆ ಎಂಬ ವಿಷಯವನ್ನು ಹೊರಹಾಕಿದೆ. ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಲು ರಾಸಾಯನಿಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಲೇಖನದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: Mangaluru: ಮೋದಿ ರೋಡ್‌ ಶೋ ಹಿನ್ನೆಲೆ; ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

ಇಂದು ನಾವು ಸೇವಿಸುವ ಅನೇಕ ಆಹಾರಗಳಲ್ಲಿ ಕೀಟನಾಶಕಗಳಿವೆ. ಕೀಟನಾಶಕ ಮಿಶ್ರಿತ ಆಹಾರವನ್ನು ಸೇವಿಸುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ಸೂಚಿಸುತ್ತದೆ. ಇದು ಅನೇಕ ಅಂಶಗಳೊಂದಿಗೆ ಸಂಬಂಧಿಸಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮಂಟಲ್ ರಿಸರ್ಚ್ ಅಂಡ್‌ ಪಬ್ಲಿಕ್ ಹೆಲ್ತ್‌ನ ಸಂಶೋಧನೆಯು ಕೆಲವು ಕೀಟನಾಶಕಯುಕ್ತ ಆಹಾರ ಸೇವನೆ ಮತ್ತು ಕಡಿಮೆಯಾದ ವೀರ್ಯ ಗುಣಮಟ್ಟ ನಡುವಿನ ಸಂಬಂಧವನ್ನು ಎತ್ತಿ ತೋರಿಸಿದೆ.

ಈ ಕೆಳಗಿನ ಆಹಾರಗಳಲ್ಲಿ ಕೀಟನಾಶಕಗಳು ಹೆಚ್ಚಾಗಿ ಬಳಸುತ್ತಾರೆ :

ಹೆಚ್ಚಿನ ಪ್ರಮಾಣದ ಕೀಟನಾಶಕ ಸಿಂಪಡಣೆಯಾಗಿರುವ ಆಹಾರವನ್ನು ಸೇವಿಸುವ ಪುರುಷರು ಕಡಿಮೆ ವೀರ್ಯ ಪ್ರಮಾಣ ಹಾಗೂ ಕಡಿಮೆ ಗುಣಮಟ್ಟದ ವೀರ್ಯ ಹೊಂದಿರುತ್ತಾರೆ. ಸ್ಟ್ರಾಬೆರಿ, ಪಾಲಕ್, ಕೇಲ್, ಕೊಲಾರ್ಡ್ ಗ್ರೀನ್ಸ್, ಸಾಸಿವೆ ಗ್ರೀನ್ ಸೇಬುಗಳು, ದ್ರಾಕ್ಷಿಗಳು, ಚೆರ್ರಿಗಳು, ಬ್ಲೂಬೆರ್ರಿಗಳು, ಹಸಿರು ಬೀನ್ಸ್ … ಈ ರೀತಿಯ ಆಹಾರಗಳಲ್ಲಿ ಕೀಟನಾಶಕಗಳು ಹೆಚ್ಚು ಬಳಸಲಾಗುತ್ತದೆ.

 

ಆಹಾರ ಸೇವನೆಯ ಕುರಿತು ಕೆಲವು ಸಲಹೆಗಳು :

1. ವ್ಯತ್ಯಾಸವನ್ನು ಗಮನಿಸಿ : ನೀವು ಖರೀದಿಸುವ ಹಣ್ಣುಗಳು ಮತ್ತು ತರಕಾರಿಗಳ ರುಚಿ, ಬಣ್ಣ ಅಥವಾ ವಿನ್ಯಾಸದಲ್ಲಿನ ವ್ಯತ್ಯಾಸವನ್ನು ಗಮನಿಸಿ. ಏಕೆಂದರೆ ಕೀಟನಾಶಕಗಳ ಅವಶೇಷಗಳು ಅವುಗಳ ನೈಸರ್ಗಿಕ ಗುಣಗಳನ್ನು ಬದಲಾಯಿಸಬಹುದು. ಆದ್ದರಿಂದ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು .

2. ದೇಹದ ಮಾತನ್ನು ಆಲಿಸುವುದು : ಕೀಟನಾಶಕವು ತುಂಬಾ ಹೆಚ್ಚಿದ್ದರೆ ನಮ್ಮ ದೇಹವು ನಮಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತದೆ. ಕೀಟನಾಶಕ ಸಿಂಪಡಿಸಿದ ಆಹಾರ ಸೇವನೆಯಿಂದ ಅಲರ್ಜಿ ಮತ್ತು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಕೆಲವು ಆಹಾರಗಳನ್ನು ಸೇವಿಸಿದ ನಂತರ ನೀವು ಅಸಾಮಾನ್ಯ ಪ್ರತಿಕ್ರಿಯೆಗಳನ್ನು ಅನುಭವಿಸಿದರೆ, ಅವುಗಳ ಕೀಟನಾಶಕಗಳ ವಿಷಯವನ್ನು ಪರಿಶೀಲಿಸುವುದು ಯೋಗ್ಯವಾಗಿದೆ.

3. ಋತುವಿನ ಪ್ರಕಾರ ತಿನ್ನಿರಿ : ಯಾವಾಗಲೂ ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿರಿ. ಋತುಮಾನದ ತರಕಾರಿಗಳು ಮತ್ತು ಹಣ್ಣುಗಳು ತುಂಬಾ ಪೌಷ್ಟಿಕವಾಗಿರುತ್ತವೆ. ಆದರೆ ಆ ಸೀಸನ್ ನಲ್ಲಿ ಹಣ್ಣಾಗದ ತರಕಾರಿಗಳನ್ನು ತಿನ್ನುವ ಮುನ್ನ ಎಚ್ಚರದಿಂದಿರಿ. ನೀವು ಚಳಿಗಾಲದಲ್ಲಿ ಸ್ಟ್ರಾಬೆರಿಗಳನ್ನು ಅಥವಾ ಬೇಸಿಗೆಯಲ್ಲಿ ಕುಂಬಳಕಾಯಿಯನ್ನು ನೋಡಿದರೆ ಜಾಗರೂಕರಾಗಿರಿ. ಏಕೆಂದರೆ ಇದು ಅಸ್ವಾಭಾವಿಕ ಆಹಾರವಾಗಿದೆ.

ಯಾವುದೇ ಋತುವಿನಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಸಮತೋಲಿತ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು.

ಇಂದು ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಮಾಡುವ ಕೆಲಸಗಳು ನಿಮ್ಮ ಭವಿಷ್ಯವನ್ನು ಆರೋಗ್ಯಕರವಾಗಿಸುತ್ತದೆ.

Leave A Reply

Your email address will not be published.