Interesting Facts: ಕಾರಿನಲ್ಲಿ 1 ಗಂಟೆ AC ಹಾಕಿದ್ರೆ ಎಷ್ಟು ಪೆಟ್ರೋಲ್ ಖರ್ಚಾಗುತ್ತೆ?
Interesting Fact: ಕಾರು ಪ್ರಯಾಣ ಎಂದರೆ ಎಲ್ಲರಿಗೂ ಬಲು ಪ್ರೀತ. ದೂರದ ಊರುಗಳಿಗೆ, ಟ್ರಿಪ್ ಮಾಡಲು ಕಾರುಗಳಲ್ಲಿ ಹೋಗುವುದೆಂದರೆ ಒಂದು ರೀತಿಯ ಖುಷಿ. ಹೀಗೆ ಕಾರಲ್ಲಿ ಹೋಗುವ ಸಂದರ್ಭದಲ್ಲಿ ಸುಖಕರ ಪ್ರಯಾಣಕ್ಕಾಗಿ ಹೆಚ್ಚಿನವರು ಎಸಿ ಆನ್ ಮಾಡುತ್ತಾರೆ. ಆದರೆ ಕಾರಲ್ಲಿ ಹೀಗೆ ಯಾವಾಗ ಬೇಕು ಆವಾಗ AC ಆನ್ ಮಾಡಿದ್ರೆ ಏನೆಲ್ಲಾ ನಷ್ಟ ಉಂಟಾಗುತ್ತೆ ಗೊತ್ತಾ? ಹಾಗಿದ್ರೆ ಇಲ್ಲಿದೆ ನೋಡಿ ಕುತೂಹಲ ವಿಚಾರ(Intresting fact)
ಇಂದು ಬಿಸಿಲ ಝಳಕ್ಕೆ ಜನ ತಂಡಾ ಹೊಡೆದಿದ್ದಾರೆ. ಫ್ಯಾನ್, ಕೂಲರ್, AC ಇಲ್ಲದೆ ನಿಮಿಷವೂ ಇರಲು ಅಸಾಧ್ಯ. ಕಾರಿನಲ್ಲಿ ಹೋಗುವಾಗ ಕಿಟಕಿ ತೆರೆದರೆ ಬೇಕಾದಷ್ಟು ಗಾಳಿ ಬೀಸಿದರೂ AC ಹಾಕಿದಾಗ ಆಗೋ ನೆಮ್ಮದಿ ಸಿಗುವದೇ ಇಲ್ಲ. ಹೀಗಾಗಿ ಇಂದು ಎಲ್ಲರೂ ಕಾರಲ್ಲಿ AC ಹಾಕುತ್ತಾರೆ. ಹವಾನಿಯಂತ್ರಿಣ ಇಲ್ಲದ ಕಾರಿನಲ್ಲಿ ಪ್ರಯಾಣಿಸೋದೇ ತ್ರಾಸದಾಯಕ. ಹೀಗೆ ಕಾರಲ್ಲಿ 1 ಗಂಟೆ ನಿರಂತರವಾಗಿ AC ಆನ್ ಮಾಡಿದ್ರೆ ಎಷ್ಟು ಪೆಟ್ರೋಲ್(Petrol) ಖರ್ಚಾಗುತ್ತೆ ಅನ್ನೋ ಐಡಿಯಾ ಇದೆಯಾ? ಇದು ತಿಳಿದರೆ ಇನ್ಮುಂದೆ ನೀವು AC ಹಾಕೋದಕ್ಕೆ ಹಿಂದೆ ಮುಂದೆ ಯೋಚಿಸ್ತೀರಾ!
ಹೌದು, ವರದಿಯ ಪ್ರಕಾರ 1 ಗಂಟೆ ಎಸಿ ಬಳಸಿದರೆ 1.2 ಲೀಟರ್ ಪೆಟ್ರೋಲ್ ಖರ್ಚಾಗುತ್ತದೆ. ಆಟೋಮೊಬೈಲ್ ಕ್ಷೇತ್ರದ ತಜ್ಞರು ಹೇಳುವಂತೆ ಕಾರಿನಲ್ಲಿ ಎಸಿ ಬಳಸುವುದರಿಂದ ಕಾರಿನ ಮೈಲೇಜ್(Mileage) ಶೇಕಡಾ 5 ರಿಂದ 10 ರಷ್ಟು ಕಡಿಮೆಯಾಗುತ್ತದೆ. ಜೊತೆಗೆ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಕಾರು ಚಲಾಯಿಸುವಾಗ ಎಸಿ ಆನ್ ಮಾಡಿದರೆ, ಪೆಟ್ರೋಲ್ ಬಳಕೆ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಎಸಿಯಲ್ಲಿ ಕಂಪ್ರೆಸರ್ ಅನ್ನು ಚಲಾಯಿಸಲು ಬಹಳಷ್ಟು ಪೆಟ್ರೋಲ್ ಬಳಸಲಾಗುತ್ತದೆ. ಎಸಿಗೆ ಶಕ್ತಿ ತುಂಬಲು ಎಂಜಿನ್ ಹೆಚ್ಚು ಶ್ರಮಪಡಬೇಕಾಗುತ್ತದೆ. ಹೀಗಾಗಿ ಇಂಧನ ಬಳಕೆ ಹೆಚ್ಚು.
ಅಂದಹಾಗೆ ಇದು ಎಲ್ಲಾ ಕಾರುಗಳಿಗೆ ಸಮಾನವಾಗಿ ಅನ್ವಯಿಸುವುದಿಲ್ಲ. ಇದು ಅನೇಕ ಅಂಶಗಳನ್ನು ಹೊಂದಿದೆ. ಎಸಿ ಎಷ್ಟು ಪೆಟ್ರೋಲ್ ಬಳಸುತ್ತಿದೆ ಎಂಬುದು ಕಾರಿನ ಎಂಜಿನ್ ಗಾತ್ರ, ಎಸಿಯ ಕಾರ್ಯಕ್ಷಮತೆ, ಹೊರಗಿನ ತಾಪಮಾನ, ಕಾರಿನ ವೇಗ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಕಾರಿನಲ್ಲಿರುವ ಎಸಿ ಪೆಟ್ರೋಲ್ನಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಕೆಲಸ ಮಾಡುವುದರಿಂದ ಇದು ಜೇಬಿಗೆ ಕತ್ತರಿ ಹಾಕುವುದು ಸತ್ಯ.
ಇದನ್ನೂ ಓದಿ: ಹೊಸ ವರ್ಷ ಆರಂಭ, ಯಾರಿಗೆ ಲಾಭ? ಯಾರಿಗೆ ನಷ್ಟ?