Vijayapura: ಫಲಿಸಿದ ಸಾವಿರಾರು ಜನರ ಪ್ರಾರ್ಥನೆ; ಬೋರ್‌ವೆಲ್‌ನಿಂದ ಜೀವಂತವಾಗಿ ಹೊರಬಂದ ಸಾತ್ವಿಕ್
Vijayapura: ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯ ಮುಗಿದಿದ್ದು, ಸಾವಿರಾರು ಜನರ ಪ್ರಾರ್ಥನೆಯ ಮೂಲಕ ಮಗು ಜೀವಂತವಾಗಿ ಹೊರ ತೆಗೆಯಲಾಗಿದೆ. 18 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡ ಮಗುವನ್ನು ಜೀವಂತವಾಗಿ ಹೊರತೆಗೆದಿದೆ.
ಇದನ್ನೂ ಓದಿ: Bengaluru Murder Case: ಮಹಿಳೆಯ ಅತ್ಯಾಚಾರ ಮಾಡಿ, ಮರ್ಮಾಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ 18 ವರ್ಷದ ಕಾಮುಕ
ನಿನ್ನೆ ಅಂದರೆ ಬುಧವಾರ ಸಂಜೆ 6 ಗಂಟೆಯ ಸಮಯಕ್ಕೆ ಕೊಳವೆ ಬಾವಿಗೆ ಬಿದ್ದಿದ್ದ ಮಗು ಸತತ 18 ಗಂಟೆಗಳ ಕಾಲ ಅನ್ನ ನೀರು ಇಲ್ಲದೆ ಜೀವನ್ಮರಣ ಹೋರಾಟ ಮಾಡಿ ಇದೀಗ ಕೊಳವೆ ಬಾವಿಯಿಂದ ಜೀವಂತವಾಗಿ ಹೊರಬಂದಿದೆ.
ಇದನ್ನೂ ಓದಿ: Health Tips: ಬಿಸಿಲು ಅಂತ ಜಾಸ್ತಿ ಐಸ್ ಕ್ರೀಮ್ ತಿಂತೀರಾ? ಹಾಗಾದ್ರೆ ಈ ಸುದ್ಧಿ ನಿಮಗಾಗಿ
ಮಗು ಹೊರಗೆ ತೆಗೆದ ಕೂಡಲೇ ಪ್ರಥಮ ಚಿಕಿತ್ಸೆಯನ್ನು ವೈದ್ಯರು ನೀಡಿದ್ದು, ನಂತರ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.