Bengaluru Murder Case: ಮಹಿಳೆಯ ಅತ್ಯಾಚಾರ ಮಾಡಿ, ಮರ್ಮಾಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ 18 ವರ್ಷದ ಕಾಮುಕ

Bengaluru Murder Case: ಮಹಿಳೆಯೊಬ್ಬರನ್ನು 18 ರ ಹರೆಯದ ಯುವಕನೋರ್ವ ಎಳೆದುಕೊಂಡು ಹೋಗಿ ಅಮಾನುಷವಾಗಿ ಅತ್ಯಾಚಾರ ಮಾಡಿದ ಘಟನೆಯೊಂದು ಬೆಂಗಳೂರಿನ ಅಮೃತಹಳ್ಳಿಯ ಕಾಫಿಬೋರ್ಡ್‌ ಬಳಿ ನಡೆದಿದೆ.

ಇದನ್ನೂ ಓದಿ: Vivek Dhakad Suicide: ರಾಜಸ್ಥಾನದ ಮಾಜಿ ಕಾಂಗ್ರೆಸ್ ಶಾಸಕ ಆತ್ಮಹತ್ಯೆ, ತಂದೆಯೂ ವಿಷ ಸೇವನೆ

ಬರ್ಬರವಾಗಿ ಹತ್ಯೆಯಾಗಿದ ಮಹಿಳೆ ರಾಯಚೂರು ಮೂಲದವರು ಎಂದು ಹೇಳಲಾಗಿದೆ. ಗಾರೆ ಕೆಲಸ ಮಾಡುತ್ತಿದ್ದ ಈಕೆಯನ್ನು 18 ರ ಹರೆಯ ಯುವಕ ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಮರ್ಮಾಂಗದ ಮೇಲೆ ಹಲ್ಲೆ ಮಾಡಿ, ಹತ್ಯೆಗೈದಿದ್ದಾನೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹಾಗೂ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Vitla: ಬಸ್‌-ಪಿಕಪ್‌ ಮುಖಾಮುಖಿ ಡಿಕ್ಕಿ

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.