School Holiday: ಏಪ್ರಿಲ್ 8 ಸೂರ್ಯ ಗ್ರಹಣ – ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ !!

School Holiday: ಏಪ್ರಿಲ್ 8 ರಂದು ವರ್ಷದ ಮೊದಲ ಸೂರ್ಯ ಗ್ರಹಣವು(Solar Eclipse) ನಡೆಯಲಿದೆ. ಈ ಸೂರ್ಯಗ್ರಹಣವು ಅನೇಕ ದೇಶಗಳಲ್ಲಿ ಗೋಚರಿಸುತ್ತದ್ದು, ಅಮೆರಿಕಾ(America)ದಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ US ಸರ್ಕಾರವು ವ್ಯವಸ್ಥೆಗಳನ್ನು ಪ್ರಾರಂಭಿಸಿದೆ. ಭದ್ರತಾ ಕಾರಣಗಳಿಗಾಗಿ, ಏಪ್ರಿಲ್ 8 ರಂದು ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಗಳನ್ನೂ ಘೋಷಿಸಲಾಗಿದೆ.

ಹೌದು, ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭಾಗಶಃ ಸೌರ ಗ್ರಹಣವು ಸುತ್ತಮುತ್ತಲಿನ ಸಾವಿರಾರು ಕಿಲೋ ಮೀಟರ್ ಅಗಲದ ಪ್ರದೇಶದಲ್ಲಿ ಗೋಚರಿಸಲಿದೆ. ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ಇರುತ್ತದೆ. ಗ್ರಹಣದ ಹಾದಿಯು ವಾಯುವ್ಯ ಮೆಕ್ಸಿಕೋದಿಂದ ಅಮೆರಿಕದ ಮೂಲಕ ಆಗ್ನೇಯ ಕೆನಡಾದವರೆಗೆ ಸಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅವಧಿಯಲ್ಲಿ, ಹಗಲಿನಲ್ಲಿ ಕತ್ತಲೆಯ ಅನುಭವವಾಗುತ್ತದೆ ಎಟದೂ ತಿಳಿಸಿದ್ದಾರೆ.

ಇದನ್ನೂ ಓದಿ: Vastu Tips: ಗಂಡ ಹೆಂಡತಿ ನಡುವೆ ಯಾವಾಗ್ಲೂ ಜಗಳ ಆಗ್ತಾ ಇದ್ಯ? ಮೊದಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ಇನ್ನು ಇದೇ ಕಾರಣಕ್ಕೆ ಗ್ರಹಣ ಮತ್ತು ಕತ್ತಲೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಜೊತೆಗೆ ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣ ವೀಕ್ಷಿಸಲು ಲಕ್ಷಾಂತರ ಜನ ನಯಾಗರಕ್ಕೆ (Niagara) ಬರುವ ಹಿನ್ನೆಲೆ ನಯಾಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ.

ಏಪ್ರಿಲ್ 8ರಂದು ಸಂಭವಿಸುತ್ತಿರುವ ಸಂಪೂರ್ಣ ಸೂರ್ಯಗ್ರಹಣವು 1979ರ ನಂತರ ನಯಾಗರ ಪ್ರಾಂತ್ಯದಲ್ಲಿ ಪ್ರಥಮ ಬಾರಿಗೆ ಸ್ಪರ್ಶಿಸಲಿದೆ. ನಯಾಗರ ಪ್ರಾಂತ್ಯದಲ್ಲಿ ಚಂದ್ರನು ಕೆಲಕಾಲ ಸೂರ್ಯನ ಕಿರಣಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದ್ದಾನೆ. ಈ ಖಗೋಳ ವಿಸ್ಮಯ ವೀಕ್ಷಿಸಲು ನಯಾಗರ ಜಲಪಾತ ಪ್ರದೇಶ ಅತ್ಯುತ್ತಮ ತಾಣವಾಗಿದೆ.

ಸೂರ್ಯಗ್ರಹಣ ಎಲ್ಲಿ ಕಾಣಿಸುತ್ತದೆ?
ಮೆಕ್ಸಿಕೋ, ಸಿನಾಲೋವಾ, ನಯರಿಟ್, ಡುರಾಂಗೊ ಮತ್ತು ಕೊವಾಹಿಲಾ, ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್, ಯುಎಸ್‌ನ ಮೈನೆ ಮತ್ತು ಒಂಟಾರಿಯೊ, ಕ್ವಿಬೆಕ್, ನ್ಯೂ ಬ್ರನ್ಸ್‌ವಿಕ್, ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್, ಕೆನಡಾದ ನೋವಾ ಸ್ಕಾಟಿಯಾ ಮತ್ತು ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಗ್ರಹಣವನ್ನುಕಾಣಬಹುದು. ತಜ್ಞರ ಪ್ರಕಾರ, ಸೌರಶಕ್ತಿ ಉತ್ಪಾದನೆಯು ಸೂರ್ಯಗ್ರಹಣದಿಂದಾಗಿ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಹೀಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೂರ್ಯಗ್ರಹಣದಿಂದಾಗಿ ಈಗಾಗಲೇ ಶಾಲೆಗಳಿಗೆ ರಜಾದಿನಗಳನ್ನು ಘೋಷಿಸಿವೆ.

ಇದನ್ನೂ ಓದಿ: Interesting Question: ಇನ್ಶುರೆನ್ಸ್ ನಲ್ಲಿ ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ ಬಗ್ಗೆ ಗೊತ್ತು; ಹಾಗಾದ್ರೆ ಮಧ್ಯದ ಸೆಕೆಂಡ್ ಪಾರ್ಟಿ ಯಾರು ?

Leave A Reply

Your email address will not be published.