Sadguru: ತುರ್ತು ಮೆದುಳು ಚಿಕಿತ್ಸೆಗೆ ಒಳಗಾದ ಸದ್ಗುರು

ಈಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಅವರು ಇತ್ತೀಚೆಗೆ ” ಮೆದುಳಿನ ಶಸ್ತ್ರಚಿಕಿತ್ಸೆಗೆ ” ಒಳಗಾಗಿದ್ದು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಶಾ ಫೌಂಡೇಶನ್ ಬುಧವಾರ ತಿಳಿಸಿದೆ.

ಇದನ್ನೂ ಓದಿ: Actress Priyanka Chopra: ಅಯೋಧ್ಯೆಯ ರಾಮಮಂದಿರದಲ್ಲಿ ಕುಟುಂಬ ಸಮೇತ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ
ಕಳೆದ ವಾರದಿಂದ ತೀರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಅವರು ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ವೈದ್ಯರು ಅವರ ತಲೆಯ ಸ್ಕ್ಯಾನಿಂಗ್ ಮಾಡಿಸಿದಾಗ ಮೆದುಳಿನ ಒಳಗೆ ರಕ್ಷಾಸ್ರಾವ ಆಗಿರುವುದು ಕಂಡುಬಂದಿದೆ ತಕ್ಷಣ ವೈದ್ಯರು ಸದ್ಗುರು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಸದ್ಗುರು ಅವರ ಆರೋಗ್ಯ ನಿರೀಕ್ಷೆಗೂ ಮೀರಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ” ಎಂದು ಇಶಾ ಫೌಂಡೇಶನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅಪೊಲೊ ಆಸ್ಪತ್ರೆಯ ಡಾ . ವಿನಿತ್ ಸೂರಿ ಅವರನ್ನು ಉಲ್ಲೇಖಿಸಿದೆ.