Flower Price: ಹೂ ಬೆಳೆಗೂ ತಟ್ಟಿದ ಬಿಸಿಲ ಝಳ : ಗಗನಕ್ಕೇರುತ್ತಿದೆ ಹೂವಿನ ದರ
ರಾಜ್ಯದಲ್ಲಿ ಎಲ್ಲೆಡೆ ನೀರಿನ ಅಭಾವದಿಂದ ಹೂವಿನ ಬೆಳೆಗೆ ಅಪಾರ ನೀರಿನ ಕೊರತೆ ಉಂಟಾಗುತ್ತಿದ್ದು, ಇದೀಗ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಸೇರಿದಂತೆ ರಾಜ್ಯದ ಪ್ರಮುಖ ಹೂವಿನ ಮಾರುಕಟ್ಟೆಗಳಿಗೆ ಹೂವುಗಳ ಪೂರೈಕೆ ಶೇಕಡ 25ರಷ್ಟು ಕಡಿಮೆಯಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಹೂವಿನ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.
ಇದನ್ನೂ ಓದಿ: Hanuman Chalisa: ಹನುಮಾನ್ ಚಾಲೀಸ ಹಾಡು ಹಾಕಿದ ಪ್ರಕರಣ; ಹಲ್ಲೆ ಮಾಡಿದ ಅಪ್ರಾಪ್ತ ಸೇರಿ 6 ಮಂದಿ ಬಂಧನ
ಬಿರು ಬೇಸಿಗೆಯಿಂದಾಗಿ ಬೋರ್‌ವೆಲ್ ಗಳಲ್ಲಿ ನೀರು ಕ್ಷೀಣಿಸುತ್ತಿದ್ದು, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೂವಿನ ಬೆಳೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೊತೆಗೆ ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಬರುತ್ತಿದ್ದ ಹೂವಿನ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ: Bengaluru: ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಹೂವಿನ ವ್ಯಾಪಾರಿಯೊಬ್ಬರು ಮಾತನಾಡಿ, ಸದ್ಯಕ್ಕೆ ಹೂ ಸೀಸನ್ ಇಲ್ಲದ ಕಾರಣ, ಮಲ್ಲಿಗೆ ಕೇಜಿಗೆ 300-500, ಸೇವಂತಿಗೆ ₹180-200, ಸುಗಂಧರಾಜ ₹100 -₹80, ರೋಸ್ ₹100 ಬೆಲೆಯಿದೆ. ವ್ಯಾಪಾರವೂ ತುಂಬಾ ಕಡಿಮೆಯಾಗಿದೆ ಎಂದು ತಿಳಿಸಿದರು.
ಬೋರ್‌ವೆಲ್ ಗಳನ್ನು ನಂಬಿಕೊಂಡು ಹೆಚ್ಚಿನ ರೈತರು ಹೂ ಬೆಳೆಯುತ್ತಾರೆ. ಸದ್ಯ ಹೂದೋಟಕ್ಕೆ ಅಗತ್ಯದಷ್ಟು ನೀರು ಹರಿಸಲಾಗದ ಕಾರಣ ಹೆಚ್ಚಿನ ಬೆಳೆ ಬರುತ್ತಿಲ್ಲ. ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಉತ್ತಮ ಪ್ರಮಾಣದಲ್ಲಿ ಬಂದಿದ್ದ ಹೂವು ಫೆಬ್ರವರಿಯಿಂದ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಗುಲಾಬಿ, ಸೇವಂತಿಗೆ, ಚೆಂಡು ಹೂವು, ಕಾಕಡ, ಕನಕಾಂಬರ, ಸುಗಂಧರಾಜ ಹೂವುಗಳಿಗೆ ಕೊರತೆ ಎದುರಾಗಿದೆ. ಹೀಗಾಗಿ, ನಗರದಲ್ಲಿ ಹೂವಿನ ಲಭ್ಯತೆ ಕಡಿಮೆಯಾಗಿದೆ ಎಂದು ಹೂ ಬೆಳೆಗಾರರು ತಿಳಿಸಿದ್ದಾರೆ.