Home Crime Mangaluru: ತಲಪಾಡಿಯಲ್ಲಿ ಪಾದಚಾರಿಗೆ ಬೈಕ್‌ ಡಿಕ್ಕಿ; ವ್ಯಕ್ತಿ ಸಾವು

Mangaluru: ತಲಪಾಡಿಯಲ್ಲಿ ಪಾದಚಾರಿಗೆ ಬೈಕ್‌ ಡಿಕ್ಕಿ; ವ್ಯಕ್ತಿ ಸಾವು

Mangaluru

Hindu neighbor gifts plot of land

Hindu neighbour gifts land to Muslim journalist

Ullala: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆಯೊಂದು ತಲಪಾಡಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Post office: ಕರ್ನಾಟಕದ ಈ ಆಯ್ದ ನಗರಗಳಲ್ಲಿ ಇನ್ಮುಂದೆ ಭಾನುವಾರವೂ ಅಂಚೆ ಕಚೇರಿಗಳು ತೆರೆಯಲಿವೆ

ರಾಜೇಶ್‌ ಶೆಟ್ಟಿ (49) ಎಂಬುವವರೇ ಮೃತ ವ್ಯಕ್ತಿ. ರಾಜೇಶ್‌ ಅವರಿಗೆ ತಲಪಾಡಿ ಹಳೆ ಬಸ್‌ ತಂಗುದಾಣದ ಬಳಿ ಬೇಕರಿ ಇದೆ. ಎದುರು ಭಾಗದಲ್ಲೇ ಹೆದ್ದಾರಿ ಸಮೀಪ ಮನೆ ಕೂಡಾ ಇದೆ. ಭಾನುವಾರ ತಲಪಾಡಿ ದೇವಿಪುರದಲ್ಲಿ ರಥೋತ್ಸವ ಇದ್ದ ಕಾರಣ ರಾಜೇಶ್‌ ಅವರು ತಮ್ಮ ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿದ್ದು, ಮಧ್ಯಾಹ್ನದ ಸಮಯದಲ್ಲಿ ಬೇಕರಿಗೆ ತೆರಳುತ್ತಿದ್ದರು.

ಇದನ್ನೂ ಓದಿ: D.V.Sadananda Gowda: ನಾಳೆ ಮಹತ್ವದ ಸುದ್ದಿಗೋಷ್ಠಿ ಕರೆದ ಡಿವಿಎಸ್‌; ಮಾಜಿ ಸಿಎಂ ಚಿತ್ತ ಕಾಂಗ್ರೆಸ್‌ನತ್ತ?

ಈ ಸಮಯದಲ್ಲಿ ಅವರು ಹೆದ್ದಾರಿ ದಾಟಲು ನಿಂತಿದ್ದು, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಜೇಶ್‌ ಅವರು ರಸ್ತೆಗೆಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೈಕ್‌ ಸವಾರ ಮಹಮ್ಮದ್‌ ಸೊಹೈಲ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.