Home Business Share Market: ಷೇರು ಮಾರುಕಟ್ಟೆಯ ಸಂಪತ್ತು ಕೊಳ್ಳೆ – ಒಂದೇ ದಿನ ಕರಗಿತು ಹೂಡಿಕೆದಾರರ...

Share Market: ಷೇರು ಮಾರುಕಟ್ಟೆಯ ಸಂಪತ್ತು ಕೊಳ್ಳೆ – ಒಂದೇ ದಿನ ಕರಗಿತು ಹೂಡಿಕೆದಾರರ 14 ಲಕ್ಷ ಕೋಟಿ ಮೌಲ್ಯ !

Share Market

Hindu neighbor gifts plot of land

Hindu neighbour gifts land to Muslim journalist

 

ಮುಂಬೈ ಷೇರು ಮಾರುಕಟ್ಟೆಯಲ್ಲಿ (Share Market) ಅಕ್ಷರಶಃ ಸಂಪತ್ತು ಕೊಳ್ಳೆ ಹೋಗಿದೆ. ಷೇರು ಹೂಡಿಕೆದಾರರ (Investors) ವಿಪರೀತ ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂಗಳಷ್ಟು ಕರಗಿ ನೀರಾಗಿ ಹೋಗಿದೆ.

ಇದನ್ನೂ ಓದಿ: Big Boss Tukali Santosh: ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ!

ಇಂದು ಮುಂಬೈ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ (NSE) ನಿಫ್ಟಿ(Nifty) ಸೂಚ್ಯoಕಗಳು ಭಾರೀ ಇಳಿಕೆಯಾಗಿವೆ. ಇಂದು ಒಂದೇ ದಿನದಲ್ಲಿ ಹೂಡಿಕೆದಾರರ ಸುಮಾರು 14 ಲಕ್ಷ ಕೋಟಿ ರೂಪಾಯಿಗಳು ಐಸಿನಂತೆ ಕರಗಿ ಹೋಗಿದೆ. ಜತೆಗೆ ನಿಫ್ಟಿ ಮಿಡ್ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಇಂಡೆಕ್ಸ್ನಲ್ಲಿ ಕೂಡಾ ಭಾರೀ ಇಳಿಕೆ ಆಗಿದ್ದು, ಬರೋಬ್ಬರಿ 4% ಇಳಿಕೆಯಾಗಿದೆ.

ಇದನ್ನೂ ಓದಿ: BOB: ಬ್ಯಾಂಕ್ ಆಫ್ ಬರೋಡಾದಲ್ಲಿ ಹಣ ಇಟ್ಟವರಿಗೆ ಮಹತ್ವದ ಮಾಹಿತಿ

ಯಾವ ಇಳಿಕೆ ಎಷ್ಟು?

ಒಟ್ಟು ಸೆನ್ಸೆಕ್ಸ್ 906.17 ಅಂಕ ಕುಸಿದು 1.23% ನಷ್ಟು ಬಿದ್ದಿದ್ದು ಇದೀಗ 72,761 ರಲ್ಲಿ ಕೊನೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ 100 ಷೇರುಗಳು -4.40% (2,115 ಪಾಯಿಂಟ್) ಕುಸಿದು 45,971 ರಲ್ಲಿ ಅಂತ್ಯಗೊಂಡಿದೆ. ಒಂದೇ ದಿನ ನಿಫ್ಟಿ ಮಿಡ್ಕ್ಯಾಪ್ ಇಷ್ಟೊಂದು ಇಳಿಕೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲು.

5 ಸಾವಿರ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಸ್ಮಾಲ್ ಕ್ಯಾಪ್ ಎಂದು ಗುರುತಿಸಿಕೊಂಡರೆ, 5,000 ಕೋಟಿ ರೂ.ನಿಂದ 20,000 ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್ ಕ್ಯಾಪ್ ವ್ಯಾಪ್ತಿಯಲ್ಲಿ ಬರುತ್ತವೆ.

ಇಳಿಕೆಯಾಗಲು ಕಾರಣ ಏನು?

ಕೆಲ ತಿಂಗಳಿನಿಂದ ಸಣ್ಣ ಮತ್ತು ಮಿಡ್ ಕ್ಯಾಪ್ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗುತ್ತಿದೆ. ಏರಿಕೆ ಆಗುತ್ತಿರುವ ಷೇರಿನ ಬೆಲೆಗಳು ಆಯಾ ಕಂಪನಿಗಳ ಆರ್ಥಿಕ ಮೂಲಗಳಿಗೆ ಸಂಬಂಧಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಈ ವಲಯದಲ್ಲಿ ಹೂಡಿಕೆದಾರರು ಹಣ ಕಳೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರು ಬೆಲೆಗಳನ್ನು ತಿರಚುಲಾಗುತ್ತಿದೆ. ಹೀಗಾಗಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೊದಲುಹೂಡಿಕೆದಾರರು ತುಂಬಾ ಎಚ್ಚರದಲ್ಲಿ ಇರಬೇಕು ಎಂದು ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬಾಚ್ ಎಚ್ಚರಿಸಿದ್ದರು.  ಮಂಗಳವಾರ ಮಾಧಬಿ ಬಾಚ್ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಬುಧವಾರ ಮಿಡ್ ಕ್ಯಾಪ್ ಕಂಪನಿಗಳ ಷೇರು ಒಂದೇ ದಿನದಲ್ಲಿ ಭಾರೀ ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಕೃತಕವಾಗಿ ಕೆಲವರಿ ಷೇರುಗಳ ದರವನ್ನು ಏರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.