Putturu: ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್‌ ಇನ್ನಿಲ್ಲ

Share the Article

Putturu: ಅಂಬಿಕಾ ವಿದ್ಯಾಸಂಸ್ಥೆಗಳ ಮಾತೃಸಂಸ್ಥೆಯಾಗಿರುವ ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ ಅಧ್ಯಕ್ಷ ಶಿವಾನಂದ್‌ ರಾವ್‌ (93) ಅವರು ಇಂದು ಬೆಳಿಗ್ಗೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ: Dakshina Kannada (Vitla): ಇಸ್ಪೀಟ್‌ ಆಟ- ಪೊಲೀಸರ ದಾಳಿ, ನಾಲ್ವರು ವಶ

ನಟ್ಟೋಜ ಶಿವಾನಂದ ರಾವ್‌ ಅವರು ಪುತ್ತೂರಿನ ಅತ್ಯಂತ ಹಿರಿಯ ಕರಸೇವಕರು. ಸಾಮಾಜಿಕ ಹಾಗೂ ರಾಜಕೀಯವಾರಿ ಸಕ್ರಿಯರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು.

ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಮೃತರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Leave A Reply