Parliament Election: ಕಲ್ಪತರು ನಾಡಿನಲ್ಲಿ ಗೋ ಬ್ಯಾಕ್ ಸೋಮಣ್ಣ ಕೂಗು : ಈ ಬಾರಿ ಯಾರಿಗೆ ಒಲಿಯಲಿದೆ ತುಮಕೂರು ಬಿಜೆಪಿ ಟಿಕೆಟ್ ?
ಲೋಕಸಭಾ ಸಮರ ಹೆಚ್ಚಾಗುತ್ತಿದ್ದಂತೆ ಇದೀಗ ಕಲ್ಪತರು ನಾಡು ಎಂದು ಪ್ರಖ್ಯಾತಿ ಪಡೆದಿರುವ ತುಮಕೂರಿನಲ್ಲಿ ಲೋಕಸಭಾ ಟಿಕೆಟ್ ಯಾರ ಪಾಲಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಇದೀಗ ತುಮಕೂರಿನಲ್ಲಿ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಲೋಕಸಭಾ ಟಿಕೆಟ್ ನೀಡಲಾಗುತ್ತದೆ ಎಂಬ ಊಹಾಪೋಹಗಳು ತುಮಕೂರು ಕ್ಷೇತ್ರದ ಬಿಜೆಪಿ ನಾಯಕರಲ್ಲಿ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ.
ತುಮಕೂರಿನ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಬೆಂಬಲಿಗರು ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರನ್ನು ಸುಡುವ ಮೂಲಕ “ಗೋ ಬ್ಯಾಕ್ ಸೋಮಣ್ಣ” ಎಂದು ಸೋಮಣ್ಣ ಅವರಿಗೆ ಘೇರಾವ್ ಕೂಗಿದ್ದಾರೆ. ಈ ಬಾರಿಯ ಟಿಕೆಟ್ ಜೆ ಸಿ ಮಾಧುಸ್ವಾಮಿ ಅವರಿಗೆ ನೀಡಬೇಕೆಂದು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ.
ತಿಪಟೂರಿನಲ್ಲಿ ಸಮಾವೇಶಗೊಂಡಿದ್ದ ನೂರಾರು ಬಿಜೆಪಿ ಕಾರ್ಯಕರ್ತರು, ತುಮಕೂರಿನಲ್ಲಿ ವಲಸಿಗರಿಗೆ ಟಿಕೆಟ್ ನೀಡಬಾರದೆಂದು ಕೇಂದ್ರದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ಕೇವಲ ಆನ್ಲೈನ್ ನಲ್ಲಿ ಮಾತ್ರ ಗೋ ಬ್ಯಾಕ್ ಸೋಮಣ್ಣ ಎಂಬ ಕೂಗು ಕೇಳಿ ಬರುತ್ತಿತ್ತು. ಆದರೆ ಇದೀಗ ಮಾಧುಸ್ವಾಮಿ ಅಭಿಮಾನಿಗಳು ಬೀದಿಗಿಳಿದು ಘೇರಾವ್ ಕೂಗಿರೋದು ಕಮಲ ಪಾಳಯದಲ್ಲಿ ಚರ್ಚೆಯನ್ನ ಹುಟ್ಟಿ ಹಾಕಿದೆ.
ತಮ್ಮ ನಿಷ್ಠುರ ಮಾತುಗಳಿಂದಲೇ ಪ್ರಖ್ಯಾತಿ ಹೊಂದಿರುವ ಮಾಜಿ ಸಚಿವ ಮಾಧುಸ್ವಾಮಿಯವರಿಗೆ ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದು, ಇದೀಗ ಅವರ ಬೆಂಬಲಿಗರು ಗೋ ಬ್ಯಾಕ್ ಸೋಮಣ್ಣ ಎಂದು ಹೇಳುವ ಮೂಲಕ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿಯಲ್ಲಿ ತಲ್ಲಣ್ಣ ಉಂಟಾಗುವಂತೆ ಮಾಡಿದ್ದಾರೆ.
ಇದುವರೆಗೂ ಮಾಧುಸ್ವಾಮಿಯವರು ಇಟ್ಟ ಹೆಜ್ಜೆಯನ್ನ ಎಂದು ಹಿಂದಕ್ಕೆ ತೆಗೆದುಕೊಂಡ ಉದಾಹರಣೆಯೇ ಇಲ್ಲ ಒಂದು ವೇಳೆ ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಮ್ಮ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ.
ಒಟ್ಟಾರೆ ಕಲ್ಪತರು ನಾಡಿನ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಒಂದು ವೇಳೆ ಮಾಧುಸ್ವಾಮಿ ಅವರಿಗೆ ಟಿಕೆಟ್ ದೊರೆಯದೇ ಹೋದರೆ ತುಮಕೂರಿನಲ್ಲಿ ಬಿಜೆಪಿಗೆ ದೊಡ್ಡ ನಷ್ಟ ಸಂಭವಿಸುವ ಸಾಧ್ಯತೆ ಇದೆ.