Home Karnataka State Politics Updates Satish jarkiholi: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್’ಗೆ ಬಿಗ್ ಶಾಕ್ ಕೊಟ್ಟ ಸತೀಶ್ ಜಾರಕಿಹೊಳಿ !!

Satish jarkiholi: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್’ಗೆ ಬಿಗ್ ಶಾಕ್ ಕೊಟ್ಟ ಸತೀಶ್ ಜಾರಕಿಹೊಳಿ !!

Hindu neighbor gifts plot of land

Hindu neighbour gifts land to Muslim journalist

Satish jarkiholi: ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಹಾಗೂ ಸರ್ಕಾರವು ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ 7ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಕೂಡ ಆಗಿದೆ. ಹೀಗಾಗಿ ಚಟುವಟಿಕೆಗಳು ಇನ್ನೂ ಚುರುಕಾಗಿವೆ. ಆದರೆ ಈ ಬೆನ್ನಲ್ಲೇ ಕಾಂಗ್ರೆಸ್ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ(Satish jarkiholi) ಅವರು ತಮ್ಮ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ.

 

ಹಲವು ವರ್ಷಗಳಿಂದ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿಬರುತ್ತಿದೆ. ಆಗಾಗ ಇದು ಹೆಚ್ಚು ಸದ್ದು ಮಾಡುತ್ತಿರುತ್ತದೆ. ಆದರೀಗ ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ಚರ್ಚೆ ಮುನ್ನಲೆಗೆ ಬಂದಿದೆ. ದಲಿತ ನಾಯಕ, ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ದಲಿತ ಸಿಎಂ ವಿಚಾರವನ್ನು ಮುನ್ನಲೆಗೆ ತರುತ್ತೇವೆ ಎಂದಿದ್ದಾರೆ.

 

ಹೌದು, ಈ ಬಗ್ಗೆ ಮಾತನಾಡಿದ ಅವರು ದಲಿತ ಸಿಎಂ ಆಗಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಇದರಲ್ಲಿ ಹೊಸದೇನೂ ಇಲ್ಲ. ಎಸ್ಸಿ, ಎಸ್ಟಿ ಸಮಾಜದವರು ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಜಾಸ್ತಿ ಇದ್ದಾರೆ. ಸೈನಿಕರನ್ನು ಲೀಡ್‌ ಮಾಡುವ ಕ್ಯಾಪ್ಟನ್‌ ಇಲ್ಲ. ಕ್ಯಾಪ್ಟನ್‌ ಪಾತ್ರಗಳನ್ನು ರೆಡಿ ಮಾಡಬೇಕಿದೆ. ಹೈಕಮಾಂಡ್‌ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ. ಈ ಕುರಿತು ಲೋಕಸಭೆ ಚುನಾವಣೆ ನಂತರ ದಲಿತ ಸಿಎಂ ಬಗ್ಗೆ ದನಿ ಎತ್ತುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಚುನಾವಣೆ ಬಳಿಕ ದೊಡ್ಡ ಬೇಡಿಕೆಗೆ ಈಗಲೇ ಮುನ್ನುಡಿ ಬರೆದಿದ್ದಾರೆ.

ಇದನ್ನೂ ಓದಿ : ಲೋಕಸಭಾ ಸಮರ : ಸ್ಕ್ರೀನಿಂಗ್ ಸಮಿತಿ ಸಭೆಯ ನಂತರ ಹೆಚ್ಚಿನ ಅಭ್ಯರ್ಥಿಗಳು ಹೆಸರುಗಳನ್ನು ಅಂತಿಮಗೊಳಿಸಲಾಗುವುದು : ಡಿ. ಕೆ. ಶಿವಕುಮಾರ್