Interesting fact: ಹೈವೆಗಳ ಡಿವೈಡರ್ ಮೇಲೆ ಇದೊಂದು ಹೂವಿನ ಗಿಡವನ್ನು ಮಾತ್ರ ಬೆಳೆಯೋದೇಕೆ ಗೊತ್ತಾ?! ಇಲ್ಲಿದೆ ನೋಡಿ ಅಚ್ಚರಿ ಸಂಗತಿ!!
Intresting fact: ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಗಳಲ್ಲಿ ಓಡಾಡುವಾಗ ಮಧ್ಯದ ಡಿವೈಡರ್ ನಲ್ಲಿ ನೆಟ್ಟಿರೋ ಹೂವಿನ ಗಿಡಗಳು, ಅದರ ಹೂವುಗಳು ಪ್ರಯಾಣಕ್ಕೆ ಏನೋ ಒಂದು ಮುದ ನೀಡುತ್ತವೆ. ಅದು ನೋಡಲೂ ಕೂಡ ಸೊಬಗು. ಆದರೆ ಎಲ್ಲಾ ಹೆದ್ದಾರಿಗಳ ಡಿವೈಡರ್ ಗಳಲ್ಲೂ ಗುಲಾಬಿ ಬಣ್ಣದ ಹೂ ಬಿಡುವ ಬರೀ ಕಣಗಿಲೆ ಗಿಡವನ್ನು ಮಾತ್ರ ನೆಡಲಾಗಿರುತ್ತೆ. ಯಾಕೆ ಗೊತ್ತಾ? ಇದು ಹಲವರ ಪ್ರಶ್ನೆ. ಹಾಗಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ: Prime minister: ನರೇಂದ್ರ ಮೋದಿ ಮುಂದೆ ಎಷ್ಟು ವರ್ಷ ಪ್ರಧಾನಿ ಆಗಿರ್ತಾರೆ ಗೊತ್ತಾ? ಅಮಿತ್ ಶಾ ಕೊಟ್ರು ಬಿಗ್ ಅಪ್ಡೇಟ್
ಹೈವೆಗಳ(Highway)ಮಧ್ಯದಲ್ಲಿರುವ ಡಿವೈಡರ್ಗಳಲ್ಲಿ ಕೇವಲ ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಕಣಗಿಲೆ ಸಸ್ಯವನ್ನೇ ಏಕೆ ನೆಡುತ್ತಾರೆ ಎಂದರೆ ನಗರಗಳಲ್ಲಿನ ಹೆದ್ದಾರಿಗಳಲ್ಲಿ ಪ್ರತಿಕ್ಷಣವೂ ವಾಹನಗಳೂ ಓಡಾಡುತ್ತಲೇ ಇರುತ್ತವೆ. ಈ ವಾಹನಗಳಿಂದ ಹೊರಸೂಸುವ ಹೊಗೆಯು ಬಹಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಈ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಶುದ್ಧವಾದ ಆಮ್ಲಜನಕವನ್ನು ನೀಡುವ ಸಾಮರ್ಥ್ಯ ಈ ಸಸ್ಯಕ್ಕಿದೆ.
ಅಂದರೆ ಈ ಸಸ್ಯದ ಎಲೆಗಳು ಮತ್ತು ಹೂವುಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದಲ್ಲದೆ ವಾಯುವಿನ ಮಾಲೀನ್ಯಕಾರಕಗಳನ್ನು ತೆಗೆದುಹಾಕುವ ಮೂಲಕ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ ಹೆದ್ದಾರಿಯಲ್ಲಿ ಪ್ರಯಾಣಿಸುವರು ಶುದ್ಧ ಗಾಳಿಯನ್ನು ಉಸಿರಾಡಬಹುದು. ಇಷ್ಟೇ ಅಲ್ಲದೆ ಒಣ ಪ್ರದೇಶದಲ್ಲೂ ಸೊಂಪಾಗಿ ಬೆಳೆಯುವ ಈ ಸಸ್ಯಗಳಿಗೆ ಅಷ್ಟಾಗಿ ನೀರು, ಗೊಬ್ಬರ ಇತ್ಯಾದಿ ನಿರ್ವಹಣೆಯ ಅಗತ್ಯವಿಲ್ಲ. ಇದೇ ಕಾರಣಕ್ಕೆ ಹೆದ್ದಾರಿಗಳಲ್ಲಿ ಈ ಸಸ್ಯವನ್ನೇ ಹೆಚ್ಚಾಗಿ ನೆಡಲಾಗುತ್ತದೆ.