Bengaluru: ಬಿಸಿಲ ಧಗೆ ಹೆಚ್ಚಳ, ನೀರಿಗಾಗಿ ಹಾಹಾಕಾರ; ಬೆಂಗಳೂರಿನಲ್ಲಿ ಹೊಸ ನಿಯಮ- ಒಬ್ಬರಿಗೆ ಒಂದೇ ಕ್ಯಾನ್ ನೀರು
Bengaluru: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಧಗೆ ಹೆಚ್ಚಾಗಿದೆ. ಜೊತೆ ಜೊತೆಗೆ ನೀರಿನ ಹಾಹಾಕಾರ ಕೂಡಾ ಉಂಟಾಗಿದೆ. ಈ ಬಾರಿ ಬೇಸಿಗೆಗೆ ಕೂಡಾ ಕುಡಿಸಯುವ ನೀರಿನ ಸಮಸ್ಯೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದೆ. ಇದರ ಮಧ್ಯೆ ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ನೀಡಲಾಗುತ್ತಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ: Tamilnadu: ಮಾಜಿ ಸಿಎಂ ಜಯಲಲಿತಾ ಆಸ್ತಿ ಪ್ರಕರಣ; ಚಿನ್ನಾಭರಣ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ
ಬೋರ್‌ವೆಲ್‌ನಲ್ಲಿ ನೀರಿಲ್ಲ, ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ. ಟ್ಯಾಕರ್ ನೀರಿನ ಬೆಲೆ ದುಬಾರಿಯಾಗಿದೆ. ಇದರಿಂದ ಬಹುತೇಕ ಮಂದಿ ನೀರಿಗಾಗಿ ಮುಗಿ ಬೀಳುತ್ತಿದ್ದಾರೆ. ಇದೀಗ ನೀರಿನ ಅಭಾವದ ಜೊತೆಗೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮವೊಂದು ಶುರುವಾಗಿದೆ. ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂದು ನೀಡಲಾಗುತ್ತಿದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್‌ಒ ಪ್ಲಾಂಟ್‌ನಲ್ಲಿ ಈ ಬೋರ್ಡ್ ಕಾಣಸಿಗುತ್ತಿದೆ.
ಈಗಾಗಲೇ ಕೆಲವು ಕಡೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ನೀರು ಬಿಡಲಾಗುತ್ತಿತ್ತು. ಇದೀಗ ಎರಡು ಗಂಟೆ ಬೆಳಗ್ಗೆ ಸಂಜೆ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಆರ್‌ಓ ಪ್ಲಾಂಟ್ ನೀರಿನಲ್ಲದೆ ಬಂದ್ ಆಗಿರುವ ಕುರಿತು ಕೂಡಾ ವರದಿಯಾಗಿದೆ.